ಚೈತ್ರಾ ಕುಂದಾಪುರ ಅವರು ಹೊರಗೆ ಸಾಕಷ್ಟು ಕಾರಣಕ್ಕೆ ಚರ್ಚೆಗೆ ಒಳಗಾದವರು. ಅವರು ಹೊರಗೆ ಸಾಕಷ್ಟು ಟೀಕೆ ಎದುರಿಸಬೇಕಾದ ಪರಿಸ್ಥಿತಿ ಇತ್ತು. ಆದರೆ, ದೊಡ್ಮನೆಯಲ್ಲಿ ಅವರ ಆಟ ಸಂಪೂರ್ಣ ಬದಲಾಗಿತ್ತು. ಅವರು ಏರು ಧ್ವನಿಯಲ್ಲಿ ಮಾತನಾಡುತ್ತಾ ಗಮನ ಸೆಳೆದರು. ಈಗ ಅವರು ಇಬ್ಬರ ಮಧ್ಯೆ ಜಗಳ ತಂದಿಟ್ಟು ಮಜ ತೆಗೆದುಕೊಂಡಿದ್ದಾರೆ.
ಧನರಾಜ್ ಹಾಗೂ ರಜತ್ ಮಧ್ಯೆ ನಾಮಿನೇಷನ್ ವಿಚಾರದಲ್ಲಿ ಜಗಳ ಆಗಿತ್ತು. ಅದು ಅಲ್ಲಿಗೆ ತಣ್ಣಗಾಗಿತ್ತು. ಆದರೆ, ಚೈತ್ರಾ ಇದನ್ನು ನೋಡಿ ಸುಮ್ಮನೆ ಉಳಿದಿಲ್ಲ. ಅವರು ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ. ಅವರು ಧನರಾಜ್ನ ಎತ್ತಿ ಕಟ್ಟಿದ್ದಾರೆ. ‘ನೀನು ಸುಮ್ಮನೆ ಇರಬಾರದು ಧನರಾಜ್ ಅಣ್ಣ. ಅವರು ಏನೇ ಹೇಳಿದರೂ ತಿರುಗೇಟು ಕೊಡಬೇಕು’ ಎಂದು ಧನರಾಜ್ಗೆ ಪಾಠ ಮಾಡಿದ್ದರು.
ಇದನ್ನು ಧನರಾಜ್ ಅವರು ಗಂಭೀರವಾಗಿ ಸ್ವೀಕರಿಸಿದ್ದಾರೆ. ಅವರು ರಜತ್ ವಿರುದ್ಧ ಸಿಡಿದೆದ್ದಿದ್ದಾರೆ. ರಜತ್ ಜೊತೆ ಮಾತಿನ ಸಮರಕ್ಕೆ ಇಳಿದಿದ್ದಾರೆ.