ಬಿಗ್ ಬಾಸ್ ಸೀಸನ್ 11ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟದ್ದ ರಜತ್ ಅವರ ಆರ್ಭಟ ಹೆಚ್ಚಾಗಿದೆ. ಕಳೆದ ಸಂಚಿಕೆಯಲ್ಲಿಯೂ ಗೌತಮಿ ಅವರ ಜತೆ ಗುದ್ದಾಡಿದ್ದರು. ಮಾತಿನ ಬಗ್ಗೆ ಗಮನ ಇರಲಿ ಎಂದು ಸುದೀಪ್ ಹೇಳಿದ್ದರು. ಆದರೆ, ಈ ಮಾತುಗಳಿಗೆ ರಜತ್ ಅವರು ಕಿಮ್ಮತ್ತು ನೀಡಿಲ್ಲ. ಈಗ ಅವರನ್ನೇ ನಾಮಿನೇಟ್ ಮಾಡಲಾಗಿದೆ. ಈ ಬಗ್ಗೆ ನಾನೇ ಹೀರೋ, ನಾನು ಫುಲ್ ಕರಾಬು ಎಂದು ಅಬ್ಬರಿಸಿದ್ದಾರೆ.
ಇದೀಗ ಹೊಸ ಪ್ರೋಮೊ ಔಟ್ ಆಗಿದೆ. ಒಂದು ಟಾಸ್ಕ್ ಬಿಗ್ ಬಾಸ್ ನೀಡಿತ್ತು. ತಮ್ಮೊಳಗೆ ಚರ್ಚಿಸಿ ಒಬ್ಬರನ್ನು ನೇರವಾಗಿ ನಾಮಿನೇಟ್ ಮಾಡಬೇಕಿತ್ತು. ರಜತ್ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದಾರೆ ತ್ರಿವಿಕ್ರಮ್ ತಂಡ.
‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮದಲ್ಲಿ ಈ ವಾರದ ನಾಮಿನೇಷನ್ ಪ್ರಕ್ರಿಯೆ ಆರಂಭವಾಗಿದೆ. ನಾಮಿನೇಷನ್ ವೇಳೆ ರಜತ್ ಟಾರ್ಗೆಟ್ ಆಗಿದ್ದಾರೆ. ರಜತ್ ಅವರನ್ನ ತ್ರಿವಿಕ್ರಮ್ ನಾಮಿನೇಟ್ ಮಾಡಿ, ‘’Individual ಆಗಿ ಆಡಿ ಅಂತ ಪ್ರವೋಕ್ ಮಾಡ್ತಾರೆ. ಅವರನ್ನ ಅವರು ಸುಪೀರಿಯರ್ ಅಂದುಕೊಂಡಿದ್ದಾರೆ’’ ಅಂತ ಕಾರಣ ಕೊಟ್ಟಿದ್ದಾರೆ.
ತ್ರಿವಿಕ್ರಮ್ ಕೊಟ್ಟ ಕಾರಣಗಳಿಗೆ ರಜತ್ ತಮ್ಮದೇ ಶೈಲಿಯಲ್ಲಿ ತಿರುಗೇಟು ಕೊಟ್ಟಿದ್ದಾರೆ. ನಾನೇ ಹೀರೋ, ನಾನೇ ಕರಾಬು, ನಾಮಿನೇಟ್ ಮಾಡಿ ಬಿಟ್ರೆ ಚೇಂಜ್ ಆಗ್ತೀನಾ ನಾನು? ಬೇರೆಯವರನಾ ಹೀರೋ ಅಂತಿನಾ? ನಾನೇ ಹೀರೋ ಅಂತ ತ್ರಿವಿಕ್ರಮ್ಗೆ ಎದಿರೇಟು ಕೊಟ್ಟಿದ್ದಾರೆ ರಜತ್.