ಇತ್ತೀಚೆಗೆ ಶ್ರೀಲಂಕಾ ವಿರುದ್ಧ ಟೀಮ್ ಇಂಡಿಯಾ ಏಕದಿನ ಸರಣಿ ಸೋತಿದೆ. ಟೀಮ್ ಇಂಡಿಯಾದಲ್ಲಿ ಸ್ಟಾರ್ ಆಟಗಾರರ ದಂಡೇ ಇದ್ರೂ ಶ್ರೀಲಂಕಾ ವಿರುದ್ಧ 2-0 ಅಂತರದಿಂದ ಸೋತಿದ್ದು, ಇದು ಭಾರೀ ಮುಖಭಂಗವಾಗಿದೆ. ಏಕದಿನ ಸರಣಿ ಸೋತ ಬೆನ್ನಲ್ಲೇ ಕ್ಯಾಪ್ಟನ್ ರೋಹಿತ್ ಶರ್ಮಾ ತೀವ್ರ ಕೋಪ ಮಾಡಿಕೊಂಡಿದ್ದಾರೆ. ಜತೆಗೆ ಮುಂದಿನ ದಿನಗಳಲ್ಲಿ ಭಾರತ ಏಕದಿನ ತಂಡದಲ್ಲಿ ಆಗುವ ಬದಲಾವಣೆಗಳ ಬಗ್ಗೆ ಮಾತಾಡಿದ್ದಾರೆ.
ಏಕದಿನ ಸರಣಿ ಸೋಲಿಗೆ ಕಾರಣವೇ ಟೀಮ್ ಇಂಡಿಯಾ ಬ್ಯಾಟರ್ಗಳ ವೈಫಲ್ಯ. ಅದರಲ್ಲೂ ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ರಿಷಭ್ ಪಂತ್ ಮತ್ತು ಶಿವಂ ದುಬೆ ಪ್ರದರ್ಶನ ನೀಡದಿರುವುದು. ಇದರ ಪರಿಣಾಮ ಮುಂದಿನ ಏಕದಿನ ಸರಣಿಗಳಲ್ಲಿ ಶ್ರೇಯಸ್ ಅಯ್ಯರ್ ಮತ್ತು ಶಿವಂ ದುಬೆ ಟೀಮ್ ಇಂಡಿಯಾದಲ್ಲಿ ಸ್ಥಾನ ಕಳೆದುಕೊಳ್ಳಬಹುದು.
ಟೀಮ್ ಇಂಡಿಯಾ ಪರ ಟೆಸ್ಟ್ ಮತ್ತು ಟಿ20 ಮಾದರಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಆಟಗಾರ ಯಶಸ್ವಿ ಜೈಸ್ವಾಲ್. ಇವರು ಐಪಿಎಲ್ನಲ್ಲೂ ತನ್ನ ಬಿರುಸಿನ ಬ್ಯಾಟಿಂಗ್ಗೆ ಹೆಸರು ವಾಸಿಯಾಗಿದ್ದಾರೆ. ಪ್ರತಿ ಪಂದ್ಯದಲ್ಲೂ ಬೌಲರ್ಸ್ ಎದೆಯಲ್ಲಿ ನಡುಕ ಹುಟ್ಟಿಸಿರೋ ಆಟಗಾರ ಕೂಡ ಹೌದು. ಈ ಪ್ರತಿಭಾವಂತ ಬ್ಯಾಟರ್ಗೆ ಭಾರತ ಏಕದಿನ ತಂಡದಲ್ಲಿ ಚಾನ್ಸ್ ಸಿಗೋ ಸಾಧ್ಯತೆ ಇದೆ.