ದುನಿಯಾ ವಿಜಯ್ ಅಭಿನಯದ ಸಿನಿಮಾಗಳು ಕರ್ನಾಟಕ ಬಿಟ್ಟು ಹೊರಡಗೆ ರಿಲೀಸ್ ಆಗಿರೋದು ಕಡಿಮೇನೆ ನೋಡಿ. ಆದರೆ, ಭೀಮ ಸಿನಿಮಾ ವಿಚಾರದಲ್ಲಿ ಎಲ್ಲವೂ ಬದಲಾಗಿದೆ. ಭೀಮ ಚಿತ್ರದ ಬಗ್ಗೆ ಇನ್ನಿಲ್ಲದ ಒಂದು ದೊಡ್ಡ ಹೋಪ್ ಇಂಡಸ್ಟ್ರಿಯಲ್ಲಿ ಕ್ರಿಯೇಟ್ ಆಗಿದೆ. ಇದರಿಂದ ಬೇಡಿಕೆನೂ ಜಾಸ್ತಿ ಆಗಿದೆ. ಇದನ್ನೆಲ್ಲ ಮೀರಿ ಕನ್ನಡದ ಭೀಮ ಸಿನಿಮಾ ಸಾಗರೋತ್ತದಲ್ಲೂ ರಿಲೀಸ್ ಆಗುತ್ತಿದೆ.
ದೇಶದ-ವಿದೇಶದಲ್ಲೂ ಭೀಮ ಸಿನಿಮಾ ರಿಲೀಸ್.!
ಕರ್ನಾಟಕದಲ್ಲಿ ಭೀಮ ಸಿನಿಮಾ 400 ಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ರಿಲೀಸ್ ಆಗುತ್ತಿದೆ. ಈ ಚಿತ್ರದ ರಿಲೀಸ್ ಗಾಗಿಯೇ ಕ್ಲೋಸ್ ಆಗಿರೋ 18 ಥಿಯೇಟರ್ಗಳು ರೀ-ಓಪನ್ ಆಗುತ್ತಿದೆ. ಹಾಗಾಗಿಯೇ ಆಗಸ್ಟ್-9 ರಂದು ಭೀಮ ಅಬ್ಬರ ಬಲು ಜೋರಾಗಿಯೇ ಇರುತ್ತದೆ. ಭೀಮನ ಅಭಿಮಾನಿಗಳು ದೊಡ್ಡ ಹಬ್ಬ ಮಾಡೋಕು ಇದೀಗ ರೆಡಿ ಆಗುತ್ತಿದ್ದಾರೆ. ಭೀಮ ಚಿತ್ರದ ರಾಜ್ಯದ ಎಲ್ಲ ಏರಿಯಾ ಸೇಲ್ ಆಗಿವೆ. ನಿರ್ಮಾಪಕ ಜಗದೀಶ್ ಅವರೇ ಈ ಒಂದು ವಿಚಾರವನ್ನ ಹೇಳಿಕೊಂಡಿದ್ದಾರೆ. ಇದರ ಜೊತೆಗೆ ಇನ್ನೂ ಒಂದು ಮಾಹಿತಿಯನ್ನ ಕೂಡ ನಿರ್ಮಾಪಕರು ಹೇಳಿಕೊಡಿದ್ದರು. ಅದು ಹೊರ ದೇಶದಲ್ಲಿ ಕನ್ನಡದ ಭೀಮ ಚಿತ್ರ ರಿಲೀಸ್ ಆಗೋ ಮ್ಯಾಟರ್ ಆಗಿತ್ತು. ಭೀಮ ಚಿತ್ರವನ್ನ ಭಾರತದೆಲ್ಲೆಡೆ ಆಗಸ್ಟ್ 9 ರಂದು ರಿಲೀಸ್ ಮಾಡಲಾಗುತ್ತಿದೆ. ಇದರ ಜೊತೆಗೆ ಸಾಗರೋತ್ತರದಲ್ಲೂ ಕನ್ನಡದ ಭೀಮನ ಅಬ್ಬರ ಇರುತ್ತದೆ. ಹೀಗೆ ಕನ್ನಡದ ಚಿತ್ರವನ್ನ ಬೇರೆ ಬೇರೆ ರಾಜ್ಯಗಳಿಗೆ, ಬೇರೆ ಬೇರೆ ದೇಶಗಳಿಗೆ ತಲುಪಿಸೋ ಕೆಲಸವನ್ನ KRG ಸಂಸ್ಥೆ ಮಾಡುತ್ತಿದೆ.
ಇದನ್ನ ಅಧಿಕೃತವಾಗಿಯ ಇದೀಗ ಈ ಸಂಸ್ಥೆ ಹೇಳಿಕೊಂಡಿದೆ. ಹಾಗೇನೆ ನಿರ್ಮಾಪಕ ಜಗದೀಶ್ ಕೂಡ ಹೇಳಿಕೊಂಡಿದ್ದರು. ಆ ಲೆಕ್ಕದಂತೆ ಇದೀಗ ಕನ್ನಡದ ಭೀಮ ಕನ್ನಡದಲ್ಲಿಯೇ ಎಲ್ಲೆಡೆ ರಿಲೀಸ್ ಆಗುತ್ತಿದೆ. ಈ ಮೂಲಕ ಭೀಮ ಚಿತ್ರ ದೊಡ್ಡಮಟ್ಟದಲ್ಲಿಯೇ ಎಲ್ಲಾ ಕಡೆಗೆ ರಿಲೀಸ್ ಆಗುತ್ತಿದೆ ಅಂತಲೂ ಹೇಳಬಹುದು. ಭೀಮ ಸಿನಿಮಾದ ಒಂದು ದೊಡ್ಡ ಇವೆಂಟ್ ಪ್ಲಾನ್ ಆಗುತ್ತಿದೆ. ಆಗಸ್ಟ್ ಮೊದಲ ವಾರದಲ್ಲಿಯೇ ಈ ಒಂದು ಕಾರ್ಯಕ್ರಮ ಪ್ಲಾನ್ ಆಗಿದೆ. ಈ ವಿಷಯವನ್ನ ಮೊನ್ನೆಯ ಪ್ರೆಸ್ ಮೀಟ್ನಲ್ಲಿಯೇ ದುನಿಯಾ ವಿಜಯ್ ಹೇಳಿಕೊಂಡಿದ್ದಾರೆ. ಈ ಮೂಲಕ ಆ ದಿನ ಎಲ್ಲರೂ ಬರಬೇಕು ಅಂತ ಮಾಧ್ಯಮದ ಮುಖಾಂತರ ಕೇಳಿಕೊಂಡಿದ್ದಾರೆ ಅಂತಲೂ ಹೇಳಬಹುದು.