ಬಿಗ್ ಬಾಸ್ ಸೀಸನ್ 11ರ 11ನೇ ವಾರವೂ ಮುಗಿಯೋ ಹಂತಕ್ಕೆ ಬಂದಿದೆ. ಪ್ರತಿ ವಾರವೂ ಬಿಗ್ ಬಾಸ್ ಮನೆಯಲ್ಲಿ ಒಂದೊಂದು ಟ್ವಿಸ್ಟ್ ಇರಲೇಬೇಕು. ಈ ವಾರವೂ ಬಿಗ್ ಬಾಸ್ ಮನೆಯಲ್ಲಿ ಯಾರೂ ಊಹಿಸಿದ ಮೆಗಾ ಟ್ವಿಸ್ಟ್ ಕಾದಿದೆ. ಎಲಿಮಿನೇಷನ್ ಜೊತೆಗೆ ಬಿಗ್ಬಾಸ್ ಸ್ಪರ್ಧಿಗಳಿಗೆ ಶಾಕಿಂಗ್ ನ್ಯೂಸ್ ಕಾದಿದೆ.
ಸೀಸನ್ 11ರ ಆರಂಭದಲ್ಲಿ ಲಾಯರ್ ಜಗದೀಶ್ ಹಾಗೂ ರಂಜಿತ್ ಅವರ ಮಧ್ಯೆ ದೊಡ್ಡ ಜಗಳ ನಡೆದಿತ್ತು. ಹೊಡೆದಾಟ ಹಾಗೂ ದೈಹಿಕ ಹಲ್ಲೆ ಮಾಡಿದ ತಪ್ಪಿಗೆ ರಂಜಿತ್ ಹಾಗೂ ಜಗದೀಶ್ ಇಬ್ಬರೂ ಬಿಗ್ ಬಾಸ್ ಮನೆಯಿಂದ ಆಚೆ ಬಂದಿದ್ದರು. ಇದೀಗ ಮತ್ತೊಂದು ಜಗಳ ಬಿಗ್ ಬಾಸ್ ಮನೆಯಲ್ಲಿ ನಡೆದಿದೆ. ರಜತ್, ಧನರಾಜ್ ಮಧ್ಯೆ ಫೈಟ್ ಜೋರಾಗಿದೆ.
ರಜತ್ ಹಾಗೂ ಧನರಾಜ್ ಮಧ್ಯೆ ಜಗಳ ನಡೆದಿತ್ತು. ಧನರಾಜ್ಗೆ ಗುಗ್ಗು, ಪಾಪು ಅಂತೆಲ್ಲಾ ರಜತ್ ಬೈದಿದ್ದರು. ರಜತ್ ಕೆನ್ನೆಗೆ ತಟ್ಟಿ ಧನರಾಜ್ ಕೆಣಕಿದ್ದರು. ಕಳಪೆ ಕೊಡುವಾಗಲೂ ಧನರಾಜ್ – ರಜತ್ ನಡುವಿನ ಜಗಳ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು. ಈಗ ‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ರಜತ್ ಹಾಗೂ ಧನರಾಜ್.. ಇಬ್ಬರಿಗೂ ಸಖತ್ತಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ ಕಿಚ್ಚ ಸುದೀಪ್.
ಈ ವಾರದ ಕಿಚ್ಚನ ಪಂಚಾಯ್ತಿಯಲ್ಲಿ ಕಾನ್ಫಿಡೆನ್ಸ್ನಿಂದ ಆಡುತ್ತಿರುವ ಆಟಗಾರರನ್ನ ಬೆನ್ನು ತಟ್ಟಿ ಬೆಳೆಸುತ್ತೀವಿ ನಾವು. ಅದೇ ಕಾನ್ಫಿಡೆನ್ಸ್ ಅತಿಯಾಗಿ ದಿಕ್ಕು ತಪ್ಪಿದರೆ ಸ್ವಲ್ಪ ತಲೆ ಮೇಲೆ ತಟ್ಟಿ ಸೈಡಿಗೆ ಕೂರಿಸುತ್ತೇವೆ ಎಂದಿದ್ದಾರೆ. ಕಿಚ್ಚನ ಮಾತಿನಂತೆ ಈ ವಾರ ಬಿಗ್ ಬಾಸ್ ಮನೆಯಲ್ಲಿ ರಜತ್ ಹಾಗೂ ಧನರಾಜ್ ಮಧ್ಯೆ ದೊಡ್ಡ ಜಗಳವೇ ನಡೆದಿದೆ. ತಲೆ ಕೆಟ್ಟವನು ನಾನು, ತಾಕತ್ ಇದ್ರೆ ಹೊಡಿ ನೋಡೋಣ ಅನ್ನೋ ಸವಾಲು ಹಾಕಲಾಗಿದೆ. ಧನರಾಜ್ ಹಾಗೂ ರಜತ್ ಕೈ, ಕೈ ಮಿಲಾಯಿಸಿ ಆಟವಾಡಿದ್ದಾರೆ. ಇದು ಕಿಚ್ಚ ಸುದೀಪ್ ಅವರ ಕೆಂಗಣ್ಣಿಗೆ ಗುರಿಯಾಗಿದ್ದು, ಸಖತ್ ಟ್ವಿಸ್ಟ್ ಕೊಟ್ಟಿದ್ದಾರೆ.