ಸ್ಮಾರ್ಟ್ಫೋನ್ ಪ್ರಿಯರಿಗೆ ಡಿಸ್ಪ್ಲೇ ಮೇಲೆ ಮೂಡುವ ಗ್ರೀನ್ ಲೈನ್ ಸಮಸ್ಯೆಯಾಗಿ ಪರಿಣಮಿಸಿದೆ. ಪ್ರಾರಂಭದಲ್ಲಿ ಒನ್ಪ್ಲಸ್, ಸ್ಯಾಮ್ಸಂಗ್ ಸ್ಮಾರ್ಟ್ಫೋನ್ ಬಳಕೆದಾರರು ಈ ಗ್ರೀನ್ ಲೈನ್ ಸಮಸ್ಯೆಯನ್ನು ಎದುರಿಸುತ್ತಿದ್ದರು. ಆದರೀಗ ಮೊಟೊರೊಲಾ, ವಿವೋ ಸೇರಿ ವಿವಿಧ ಬ್ರ್ಯಾಂಡ್ ಸ್ಮಾರ್ಟ್ಫೋನ್ ಬಳಕೆದಾರರು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
ಸಾಮಾನ್ಯವಾಗಿ ಅಮೋಲ್ಡ್ ಡಿಸ್ಪ್ಲೇಗಳಲ್ಲಿ ಗ್ರೀನ್ ಲೈನ್ ಕಾಣಿಸಿಕೊಳ್ಳುತ್ತಿದೆ. ಆದರೆ ಪ್ರಾರಂಭದಲ್ಲಿ ಇದರಿಂದ ಬಳಕೆದಾರರಿಗೆ ಯಾವುದೇ ತೊಂದರೆಯಾಗದಿದ್ದರೂ ಬರುಬರುತ್ತಾ ಇದರಿಂದ ಸಮಸ್ಯೆ ಅನುಭವಿಸುತ್ತಾರೆ. ಸ್ಮಾರ್ಟ್ಫೋನ್ ಡಿಸ್ಪ್ಲೇ ಮೇಲೆ ಮೂಡುವ ಗ್ರೀನ್ ಲೈನ್ ಬಗ್ಗೆ ನಿಖರ ಕಾರಣ ತಿಳಿದುಬಂದಿಲ್ಲ. ಯಾವುದೇ ಕಂಪನಿಗಳು ಇದರ ಬಗ್ಗೆ ಅಧಿಕೃತ ಕಾರಣವನ್ನು ಹೇಳಿಕೊಂಡಿಲ್ಲ. ಆದರೆ ಸಾಫ್ಟ್ವೇರ್ ನವೀಕರಣದ ಬಳಿಕ ಕಾಣಿಸಿಕೊಂಡ ಸಮಸ್ಯೆಯೆಂದು ಅನೇಕ ಬಳಕೆದಾರರು ಹೇಳಿದ್ದಾರೆ. ಇನ್ನು ಹಲವರು ಮದರ್ಬೋರ್ಡ್ ಅನ್ನು ಡಿಸ್ಪ್ಲೇಗೆ ಸಂಪರ್ಕಿಸವ ಕನೆಕ್ಟರ್ ಮೇಲೆ ಹಾನಿಯಾದಾಗ ಈ ಸಮಸ್ಯೆ ಮೂಡುತ್ತಿದೆ ಎಂದು ಹೇಳಿದ್ದಾರೆ.
ಪ್ರಾರಂಭದಲ್ಲಿ ಒನ್ಪ್ಲಸ್ ಸ್ಮಾರ್ಟ್ಫೋನ್ಗಳ ಮೇಲೆ ಗ್ರೀನ್ ಲೈನ್ ಬೀಳುತ್ತಿತ್ತು. ಒನ್ಪ್ಲಸ್ 8 ಪ್ರೊ, ಒನ್ಪ್ಲಸ್ 8ಟಿ, ಒನ್ಪ್ಲಸ್ 9, ಒನ್ಪ್ಲಸ್ 9ಆರ್ ಸ್ಮಾರ್ಟ್ಫೋನ್ಗಳ್ಲಿ ಗ್ರೀನ್ ಲೈನ್ ಕಾಣಿಸಿತು. ಈ ಸಮಸ್ಯೆ ಕಾಣಿಸಿಕೊಂಡತೆ ಕಂಪನಿ ಉಚಿತ ಸ್ಕ್ರೀನ್ ರಿಪ್ಲೇಸ್ಮೆಂಟ್ ಆಯ್ಕೆಯನ್ನು ಗ್ರಾಹಕರಿಗೆ ನೀಡಿದೆ. ಬಳಿಕ ಸ್ಯಾಮ್ಸಂಗ್, ವಿವೋದ ಬಳಕೆದಾರರು ಈ ಸಮಸ್ಯೆ ಎದುರಿಸುತ್ತಾ ಬಂದಿದ್ದಾರೆ.
ಗ್ರೀನ್ ಲೈನ್ ಸಮಸ್ಯೆ ಸರಿಪಡಿಸುವುದು ಹೇಗೆ?
ಸ್ಮಾರ್ಟ್ಫೋನ್ನಲ್ಲಿ ಗ್ರೀನ್ ಲೈನ್ ಮೂಡಿದರೆ ರೀಸ್ಟಾರ್ಟ್ ಮಾಡಿ. ಹೊಸ ಆವೃತ್ತಿಗೆ ನವೀಕರಿಸಿ ಅಥವಾ ಸೇಫ್ ಮೋಡ್ಗೆ ಬೂಟ್ ಮಾಡುವಂತಹ ಸರಳ ಹಂತವನ್ನು ಪ್ರಯತ್ನಿಸಿ. ಇತ್ತೀಚೆಗೆ ಪರಿಚಯಿಸಿರುವ ಕೆಲವು ಅಪ್ಲಿಕೇಶನ್ನಿಂದ ಈ ಸಮಸ್ಯೆ ಹೋಗಲಾಡಿಸಬಹುದಾ ಎಂದು ನೋಡಿ. ಇವೆಲ್ಲದರಿಂದ ಗ್ರೀನ್ ಲೈನ್ ಹೋಗದಿದ್ದರೆ ಡಿಸ್ಪ್ಲೇ ಬದಲಾಯಿಸುವುದೊಂದೇ ಪರಿಹಾರ. ಡಿಸ್ಪ್ಲೇ ಬದಲಾಯಿಸುವ ಮುನ್ನ ಸ್ಮಾರ್ಟ್ಫೋನ್ ಕಂಪನಿಗೆ ಈ ಕುರಿತು ಮಾಹಿತಿ ಹಂಚಿಕೊಳ್ಳಿ. ಅಥವಾ ಹತ್ತಿರದ ಮೊಬೈಲ್ ಸ್ಟೋರ್ಗೆ ಹೋಗಿ ತಿಳಿಸಿ. ಏಕೆಂದರೆ ಕೆಲವು ಕಂಪನಿಗಳು ಉಚಿತವಾಗಿ ಡಿಸ್ಪ್ಲೇ ರಿಪ್ಲೇಸ್ಮೆಂಟ್ ಸೇವೆ ನೀಡುತ್ತಿವೆ.