ಬಿಪಿಎಲ್ ಕಾರ್ಡ್ ಹೊಂದಿರುವ ರಾಜ್ಯದ ಜನತೆಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಮುಂದಿನ ತಿಂಗಳಿನಿಂದಲೇ ಬಿಪಿಎಲ್ ಪಡಿತರ ಚೀಟಿ ಇರುವವರಿಗೆ ಬಂಪರ್ ಕೊಡುಗೆ ಸಿಗಲಿದೆ. ಈಗಾಗಲೇ ಘೋಷಿಸಿದಂತೆ ಮುಂದಿನ ತಿಂಗಳಿನಿಂದ ಬಿಪಿಎಲ್ ಕಾರ್ಡ್ ದಾರರಿಗೆ ಸರ್ಕಾರ ಅಕ್ಕಿ ಜೊತೆಗೆ ಅಡುಗೆ ಎಣ್ಣೆ, ಬೇಳೆ, ಸಕ್ಕರೆಯನ್ನೂ ಉಚಿತವಾಗಿ ನೀಡಲಿದೆ.
ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಅಕ್ಕಿಯ ಜೊತೆಗೆ ಬೇರೆ ದಿನಸಿ ಕೊಡುವ ಬಗ್ಗೆ ಕಳೆದ ತಿಂಗಳ ಸರ್ಕಾರ ಘೋಷಣೆ ಮಾಡಿತ್ತು. ಈಗಾಗಲೇ ಸಿದ್ದರಾಮಯ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ಕೊಡುವುದಾಗಿ ಘೋಷಣೆ ಮಾಡಿತ್ತು. ಆದರೆ 5 ಕೆಜಿ ಅಕ್ಕಿ ನೀಡುತ್ತಿದ್ದು, ಉಳಿದ 5 ಕೆಜಿ ಬದಲಾಗಿ ನೇರವಾಗಿ ಖಾತೆಗೆ ಹಣ ವರ್ಗಾಯಿಸುತ್ತಿತ್ತು. ಆದರೆ ಈಗ ಹಣದ ಬಲು ಬೇಳೆ, ಎಕ್ಕ ಸಕ್ಕರೆಯನ್ನು ನೀಡಲಿದೆ.
ಅಂದರೆ 5 ಅಕ್ಕಿ ಮತ್ತು ಇತರೆ ದಿನಸಿ ವಸ್ತುಗಳು ಸಿಗಲಿವೆ. ಈ ಯೋಜನೆಗೆ ಆಹಾರ ಇಲಾಖೆ ಈಗಾಗಲೇ ಸಿದ್ಧತೆ ನಡೆಸಿದೆ. ಇದರಿಂದ ಅನೇಕ ಬಡ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂಬುದು ಸರ್ಕಾರದ ಚಿಂತನೆಯಾಗಿದೆ. ಇದಕ್ಕೆ ಮೊದಲು 5 ಕೆಜಿ ಅಕ್ಕಿ ಬದಲು 170 ರೂ. ಹಣ ನೀಡಲಾಗುತ್ತಿತ್ತು. ಅ ಹಣ ಇನ್ನು ಸಿಗದು.