ರಾಜಧಾನಿ ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಗ್ ನ್ಯೂಸ್ ಸಿಕ್ಕಿದೆ. ನೆಲಮಂಗಲ, ತುಮಕೂರು, ಮಾಕಳಿ ಮಾರ್ಗದ ಜನರ ಹಲವು ವರ್ಷಗಳ ಕನಸು ಕೊನೆಗೂ ನನಸಾಗಿದ್ದು, ಮೆಟ್ರೋ ಪ್ರಯಾಣಿಕರಿಗೆ ಇದು ಬಹುದೊಡ್ಡ ಗುಡ್ ನ್ಯೂಸ್ ಆಗಿದೆ.
ಕಳೆದ ಎಂಟು ವರ್ಷಗಳಿಂದ ನಡೆಯುತ್ತಿದ್ದ ನಾಗಸಂದ್ರ ಟು ಮಾದಾವರ ಮಾರ್ಗದ ಮೆಟ್ರೋ ಕಾಮಗಾರಿ ಪೂರ್ಣಗೊಂಡಿದ್ದು, ಅಕ್ಟೋಬರ್ 4 ರಂದು ರೈಲ್ವೆ ಸುರಕ್ಷತಾ ಆಯುಕ್ತರು ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದರು. ಇಷ್ಟು ಆದರೂ ಮೆಟ್ರೋ ಸಂಚಾರ ಆರಂಭ ತಡವಾಗಿತ್ತು.
ಇದನ್ನು ಓದಿ:ಚಿಟಿಕೆ ಹೊಡೆದು ದರ್ಶನ್ಗೆ ಎಚ್ಚರಿಸಿದ ಜಗದೀಶ್!
ಆದರೆ, ಸದ್ಯ ಸಂಸದ ತೇಜಸ್ವಿ ಸೂರ್ಯ ಗುಡ್ ನ್ಯೂಸ್ ಹಂಚಿಕೊಂಡಿದ್ದು, ಇಂದಿನಿಂದಲೇ ನಾಗಸಂದ್ರ ಟು ಮಾದಾವರ ವಿಸ್ತರಿತ ಮಾರ್ಗ ಸಾರ್ವಜನಿಕರ ಪ್ರಯಾಣಕ್ಕೆ ಸಿಗಲಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಬೆಂಗಳೂರಿನ ಸಾರ್ವಜನಿಕರ ಅನುಕೂಲ ಮತ್ತು ಹಿತಾಸಕ್ತಿಯನ್ನು ಗಮನದಲ್ಲಿರಿಸಿ, ಮೆಟ್ರೋ ಹಸಿರು ಮಾರ್ಗದ ಈ ಮೂರು ಮೆಟ್ರೋ ಸ್ಟೇಷನ್ ಗಳು ಸಾರ್ವಜನಿಕರ ಸೇವೆಗೆ ಇಂದಿನಿಂದ ಸಾರ್ವಜನಿಕರ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಮಾಹಿತಿ ನೀಡಿದ್ದಾರೆ.
298 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ 3.14 ಕಿಮೀ ಉದ್ದವಿರುವ ಹಸಿರು ಮಾರ್ಗದ ನಾಗಸಂದ್ರ ಟು ಮಾದಾವರ ವಿಸ್ತರಿತ ಮಾರ್ಗ ಇಲ್ಲಿಯವರೆಗೆ ಓಪನ್ ಮಾಡಿರಲಿಲ್ಲ. ಈ ಬಗ್ಗೆ ಸಾರ್ವಜನಿಕ ವಲಯದಿಂದ ಭಾರೀ ಟೀಕೆಗಳು ಕೇಳಿ ಬಂದಿದ್ದವು. ಆದರೆ ನಿನ್ನೆ ಮೆಟ್ರೋ ಓಪನ್ ಮಾಡಲು ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಇದರೊಂದಿಗೆ ವಿಸ್ತರಿತ ಮಾರ್ಗ ಇಂದಿನಿಂದ ಬಹುತೇಕ ಓಪನ್ ಆಗಲಿದ್ದು, ಇಂದು ಬೆಳಗ್ಗೆ 11 ಗಂಟೆಗೆ ಸಂಸದ ತೇಜಸ್ವಿ ಸೂರ್ಯ, ಡಿಸಿಎಂ ಡಿಕೆ ಶಿವಕುಮಾರ್ ಚಾಲನೆ ನೀಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಯಶವಂತಪುರದಿಂದ ಹಸಿರು ಮಾರ್ಗದ ರೈಲಿನಲ್ಲಿ ಮಾದಾವರ ವರೆಗೆ ಸಂಚಾರ ಮಾಡಬಹುದಾಗಿದ್ದು, ಈ ಮೂಲಕ ಹಸಿರು ಮಾರ್ಗದ ವಿಸ್ತರಿತ ಮಾರ್ಗ ಪ್ರಯಾಣಕ್ಕೆ ಮುಕ್ತವಾಗಲಿದೆ.
ಇದನ್ನು ಓದಿ: ನಟಿ ಸಂದ್ರಾ ಥಾಮಸ್ನ ನಿಷೇಧಿಸಿದ ಮಲಯಾಳಂ ಚಿತ್ರರಂಗ!
ವಿಸ್ತರಿತ ಹಸಿರು ಮಾರ್ಗದಲ್ಲಿ ಮಂಜುನಾಥ ನಗರ, ಚಿಕ್ಕಬಿದರಕಲ್ಲು, ಮಾದಾವರ ಗಳನ್ನು ಒಳಗೊಂಡ 3 ಮೆಟ್ರೋ ನಿಲ್ದಾಣಗಳಿವೆ. ತುಮಕೂರು ರಸ್ತೆಯಲ್ಲಿನ ಸಂಚಾರ ದಟ್ಟಣೆ ನಿಯಂತ್ರಣದಲ್ಲಿ ಈ ಮಾರ್ಗವು ಬಹುಮುಖ್ಯ ಪಾತ್ರವಹಿಸುತ್ತದೆ. ಸದ್ಯ ಹಸಿರು ಮಾರ್ಗದ ನಾಗಸಂದ್ರ ಟು ಸಿಲ್ಕ್ ಇನಸ್ಟಿಟ್ಯೂಟ್ ವರೆಗೆ ಮೆಟ್ರೋ ರೈಲು ಗಳು ಸಂಚಾರ ಮಾಡಲಿದ್ದು, 31 ಕಿಮೀ ಉದ್ದವಿರುವ ಹಸಿರು ಮಾರ್ಗ 29 ಮೆಟ್ರೋ ಸ್ಟೇಷನ್ ಗಳನ್ನು ಒಳಗೊಂಡಿದೆ. ಇಂದು ಮೂರು ಮೆಟ್ರೋ ಸ್ಟೇಷನ್ಗಳಿಗೆ ಚಾಲನೆ ಸಿಕ್ಕರೆ, 34.14 ಕಿಮೀ ವಿಸ್ತೀರ್ಣ, ಹಸಿರು ಮಾರ್ಗದಲ್ಲಿ ಒಟ್ಟು 32 ಮೆಟ್ರೋ ಸ್ಟೇಷನ್ ಇರಲಿದೆ.