ಬಾದಾಮಿ ಅನ್ನು ನ್ಯೂಟ್ರೀಷನ್ಗಳ ಪವರ್ ಹೌಸ್ ಅಂತಲೇ ಕರೆಯುತ್ತಾರೆ. ದೇಹಕ್ಕೆ ಪೋಷಕಾಂಶಗಳ ಅಗತ್ಯ ತುಂಬಾ ಇದೆ. ಪೋಷಕಾಂಶಗಳು ಇರುವ ಆಹಾರ ಹಾಗೂ ಧಾನ್ಯಗಳ ಸೇವನೆಯಿಂದ ಮನುಷ್ಯನ ಆರೋಗ್ಯ ಸದೃಢವಾಗಿರುತ್ತದೆ. ಅದರಲ್ಲಿ ಬಾದಾಮ್ ಅಂತೂ ಪೋಷಕಾಂಶಗಳ ಶಕ್ತಿ ಕೇಂದ್ರ ಅಂತಲೇ ಕರೆಸಿಕೊಳ್ಳುತ್ತದೆ.
ನಿತ್ಯ ಬಾದಾಮಿ ಸೇವನೆಯಿಂದ ಆರೋಗ್ಯಕ್ಕೆ ಸಾಕಷ್ಟು ಉಪಯೋಗವಿದೆ. ಹಾಗಂತ ಬೇಕಾ ಬಿಟ್ಟಿ ತಿಂದರೂ ಕೂಡ ಆರೋಗ್ಯದ ಮೇಲೆ ತೀವ್ರ ಪರಿಣಾಮವೂ ಬೀರಲಿದೆ. ಹೀಗಾಗಿ ಪರಿಣಿತರು ಹೇಳುವ ಪ್ರಕಾರ ದಿನಕ್ಕೆ 2-3 ಬಾದಾಮ್ ತಿನ್ನುವುದು ಸರಿಯಾದ ಕ್ರಮ. ಅದು ಕೂಡ 18 ವರ್ಷ ಮೇಲ್ಪಟ್ಟವರು ದಿನಕ್ಕೆ 2-3ಬಾದಾಮ್ ತಿನ್ನುವುದರಿಂದ ಆರೋಗ್ಯಲ್ಲಿ ಸದೃಢತೆ ಬರಲಿದೆ ಎಂದು ಹೇಳುತ್ತಾರೆ.
2-3 ಬಾದಾಮೇ ಏಕೆ..?
ದಿನಕ್ಕೆ 2-3 ಬಾದಾಮ್ ತಿನ್ನುವುದರಿಂದ ದೇಹಕ್ಕೆ ಉತ್ತಮ ಪೋಷಕಾಂಶವನ್ನು ನೀಡಿದಂತಾಗುತ್ತದೆ. ನಮ್ಮ ದೇಹಕ್ಕೆ ಬೇಕಾಗುಷ್ಟು ಮಾತ್ರ ನಾವು ಆರೋಗ್ಯಕರ ಆಹಾರವನ್ನು ಸೇವನೆ ಮಾಡಬೇಕು. ಅತಿಯಾದ್ರೆ ಅಮೃತವೂ ವಿಷ ಅಂತಾರೆ ಹೀಗಾಗಿ ನಮ್ಮ ದೇಹಕ್ಕೆ ಸರಿಯಾದ ಪ್ರಮಾಣದ ಆಹಾರ ಸರಿಯಾದ ಸಮಯದಲ್ಲಿ ನೀಡುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಹೀಗಾಗಿ ಬಾದಾಮಿ ವಿಚಾರಕ್ಕೆ ಬಂದಾಗ, ದಿನಕ್ಕೆ ಕನಿಷ್ಠ 30 ಗ್ರಾಮ್ ಬಾದಾಮ್ ತಿನ್ನುವುದು ಯೋಗ್ಯ ಎಂದು ಹೇಳಲಾಗುತ್ತದೆ. ಅಂದ್ರೆ ಒಟ್ಟು 2-3 ಬಾದಾಮ್ಗಳು 30 ಗ್ರಾಮ್ಗೆ ಸಮವಾಗುತ್ತವೆ ಎನ್ನುವುದು ನ್ಯೂಟ್ರೂಷಿಯನಿಷ್ಟ್ಗಳು ಕಂಡುಕೊಂಡಿರುವ ಸತ್ಯ.
ಭಾರತದಲ್ಲಿ ಸಾಮಾನ್ಯವಾಗಿ ಬಾದಾಮಿಗಳನ್ನು ಹಿಂದಿನ ದಿನ ರಾತ್ರಿ ನೀರಿನಲ್ಲಿ ಇಲ್ಲವೇ ಹಾಲಿನಲ್ಲಿ ನೆನೆಸಿಟ್ಟು ಬೆಳಗ್ಗೆಯೆದ್ದು ತಿನ್ನುವುದು ವಾಡಿಕೆ ಇದೆ. ಯಾಕಂದ್ರೆ ಬಾದಾಮಿ ದೇಹಕ್ಕೆ ತುಂಬಾ ಹೀಟ್ ಅನ್ನುವುದನ್ನ ಆಯುರ್ವೇದ ಹೇಳುತ್ತದೆ. ಬಾದಾಮಿನ್ನು ನೇರವಾಗಿ ಸೇವಿಸುವುದರಿಂದ ದೇಹಕ್ಕೆ ಹೀಟ್ ಜಾಸ್ತಿ ಆಗಿ ಅದಕ್ಕೆ ಸಂಬಂಧಿಸಿದ ಕಾಯಿಲೆಗಳು ಬರುತ್ತವೆ ಎಂಬ ವಾದವಿದೆ.ಬಾದಾಮಿ ನೇರವಾಗಿ ಸೇವಿಸುವುದರಿಂದ ಅಜೀರ್ಣ, ಊರಿಯೂತದಂತಹ ಸಮಸ್ಯೆಗಳು ಕಾಣುತ್ತವೆ ಎಂದು ಆಯುರ್ವೇದ ಹೇಳುತ್ತದೆ. ಹೀಗಾಗಿ ದಿನಕ್ಕೆ 2-3 ಬಾದಾಮಿ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಸೇವಿಸುವುದರಿಂದ ದೇಹಕ್ಕೆ ಒಳ್ಳೆಯ ಪೋಷಕಾಂಶಗಳು ದೊರೆಯುತ್ತವೆ.
ನೇರವಾಗಿ ತಿನ್ನುವುದರಿಂದಲೂ ಇದೆ ಸಾಕಷ್ಟು ಲಾಭ
ನೆನೆಸಿಟ್ಟು ತಿನ್ನುವ ಬದಲು ನೇರವಾಗಿ ಸೇವಿಸುವುದರಿಂದಲೂ ಸಾಕಷ್ಟು ಲಾಭ ಇದೆ ಎಂದು ವೈದ್ಯರು ಹೇಳುತ್ತಾರೆ. ನೇರವಾಗಿ ಬಾದಾಮಿ ಜಾಸ್ತಿ ತಿಂದ್ರು ಅಪಾಯ ಕಟ್ಟಿಟ್ಟ ಬುತ್ತಿ ! ಸೇವನೆ ಮಾಡುವುದರಿಂದ ನ್ಯೂಟ್ರಿಷನ್ ಇನ್ನೂ ಹೆಚ್ಚು ನಮಗೆ ಸಿಗುತ್ತದೆ. ಅದರಲ್ಲೂ ಅದರ ರುಚಿ ಇನ್ನೂ ಹೆಚ್ಚು ಬೇಕೆನೆಸಿದಲ್ಲಿ ಹುರಿದು ತಿನ್ನುವುದಿಂದ ಹೆಚ್ಚು ಹೆಚ್ಚು ಆರೋಗ್ಯಕರ ಎಂದು ಕೂಡ ಹೇಳಲಾಗುತ್ತದೆ. ಆದ್ರೆ ಭಾರತದಲ್ಲಿ ಅತಿ ಹೆಚ್ಚು ಪ್ರಚಲಿತದಲ್ಲಿರೋದು ನೆನೆಸಿಟ್ಟು ತಿನ್ನುವ ಪದ್ಧತಿ. ಹೀಗಾಗಿ ಹೇಗೆ ತಿಂದರೂ ಬಾದಾಮಿ ಜಾಸ್ತಿ ತಿಂದ್ರು ಅಪಾಯ ಕಟ್ಟಿಟ್ಟ ಬುತ್ತಿ ! ಆರೋಗ್ಯದ ವಿಷಯದಲ್ಲಿ ಹೆಚ್ಚು ಲಾಭಕರ ಹೀಗಾಗಿ ತಪ್ಪದೇ ದಿನಕ್ಕೆ 23 ಬಾದಾಮ್ಗಳನ್ನು ತಿನ್ನುವ ರೂಢಿ ಮಾಡಿಕೊಳ್ಳಿ. ಇದು ನಿಮ್ಮನ್ನು ಅನೇಕ ರೋಗ ರುಜಿನೆಗಳಿಂದ ರಕ್ಷಿಸಬಲ್ಲ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.