ಜಪಾನ್ ನ ಕ್ಯೂಶು ಪ್ರದೇಶದ ಮಿಯಾಝಾಕಿ ಪ್ರಾಂತ್ಯದ ಕರಾವಳಿಯಲ್ಲಿ ರಿಕ್ಟರ್ ಮಾಪಕದಲ್ಲಿ 7.1 ತೀವ್ರತೆಯ ಪ್ರಭಲ ಭೂಕಂಪವು ಸಂಭವಿಸಿದೆ . ಭೂಕಂಪನ ಜೊತೆಗೆ ಸುನಾಮಿ ಎಚ್ಚರಿಕೆ ನೀಡಲಾಗಿದ್ದು, ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಸೂಚಿಸಲಾಗಿದೆ.
ಜಪಾನಿನ ಕ್ಯೂಶು ದ್ವೀಪದಾದ್ಯಂತ ಭೂಕಂಪನ ಅನುಭವವಾಗಿದ್ದು ನಿವಾಸಿಗಳಲ್ಲಿ ಆತಂಕ ವ್ಯಕ್ತವಾಗಿದೆ. ಜನರನ್ನುಎತ್ತರದ ಪ್ರದೇಶಗಳಿಗೆ ತೆರಳಲು ಮತ್ತು ಹೆಚ್ಚಿನ ನವೀಕರಣಗಳಿಗಾಗಿ ಜಾಗರೂಕರಾಗಿರಲು ಅಧಿಕಾರಿಗಳು ಒತ್ತಾಯಿಸುತ್ತಿದ್ದಾರೆ. ತುರ್ತು ಸೇವೆಗಳು ಹೆಚ್ಚಿನ ಎಚ್ಚರಿಕೆ ವಹಿಸಿದೆ ಮತ್ತು ಸ್ಥಳೀಯ ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.