ಬಿಗ್ ಬಾಸ್ ಮನೆಯಲ್ಲಿ ರಜತ್ ಆರ್ಭಟ ಜೋರಾಗಿದೆ. ರಜತ್ ಅವರ ಮಾತಿಗೆ ಮನೆಮಂದಿಯೇ ರೊಚ್ಚಿಗೆದ್ದಿದ್ದಾರೆ. ಹದ್ದು ಮೀರಿದ ವರ್ತನೆ ಕಂಡು ಮನೆ ಮಂದಿ ಶಾಕ್ ಆಗಿದ್ದಾರೆ. ಮಂಜು ಹಾಗೂ ರಜತ್ ನಡುವೆ ಜೋರು ಗಲಾಟೆ ಶುರುವಾಗಿದೆ.
ಚೆಂಡು ಸಾಗಲಿ ಮುಂದೆ ಹೋಗಲಿ ಎನ್ನುವ ಟಾಸ್ಕ್ ಬಿಗ್ ಬಾಸ್ ನೀಡಿದ್ದರು. ಚೈತ್ರಾ ಅವರು ಆಟದ ಉಸ್ತುವಾರಿ ವಹಿಸಿಕೊಂಡಿದ್ದರು. ಈ ವೇಳೆ ಚೈತ್ರಾ ಹಾಗೂ ರಜತ್ ನಡುವೆ ಮಾತಿನ ಚಕಮಕಿ ನಡೆದಿದೆ. ಟಿವಿಯಲ್ಲಿ ಗೇಮ್ ನೋಡಿಕೊಂಡು ಬಂದವರ ಕಥೆ ಇದೆ ಎಂದು ರಜತ್ ಅವರ ಬಗ್ಗೆಯೂ ಮಂಜು ಮಾತನಾಡಿದ್ದಾರೆ. ಈ ವೇಳೆ ಯೋಗ್ಯತೆಯ ಮಾತುಗಳು ಬಂದಿವೆ. ಮಂಜು ಅವರು ರಜತ್ ಅವರ ಮೈ ಮೇಲೆ ಹೋಗಿದ್ದಾರೆ.
ಚೈತ್ರಾ ಅವರ ಈ ಆಟ ರಜತ್ ಮತ್ತಷ್ಟು ಕೋಪ ಹೆಚ್ಚುವಂತೆ ಮಾಡಿದೆ. ಧನರಾಜ್ಗೆ ಆಟ ಆಡಲೇ ಬೇಡಿ ಎಂದು ತಡೆದ ರಜತ್ ಅವರು ಕರ್ನಾಟಕ ಖದರ್ ತಂಡದ ಸದಸ್ಯರ ಮೇಲೆ ಎಗರಿ, ಎಗರಿ ಬಿದ್ದಿದ್ದಾರೆ. ಆಟ ಆಡಿ ಗೆಲ್ಲೋಕೆ ಯೋಗ್ಯತೆ ಇಲ್ಲ ಎಂದು ರಜತ್ ಹೇಳಿದ್ದು, ಹೋಗಲೇ ಎಂದು ಚೈತ್ರಾ ತಿರುಗೇಟು ಕೊಟ್ಟಿದ್ದಾರೆ. ಇವರಿಬ್ಬರ ಮಧ್ಯೆ ಮಾತಿಗೆ ಮಾತು ಮುಂದುವರಿದಿದ್ದು, ತಾಯತ ಕಟ್ಟಿಸುತ್ತೇನೆ ಎಂದವರೆಲ್ಲಾ ತಾಯತ ಕಟ್ಟಿಸಿಕೊಂಡು ಹೋಗುತ್ತಾ ಇದ್ದಾರೆ ಎಂದು ಚೈತ್ರಾ ಹೇಳಿದ್ದಾರೆ.
ರಜತ್ ಹಾಗೂ ಚೈತ್ರಾ ಜಗಳದ ಮಧ್ಯೆ ಕರ್ನಾಟಕ ಖದರ್ ತಂಡದಲ್ಲಿರುವ ಮಂಜು ಅವರು ಮಧ್ಯಪ್ರವೇಶಿಸಿದ್ದಾರೆ. ಟಿವಿಯಲ್ಲಿ ಗೇಮ್ ನೋಡಿಕೊಂಡು ಬಂದವರದ್ದೆಲ್ಲಾ ಇದೇ ಕಥೆ ಎಂದು ಮಂಜು ಹೇಳಿದ್ದು, ನೀನೇನು ಸಾಚ ತರ ಬಂದು ಮಾತನಾಡುತ್ತಾ ಇದ್ದಿಯಾ. ಸಾಚ ಆಟಗಳನ್ನೆಲ್ಲಾ ನಾನು ನೋಡಿಕೊಂಡೇ ಬಂದಿರೋದು ಕೂತ್ಕೋ ಎಂದ ರಜತ್ ಕೂಗಾಡಿದ್ದಾರೆ.
ರಜತ್, ಮಂಜು ಮಧ್ಯೆ ಮಾತಿಗೆ ಮಾತು ಬೆಳೆದಿದ್ದು ಏನೋ ಹೊಡೆದು ಬಿಟ್ಟು ಹೋಗ್ತಿಯೇನೋ. ಮುಟ್ಟಲೇ ಮುಟ್ಟಲೇ ಎಂದ ಮಂಜು ಹಾಗೂ ರಜತ್ ಬಿಗ್ ಬಾಸ್ ಮನೆಯ ರಣಾಂಗಣಕ್ಕೆ ಆಹ್ವಾನ ಕೊಟ್ಟಿದ್ದಾರೆ. ಈಗಾಗಲೇ ಗಲಾಟೆ, ಕೂಗಾಟದಿಂದ ಬಿಗ್ ಬಾಸ್ ಮನೆಯ ಟಾಸ್ಕ್ಗಳು ರದ್ದಾಗಿದೆ. ಈ ವಾರದ ಈ ಟಾಸ್ಕ್ ಕೂಡ ರದ್ದಾಗುವ ಸಾಧ್ಯತೆ ಇದೆ.
ಕಳೆದ ವಾರ ಧನರಾಜ್ ಹಾಗೂ ರಜತ್ ಅವರ ಜಗಳದ ವಿಚಾರವಾಗಿ ಸುದೀಪ್ ಅವರು ವಾರ್ನ್ ಮಾಡಿ ಪನಿಶ್ಮೆಂಟ್ ಕೂಡ ನೀಡಿದ್ದರು. ಆದರೂ ರಜತ್ ಅವರು ಸರಿ ಹೋದಂತೆ ಇಲ್ಲ. ಇದೀಗ ಮತ್ತೆ ಮಂಜು ಹಾಗೂ ರಜತ್ ಅವರ ನಡುವೆ ಮಾರಾಮಾರಿಯಾಗಿದೆ.