‘ಬಿಗ್ ಬಾಸ್’ ಮನೆಯಲ್ಲಿ ನಾಲ್ಕನೇ ಸ್ಪರ್ಧಿ ಎಲಿಮಿನೇಟ್ ಆಗಿದ್ದಾರೆ. ಮೊದಲ ವಾರ ನಟಿ ಯಮುನಾ ಶ್ರೀನಿಧಿ ಅವರು ವೀಕ್ಷಕರಿಂದ ಕಡಿಮೆ ವೋಟ್ ಪಡೆದು ಎಲಿಮಿನೇಟ್ ಆಗಿದ್ದರು. ಆದರೆ ನಂತರ ರಂಜಿತ್ & ಜಗದೀಶ್ ಅವರನ್ನು ಶೋನಿಂದ ಹೊರಗೆ ಕಳುಹಿಸಲಾಗಿತ್ತು. ಇದೀಗ ನಟಿ ಹಂಸ ಪ್ರತಾಪ್ ಅವರು ವೀಕ್ಷಕರ ಪ್ರೀತಿ ಗಳಿಸುವಲ್ಲಿ ವಿಫಲರಾಗಿದ್ದಾರೆ. ಕಡಿಮೆ ವೋಟ್ ಸಿಕ್ಕ ಕಾರಣ, ಹಂಸ ಅವರನ್ನು ಎಲಿಮಿನೇಟ್ ಮಾಡಲಾಗಿದೆ. ಮನೆಯೊಳಗೆ ಎರಡು ಕಾರುಗಳು ಬಂದವು. ಅದರಲ್ಲಿ ಒಂದು ಕಾರಿನ ಪಕ್ಕ ಹಂಸ, ಮತ್ತೊಂದು ಕಾರಿನ ಬಳಿ ಮೋಕ್ಷಿತಾ ನಿಂತರು. ಅಲ್ಲಿಗೆ ಭಾನುವಾರ ಸಂಚಿಕೆ ಮುಕ್ತಾಯವಾಗಿತ್ತು. ಯಾರು ಎಲಿಮಿನೇಟ್ ಅನ್ನೋದು ಗೊತ್ತಾಗಿರಲಿಲ್ಲ ನಿನ್ನೆ ಎಪಿಸೋಡ್ನಲ್ಲಿ ಉತ್ತರ ಸಿಕ್ಕಿದೆ. ಹಂಸಾ ಎಲಿಮಿನೇಟ್ ಆಗಿದ್ದು ತಿಳಿದಿದೆ.
ಇದನ್ನು ಓದಿ: ‘U 235’ ಟ್ರೈಲರ್ ಔಟ್.. ಡೈನಾಮಿಕ್ ಹೀರೋ ಡೈನಾಮಿಕ್ ನಟನೆ!
ನಟಿ ಹಂಸ ಪ್ರತಾಪ್ ಮತ್ತು ಮೋಕ್ಷಿತಾ ಪೈ ಅವರು ಕೊನೇ ಸುತ್ತಿನವರೆಗೂ ಸೇಫ್ ಆಗಿರಲಿಲ್ಲ. ಇವರಿಬ್ಬರಲ್ಲಿ ಯಾರು ಎಲಿಮಿನೇಟ್ ಆಗಬಹುದು ಎಂಬ ಕುತೂಹಲ ಜೋರಾಗಿತ್ತು. ಕೊನೆಯದಾಗಿ ಮೋಕ್ಷಿತಾ ಸೇಫ್ ಆದರೆ, ಹಂಸ ಎಲಿಮಿನೇಟ್ ಆಗಿದ್ದಾರೆ. ಆದರೆ ಸೋಮವಾರದ ಸಂಚಿಕೆಯ ಪ್ರೋಮೋದಲ್ಲೂ ಹಂಸಾ ಅವರ ಮುಖ ಕಂಡಿದ್ದರಿಂದ ಅವರನ್ನು ಎಲಿಮಿನೇಟ್ ಮಾಡಿಲ್ಲವೇನೋ ಎಂಬ ಡೌಟಿತ್ತು. ಆದರೆ ಸದ್ದಿಲ್ಲದೇ ಅವರನ್ನು ಮನೆಯಿಂದ ಆಚೆ ಕಳುಹಿಸಲಾಗಿದೆ. ಪ್ರತಿ ವಾರ ಎಲಿಮಿನೇಟ್ ಆದವರನ್ನು ಕಿಚ್ಚ ಸುದೀಪ್ ಅವರು ವೇದಿಕೆಗೆ ಕರೆಸಿ ಮಾತನಾಡಿಸುತ್ತಾರೆ. ಆದರೆ ಇತ್ತೀಚೆಗೆ ಅವರ ತಾಯಿ ನಿಧನರಾದ್ದರಿಂದ ವೀಕೆಂಡ್ ಸಂಚಿಕೆ ನಡೆಸಿಕೊಡಲು ಸುದೀಪ್ ಅವರಿಗೆ ಸಾಧ್ಯವಾಗಿಲ್ಲ. ಹಾಗಾಗಿ ಹಂಸಾ ಅವರು ವೇದಿಕೆಯಲ್ಲಿ ಸುದೀಪ್ ಜೊತೆ ಮಾತನಾಡದೇ ಬಿಗ್ ಬಾಸ್ ಆಟವನ್ನು ಮುಗಿಸುವಂತಾಯಿತು. ಈ ಮೊದಲು ಎಲಿಮಿನೇಟ್ ಆದ ರಂಜಿತ್, ಜಗದೀಶ್ ಅವರಿಗೂ ವೇದಿಕೆಗೆ ಬರುವ ಅವಕಾಶ ಸಿಕ್ಕಿರಲಿಲ್ಲ.
ಇದನ್ನು ಓದಿ: ಕಾಸರಗೋಡು: ದೇವಸ್ಥಾನ ಉತ್ಸವದ ವೇಳೆ ಪಟಾಕಿ ದುರಂತ!
ಎಲಿಮಿನೇಟ್ ಆಗುವುದಕ್ಕೂ ಮುನ್ನ ಹಂಸಾ ಅವರು ತಮ್ಮ ಇಷ್ಟು ದಿನಗಳ ಜರ್ನಿಯನ್ನು ಮೆಲುಕು ಹಾಕಿದರು. “ಇದೊಂದು ಲೈಫ್ಟೈಮ್ ನೆನಪು. ಬಿಗ್ ಬಾಸ್ನ ಹೊರಗೆಯಿಂದ ನೋಡುವುದಕ್ಕೂ ಇಲ್ಲಿ ಬಂದು ಆಡುವುದಕ್ಕೂ ಸಾಕಷ್ಟು ವ್ಯತ್ಯಾಸ ಇದೆ. ಹೊರಗೆ ಇದ್ದಾಗ ನಮಗೆ ಸಪೋರ್ಟ್ ಮಾಡಲು ನಮ್ಮ ಫ್ಯಾಮಿಲಿ ಇರುತ್ತದೆ. ಆದರೆ ಬಿಗ್ ಬಾಸ್ ಮನೆಯಲ್ಲಿ ನಮ್ಮ ಎಲ್ಲಾ ನಿರ್ಧಾರಗಳು ನಾವೇ ತೆಗೆದುಕೊಳ್ಳಬೇಕು. ಹೊರಗಡೆ ಹೋದಮೇಲೆ ನಾನಿನ್ನೂ ಸ್ಟ್ರಾಂಗ್ ಆಗ್ತೀನಿ, ನನ್ನ ತಾಳ್ಮೆ ಜಾಸ್ತಿ ಆಗಿದೆ, ನನ್ನ ನಿರ್ಧಾರಗಳನ್ನು ನಾನೇ ತೆಗೆದುಕೊಳ್ಳುವುದಕ್ಕೆ ಪ್ರಯತ್ನಿಸುತ್ತೇನೆ” ಎಂದು ಹಂಸಾ ಪ್ರತಾಪ್ ಹೇಳಿದ್ದಾರೆ. ಇನ್ನು, ಹೊರಗೆ ಹೋಗುವ ಮುನ್ನ ತಮಗೆ ಸಿಕ್ಕ ಅಧಿಕಾರದ ಮೂಲಕ ಹನುಮಂತ ಅವರನ್ನು ನೇರವಾಗಿ ಹಂಸ ನಾಮಿನೇಟ್ ಮಾಡಿದರು.