ದುನಿಯಾ ವಿಜಯ್ ನಟಿಸಿ, ನಿರ್ದೇಶನ ಮಾಡಿರುವ ‘ಭೀಮ’ ಸಿನಿಮಾ ಆಗಸ್ಟ್ 09 ರಂದು ಬಿಡುಗಡೆ ಆಗಲಿದೆ. ಸಿನಿಮಾದ ವೀಕ್ಷಣೆಗೆ ಸಿದ್ದರಾಮಯ್ಯ ಅವರನ್ನು ದುನಿಯಾ ವಿಜಯ್ ಆಹ್ವಾನಿಸಿದ್ದಾರೆ. ‘ಭೀಮ’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ನಿರತರಾಗಿರುವ ನಟ, ನಿರ್ದೇಶಕ ದುನಿಯಾ ವಿಜಯ್, ಸಿಎಂ ಸಿದ್ದರಾಮಯ್ಯ ಅವರನ್ನು ಇಂದು ಭೇಟಿಯಾಗಿದ್ದಾರೆ. ಆಗಸ್ಟ್ 9 ರಂದು ತಮ್ಮ ‘ಭೀಮ’ ಸಿನಿಮಾ ಬಿಡುಗಡೆ ಆಗುತ್ತಿದ್ದು, ಸಿನಿಮಾ ನೋಡಲು ಸಿದ್ದರಾಮಯ್ಯ ಅವರನ್ನು ದುನಿಯಾ ವಿಜಯ್ ಆಹ್ವಾನಿಸಿದ್ದಾರೆ. ಸಿದ್ದರಾಮಯ್ಯ ಅವರು ಸಹ ದುನಿಯಾ ವಿಜಯ್ರ ಆಹ್ವಾನವನ್ನು ಮನ್ನಿಸಿ, ಸಿನಿಮಾ ನೋಡುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.
ಕಳೆದ ವರ್ಷ ನಡೆದಿದ್ದ ‘ಭೀಮ’ ಸಿನಿಮಾಕ್ಕೆ ಸಂಬಂಧಿಸಿದ ಕಾರ್ಯಕ್ರಮವೊಂದರಲ್ಲಿಯೂ ಸಿದ್ದರಾಮಯ್ಯ ಭಾಗಿ ಆಗಿದ್ದರು. ಅದಕ್ಕೂ ಮುಂಚೆ ‘ಸಲಗ’ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಬ್ಬರೂ ಭಾಗಿಯಾಗಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ತಮ್ಮನ್ನು ಸಿದ್ದರಾಮಯ್ಯ ಅಭಿಮಾನಿ ಎಂದು ದುನಿಯಾ ವಿಜಯ್ ಹೇಳಿಕೊಳ್ಳುತ್ತಾರೆ. ಸಿದ್ದರಾಮಯ್ಯ ಅವರೊಟ್ಟಿಗೆ ಉತ್ತಮ ನಂಟನ್ನು ದುನಿಯಾ ವಿಜಯ್ ಹೊಂದಿದ್ದಾರೆ. ಈ ಕಾರಣದಿಂದಾಗಿ ಸಿನಿಮಾ ನೋಡಲು ಸಿದ್ದರಾಮಯ್ಯ ಅವರನ್ನು ದುನಿಯಾ ವಿಜಯ್ ಭೇಟಿ ಮಾಡಿದ್ದಾರೆ.