ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮದಾಯಕ ಹಾಗೂ ಮಿತವ್ಯಯಕರ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ. ಹಾಗಿದ್ದರೆ ಇದೀಗ ಆರಂಭಿಸಿರುವ ಹೊಸ ಮೆಟ್ರೋ ಮಾರ್ಗದ (Metro New Feeder Bus) ವಿವರ ಇಲ್ಲಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹವಾನಿಯಂತ್ರಣ ರಹಿತ ಸೇವೆಯಲ್ಲಿ ನೂತನ ಮೆಟ್ರೋ ಫೀಡರ್ ಮಾರ್ಗವನ್ನು ದಿನಾಂಕ ನವೆಂಬರ್ 4ರಿಂದ ಆರಂಭಿಸಿದೆ.
ಮಾರ್ಗ ಸಂಖ್ಯೆ- ಎಲ್ಲಿಂದ-ಎಲ್ಲಿಗೆ-ಮಾರ್ಗ ಬಸ್ಸುಗಳ ಸಂಖ್ಯೆ/ಸುತ್ತುವಳಿ ವಿವರ ಹೀಗಿದೆ
ಎಂಎಫ್-38 : ರಾಜರಾಜೇಶ್ವರಿ ನಗರ ಮೆಟ್ರೋ ನಿಲ್ದಾಣ ಜವರೇಗೌಡನಗರ, ವಿ ಲೆಗ್ಗೆಸಿ ಕನ್ವೆನ್ಷನ್ ಹಾಲ್ ರಸ್ತೆ, ಡಿಸೋಜನಗರ, ನಾಯಂಡನಹಳ್ಳಿ. 01
ಈ ಬಸ್ಗಳು ಸದರಿ ಮಾರ್ಗದ ವೇಳಾಪಟ್ಟಿ ವಿವರಗಳು ಈ ಕೆಳಗಿನಂತಿದೆ.
ಮಾರ್ಗ ಸಂಖ್ಯೆ ಎಂಎಫ್-38 ರಾಜರಾಜೇಶ್ವರಿ ನಗರ ಮೆಟ್ರೋ ನಿಲ್ದಾಣ ಬಿಡುವ ವೇಳೆ
7:40, 8:10, 8:40, 9:10, 9:40, 10:30, 16:15, 17:00, 17:30, 18:00, 18:30, 19:00, 19:30, 20:00 ವೇಳೆಯಲ್ಲಿ ಸೇವೆ ನೀಡಲಿದೆ.
ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಶುಭ ಸುದ್ದಿ; ಪಿಂಕ್ ಲೈನ್ ಮೆಟ್ರೋ ಸಂಚಾರ ಆರಂಭ ಯಾವಾಗ?
ರಾಜ್ಯ ರಾಜಧಾನಿಯ ನಾಗರಿಕರಿಗೆ ಶುಭ ಸುದ್ದಿಯೊಂದು ಹೊರಬಿದ್ದಿದೆ. ಬೆಂಗಳೂರಿನ ನಮ್ಮ ಮೆಟ್ರೋ ಮಾರ್ಗವನ್ನು 21.26 ಕಿ.ಮೀ. ವಿಸ್ತರಿಸಲಾಗುತ್ತಿದ್ದು, ಪಿಂಕ್ ಲೈನ್ ಮೆಟ್ರೋ (Pink Line Metro) ಕಾಳೇನ ಅಗ್ರಹಾರ ಮತ್ತು ನಾಗವಾರಗಳ ನಡುವೆ (Bengaluru metro) ಸಂಪರ್ಕ ಕಲ್ಪಿಸಲಿದೆ. ಈ ಮಾರ್ಗದಲ್ಲಿ 12 ಸುರಂಗ ಮೆಟ್ರೋ ನಿಲ್ದಾಣ ಮತ್ತು 6 ಎಲಿವೇಟೆಡ್ ನಿಲ್ದಾಣ ಸೇರಿ ಒಟ್ಟು 18 ಮೆಟ್ರೋ ನಿಲ್ದಾಣಗಳು (Metro Station) ಇರಲಿವೆ.
ಪಿಂಕ್ ಲೈನ್ ಮೆಟ್ರೋ ಮಾರ್ಗ ಬೆಂಗಳೂರು ನಗರದ ಅತಿ ಉದ್ದದ ಸುರಂಗ ಮಾರ್ಗವಾಗಿದೆ. ಈ ಮೊದಲು ತೀರ್ಮಾನಿಸಿದ್ದಕ್ಕಿಂತ ಒಂದು ವರ್ಷ ವಿಳಂಬವಾಗಿ ಅಂದ್ರೆ, 2026ರ ಡಿಸೆಂಬರ್ ವೇಳೆಗೆ ಈ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಆರಂಭಿಸಲು ನಿರ್ಧರಿಸಲಾಗಿದೆ. 21.26 ಕಿಲೋಮೀಟರ್ ಉದ್ದದ ಪಿಂಕ್ ಲೈನ್ ಮೆಟ್ರೋ ಮಾರ್ಗವು, ಕಾಳೇನ ಅಗ್ರಹಾರ ಮತ್ತು ನಾಗವಾರದ ನಡುವೆ ಸಂಪರ್ಕ ಕಲ್ಪಿಸಲಿದೆ. ಅಲ್ಲದೇ ಇದು 12 ಸುರಂಗ ಮಾರ್ಗ ಮತ್ತು 6 ಎಲಿವೇಟೆಡ್ ಮೆಟ್ರೋ ಸ್ಟೇಷನ್ಗಳನ್ನು ಹೊಂದಿರಲಿದೆ.