ಕನ್ನಡದ ಬಿಗ್ಬಾಸ್ ಸೀಸನ್ 11 ದಿನದಿಂದ ದಿನಕ್ಕೆ ಹೊಸ ಹೊಸ ಟ್ವಿಸ್ಟ್ ಪಡೆದುಕೊಂಡು ಮುನ್ನುಗ್ಗುತ್ತಿದೆ. ಕಳೆದ ಒಂದು ವಾರದಿಂದ ಬಿಗ್ಬಾಸ್ ಮನೆಯಲ್ಲಿ ಈ ಇಬ್ಬರದ್ದೇ ಸದ್ದು ಕೇಳಿ ಬರುತ್ತಿತ್ತು. ಬಿಗ್ಬಾಸ್ ಶುರುವಾದ ದಿನದಿಂದ ಈ ಇಬ್ಬರು ಗೆಳತಿಯರಾಗಿದ್ದರು.
ದಿನ ಕಳೆದಂತೆ ಈ ಇಬ್ಬರು ಮಧ್ಯೆ ಬಿರುಕು ಮೂಡಿತ್ತು. ಇದೀಗ ಮೋಕ್ಷಿತಾ ಪೈ ಹಾಗೂ ಗೌತಮಿ ಜಾಧವ್ ದೂರ ಆಗಿರುವುದು ಎಲ್ಲರಿಗೂ ಗೊತ್ತೇ ಇದೆ. ಆದ್ರೆ ನಿನ್ನೆಯ ಎಪಿಸೋಡ್ನಲ್ಲಿ ಮೋಕ್ಷಿತಾ ಪೈ ಒಬ್ಬರೇ ಕುಳಿತುಕೊಂಡ ಗೌತಮಿ ಬಗ್ಗೆ ಅಸಮಧಾನ ಹೊರ ಹಾಕಿದ್ದಾರೆ.
ಸೋಫಾ ಮೇಲೆ ಒಬ್ಬಂಟಿಯಾಗಿ ಕುಳಿತುಕೊಂಡಿದ್ದ ಮೋಕ್ಷಿತಾ, ನಾನು ನನ್ನ ನಿರ್ಧಾರವನ್ನು ತೆಗೆದುಕೊಂಡಿದ್ದಕ್ಕೆ ನಾಮಿನೇಷನ್ ಪಟ್ಟ ಕೊಟ್ರು. ಯುವರಾಣಿ ಟಾಸ್ಕ್ ಮಾಡುವಾಗ ಒಂದು ಮೂಗು ಬೊಟ್ಟು ಕೇಳಿದಕ್ಕೇ ಕೊಡದೇ ಇದ್ದ ಗೌತಮಿ, ನಾನು ಕ್ಯಾಪ್ಟನ್ಸಿ ಆಡುವುದಕ್ಕಾಗಿ ಹೋಗಿ ಕೇಳಿದ್ರೆ ಒಪ್ಪಿಕೊಳ್ಳುತ್ತಿದ್ದರಂತೆ ಅಬ್ಬಾ ಸ್ಮಾಟ್ ಪ್ಲೈ. ಆ ಯುವರಾಣಿ ಪಟ್ಟ ನನಗೆ ಸಿಕ್ಕಿದೆ ಎಂದ ಕೂಡಲೇ ಅವರು ಆಡಿದ ರೀತಿ ಹೇಗಿತ್ತು. ಅಷ್ಟು ಸಿಟ್ಟು ಮಾಡಿಕೊಂಡು, ಅವರ ತರ ನಾಟಕ ಮಾಡುವುದು ನನಗೆ ಬರೋದಿಲ್ಲ ಅಲ್ವಾ ಇದೇ ನಮಗೆ ಕಷ್ಟ ಅಂತ ಹೇಳಿದ್ದಾರೆ.
ಸದ್ಯ ಬಿಗ್ಬಾಸ್ ಮನೆಯಲ್ಲಿ ಗೌತಮಿ ಜಾಧವ್ 11ರ ಅಬ್ಬರ ಟೀಮ್ನಲ್ಲೇ ಮೋಕ್ಷಿತಾ ಆಟ ಆಡುತ್ತಿದ್ದರು. ಆದರೆ ನಿನ್ನೆ ಎಪಿಸೋಡ್ನಲ್ಲಿ ಗೌತಮಿ ಅವರು ಮೋಕ್ಷಿತಾ ಅವರನ್ನ ಕ್ಯಾಪ್ಟನ್ಸಿ ಆಟದಿಂದ ಹೊರ ಇಟ್ಟಿದರು. ಇದರಿಂದ ಮೋಕ್ಷಿತಾ ಸ್ಪಲ್ಪ ಬೇಜಾರಿನಲ್ಲಿದ್ದರು. ಅನಂತರ ಹನುಮಂತನ ಟೀಂ ಜವಾರಿ ಮಂದಿ ಟೀಂ ಗೆದ್ದು ಬಿಗ್ಮನೆಯ ಕ್ಯಾಪ್ಟ್ನ್ ಆಗೋಕೆ ಎಲ್ಲರೂ ಆಯ್ಕೆಯಾಗಿದ್ದಾರೆ. ಆದರೆ ಗೌತಮಿ ಜಾಧವ್ ಟೀಂ ನಿನ್ನೆ ಸೋತು ಸುಣ್ಣವಾಗಿದೆ. ಇಂದು ಹನುಮಂತನ ಜವಾರಿ ಟೀಂ ನಲ್ಲಿ ಕ್ಯಾಪ್ಟನ್ಸಿ ಗೇಮ್ನಲ್ಲಿ ಗೆದ್ದು ಯಾರು ಈ ವಾರದ ಮನೆಯ ಕ್ಯಾಪ್ಟ್ನ್ ಆಗ್ತಾರೆ ಕಾದುನೋಡಬೇಕಿದೆ.