ಕಮಲ್ ಹಾಸನ್ ದಕ್ಷಿಣ ಭಾರತದ ಗ್ರೇಟ್ ಕಲಾವಿದ ಅನ್ನೋದು ಗೊತ್ತೇ ಇದೆ. ಕಮಲ್ ಹಾಸನ್ ಅವರನ್ನ ಕಲಾದೇವಿಯ ಪುತ್ರ ಅಂತಲೂ ಬಣ್ಣಿಸುತ್ತಾರೆ. ಕಲೆಯನ್ನ ಅಷ್ಟೊಂದು ಆಳವಾಗಿಯೇ ಕಮಲ್ ಹಾಸನ್ ತಿಳಿದುಕೊಂಡಿದ್ದಾರೆ. ಆಯಾ ಪಾತ್ರಕ್ಕೆ ಬೇಕಿರೋ ರೀತಿನೇ ತಯಾರಿ ಮಾಡಿಕೊಂಡು ನೈಜವಾಗಿಯೇ ಆಯಾ ಪಾತ್ರವೇ ಆಗುತ್ತಾರೆ. ಇದಕ್ಕೆ ದಶಾವತಾರಂ ಚಿತ್ರವೊಂದು ಸಾಕ್ಷಿ ಆಗಿಯೇ ನಿಲ್ಲುತ್ತದೆ. ಅಂತಹ ಈ ನಾಯಕನನ್ನ ಉಲಗನಾಯಗನ್ ಅಂತಲೇ ಕರೆಯುತ್ತಾರೆ. ವಿಶ್ವದ ಹೀರೋ ಅನ್ನೋ ಅರ್ಥ ಬರೋ ಈ ಒಂದು ಪದ ಅದ್ಯಾಕೋ ಕಮಲ್ಗೆ ಬೇಡ ಅನಿಸುತ್ತಿದೆ. ಇದರ ಅರ್ಥ ತುಂಬಾನೆ ದೊಡ್ಡದಾಗಿದೆ. ನನ್ನ ಹೀಗೆ ಕರೀಬೇಡಿ ಅಂತಲೇ ಇದೀಗ ರಿಕ್ವೆಸ್ಟ್ ಮಾಡುತ್ತಿದ್ದಾರೆ. ಒಂದು ಪತ್ರವನ್ನೂ ಈ ಹಿನ್ನೆಲೆಯಲ್ಲಿ ಬರೆದಿದ್ದಾರೆ.
ನನ್ನ ಹಾಗೆ ಕರೀಬೇಡಿ
ಕಮಲ್ ಹಾಸನ್ ಈ ಒಂದು ರಿಕ್ವೆಸ್ಟ್ ಮಾಡಿದ್ದಾರೆ. ಉಲಗನಾಯಗನ್ ಅಂತ ನನ್ನ ಕರೀಬೇಡಿ. ನನ್ನ ಕಮಲ್ ಹಾಸನ್ ಅಂದ್ರೆ ಸಾಕು. ಕಮಲ್ ಅಂದ್ರೂ ನಡೆಯುತ್ತದೆ. KH ಅಂತ ಕರೆದ್ರೂ ಪರವಾಗಿಲ್ಲ. ಆದರೆ, ಉಲಗನಾಯಕನ್ ಅಂತ ಪಾತ್ರ ಕರೆಯಬೇಡಿ ಅಂತಲೇ ಕಮಲ್ ಹಾಸನ್ ಮನವ ಮಾಡಿಕೊಂಡಿದ್ದಾರೆ.
ಕಮಲ್ ಹಾಸನ್ ಇದನ್ನ ಹೇಳೋಕೆ ಒಂದು ಪತ್ರವನ್ನೆ ಬರೆದಿದ್ದಾರೆ. ಇಂಗ್ಲೀಷ್ ಬರೆದ ಈ ಒಂದು ಪತ್ರದಲ್ಲಿ ಕಮಲ್ ತುಂಬಾನೆ ಒಳ್ಳೆಯ ವಿಷಯ ಹೇಳಿಕಂಡಿದ್ದಾರೆ. ಕಲೆ ಅನ್ನೋದು ಎಲ್ಲವನ್ನೂ ಮೀರಿದ್ದಾಗಿದೆ. ಕಲೆಯನ್ನ ಮೀರಿ ಕಲಾವಿದ ಇರೋದೇ ಇಲ್ಲ. ಆತ ಯಾವಾಗಲೂ ಕಲಾವಿದನೇ ಆಗಿರುತ್ತಾನೆ ಅಂತಲೂ ಹೇಳಿದ್ದಾರೆ.
ಕಲೆಯಿಂದಲೇ ಕಲಾವಿದ
ಕಲೆಯಿಂದಲೇ ಒಬ್ಬ ಕಲಾವಿದ ಸೃಷ್ಟಿ ಆಗಿತ್ತಾನೆ. ಹೊರತು ಕಲಾವಿದನಿಂದಲೇ ಕಲೆ ಇರೋದಿಲ್ಲ. ಹಾಗೆ ಒಬ್ಬ ಕಲಾವಿದ ತನ್ನತಾನೇ ಉದ್ಭವ ಆಗಿರೋದಿಲ್ಲ. ಬದಲಾಗಿ, ಟೆಕ್ನಿಷನ್ಗಳಿರುತ್ತಾರೆ. ಅಸಂಖ್ಯೆ ಕಲಾವಿದರು ಇರ್ತಾರೆ. ಅದಕ್ಕೂ ಹೆಚ್ಚಾಗಿ ಅಲ್ಲಿ ಪ್ರೇಕ್ಷಕ ಪ್ರಭುಗಳೂ ಇರುತ್ತಾರೆ. ಇವರೆಲ್ಲ ಒಟ್ಟು ಪರಿಶ್ರಮದಿಂದಲೇ ಒಬ್ಬ ನಾಯಕ ಹುಟ್ಟಿಕೊಳ್ಳುತ್ತಾರೆ. ಹಾಗಾಗಿಯೇ ನನಗೆ ಉಲಗನಾಯಗನ್ ಅಂತ ಕರೆದ್ರೆ ಎಷ್ಟು ಸರಿ? ಈ ಅರ್ಥ ಬರೋ ಹಾಗೇನೆ ಕಮಲ್ ಹಾಸನ್ ಈ ಒಂದು ಪತ್ರದಲ್ಲಿ ಬರೆದುಕೊಂಡಿದ್ದಾರೆ ಅಂತಲೂ ಹೇಳಬಹುದು.
ಡೌನ್ ಟು ಅರ್ಥ ಇರಲು ಬಯಸುವೆ
ಕಮಲ್ ಹಾಸನ್ ಪ್ರತಿಭೆಗೆ ಸಾಟಿ ಇಲ್ವೇ ಇಲ್ಲ. ಹಾಗಂತ ಕಮಲ್ ಎಂದೂ ಮಹಾನ್ ನಟನ ರೀತಿ ವರ್ತಿಸಿಯೇ ಇಲ್ಲ. ಹೊಸದನ್ನ ಕಲಿಯುತ್ತಲೇ ಇರುತ್ತಾರೆ. ಹೊಸ ಹುಡುಗರಿಂದ ಕಲಿಯುತ್ತಲೇ ಇರ್ತಾರೆ. ಹಾಗಾಗಿಯೇ ತಮ್ಮನ್ನ ತಾವು ಕಮಲ್ ಹಾಸನ್ ಗ್ರೌಂಡೆಡ್ ಆಗಿಯೇ ಉಳಿಸಿಕೊಂಡಿದ್ದಾರೆ.
ಹಾಗೆ ಹೇಳುವ ಕಮಲ್ ಹಾಸನ್ ಹೊಸತನಕ್ಕೆ ತುಡಿಯುತ್ತಲೇ ಇರ್ತಾರೆ. ಜೊತೆಗೆ ಇದೀಗ ತಮ್ಮನ್ನ ಪ್ರೀತಿಸೋ ಅಭಿಮಾನಿಗಳಿಗೆ, ಮಾಧ್ಯಮ ಮಿತ್ರರಿಗೆ ನನ್ನ ಉಲಗನಾಯಗನ್ ಅಂತ ಕರೀಯಬೇಡಿ. ಆ ರೀತಿ ಬರೆಯಲೂ ಬೇಡಿ ಅಂತಲೇ ರಿಕ್ವೆಸ್ಟ್ ಮಾಡಿದ್ದಾರೆ. ಈ ಒಂದು ಮನವಿ ಕೂಡ ಕಮಲ್ ಹಾಸನ್ ಎಷ್ಟು ಮಹಾನ್ ಅನ್ನೋದನ್ನ ತೋರಿಸಿಕೊಡುತ್ತಿದೆ ಅಂತಲೂ ಹೇಳಬಹುದು.