ಕೊಲೆ ಕೇಸ್ನಲ್ಲಿ ಜೈಲು ಸೇರಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ನಟಿ ರಚಿತಾ ರಾಮ್ ಅವರು ಭೇಟಿಯಾಗಿದ್ದರು. ಪರಪ್ಪನ ಅಗ್ರಹಾರ ಜೈಲಲ್ಲಿ ಭೇಟಿ ಆದಾಗ ರಚಿತಾ ರಾಮ್ಗೆ ನಟ ದರ್ಶನ್ ಅವರು, ನನಗೆ ಕಾನೂನು ಮೇಲೆ ನಂಬಿಕೆ ಇದೆ. ಆದಷ್ಟು ಬೇಗ ಬರ್ತೀನಿ ಎಂದಿದ್ದಾರಂತೆ. ಈ ಬಗ್ಗೆ ರಚಿತಾ ರಾಮ್ ಅವರೇ ಸ್ಪಷ್ಟನೆ ನೀಡಿದ್ದಾರೆ.
ರಚಿತಾ ರಾಮ್ ಹೇಳಿದ್ದೇನು?
ನನಗೆ ರಾಜನ ರೀತಿ ದರ್ಶನ್ ಅವರನ್ನು ನೋಡಲು ಇಷ್ಟ. ಈ ರೀತಿ ನೋಡಲು ನನಗೆ ಇಷ್ಟವಿಲ್ಲ. ಅವರ ಬ್ಯಾನರ್ನಿಂದಲೇ ನಾನು ಸಿನಿಮಾಗೆ ರಂಗಕ್ಕೆ ಬಂದಿದ್ದು. ನಾನು ಅವರನ್ನು ನೋಡಿದ ಕೂಡಲೇ ಭಾವುಕ ಆದೆ. ಅವರೇ ನನಗೆ ಧೈರ್ಯ ತುಂಬಿದ್ರು ಎಂದರು. ದರ್ಶನ್ ಅವರು ನನಗೆ ಸಮಾಧಾನ ಮಾಡಿದ್ರು. ನನಗೆ ಕಾನೂನಿನ ಮೇಲೆ ನಂಬಿಕೆ ಇದೆ. ಆದಷ್ಟ ಬೇಗ ಜೈಲಿನಿಂದ ಹೊರಗೆ ಬರ್ತೀನಿ ಎಂದರು. ಇದಕ್ಕೆ ನಾನು ವೈಟ್ ಮಾಡ್ತಾ ಇದೀವಿ ಬನ್ನಿ ಎಂದೆ. ಅವರನ್ನು ನೋಡಿದ ಮೇಲೆ ನಿರಾಳ ಆಯ್ತು ಎಂದರು