ಕಿಚ್ಚ ಸುದೀಪ್ ಅವರ ತಾಯಿ ಇಂದು ಬೆಳಗ್ಗೆ ಅನರೋಗ್ಯದಿಂದ ನಿಧನರಾಗಿದ್ದಾರೆ. ಈ ಹಿನ್ನೆಲೆ ನಟ ದುನಿಯಾ ವಿಜಯ್ & ಟೀಮ್ ಮೌನ ಆಚರಿಸಿ ಸುದೀಪ್ ತಾಯಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ನಿರ್ದೇಶಕ ಜಡೇಶ್ ಜೊತೆ ಚಿತ್ರೀಕರಣದಲ್ಲಿ ಬ್ಯುಸಿಯಿರುವ ದುನಿಯಾ ವಿಜಯ್ ಅವರು ನಿಧನರಾಗಿರೋ ಸುದೀಪ್ ತಾಯಿ ಸರೋಜಾ ಅವರಿಗೆ ಚಿತ್ರದ ಸೆಟ್ನಲ್ಲಿ ಮೌನಾಚರಣೆ ಮಾಡಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಇಡೀ ದುನಿಯಾ ವಿಜಯ್ & ಟೀಮ್ ಸರೋಜಾ ಅವರ ನಿಧನಕ್ಕೆ ಸಂತಾಪ ಸೂಚಿಸಿದೆ.
ಅಂದಹಾಗೆ, ಅನಾರೋಗದ್ಯದ ಹಿನ್ನೆಲೆ ಸುದೀಪ್ ತಾಯಿ ಸರೋಜಾ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದಿದ್ದಾರೆ. ಇಂದು ಬೆಳಗ್ಗೆ 07:04ಕ್ಕೆ ನಿಧನ ಆಗಿರೋ ಮಾಹಿತಿ ಲಭಿಸಿದೆ. ಸದ್ಯ ಜೆಪಿ ನಗರದ ಸುದೀಪ್ ನಿವಾಸದಲ್ಲಿ ಅವರ ತಾಯಿಯ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗಿದೆ. ಬಳಿಕ ಸಂಜೆ 5 ಗಂಟೆಗೆ ವಿಲ್ಸನ್ ಗಾರ್ಡನ್ನಲ್ಲಿರುವ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ಮಾಡಲಾಗಿದೆ.