ಬೆಂಗಳೂರು: ಮಾಜಿ ಮಿನಿಸ್ಟರ್ ಎಚ್ ಡಿ ರೇವಣ್ಣಗೆ ಬಂಧನ ಭೀತಿ ಎದುರಾಗಿದೆ. ಹಾಸನದಲ್ಲಿ ಸಂಸದ ಪ್ರಜ್ವಲ ರೇವಣ್ಣ ವಿರುದ್ಧ ದೂರು ದಾಖಲಿಸಿರುವ ಮಹಿಳೆ ನಾಪತ್ತೆಯಾಗಿದ್ದಾಳೆ. ಹೀಗಾಗಿ ಮಹಿಳೆಯ ಅಪಹರಣ ಮಾಡಲಾಗಿದೆ ಎಂದು ನಾಪತ್ತೆ ಆಗಿರುವ ಮಹಿಳೆಯ ಮಗ ಹಾಸನದ ಕೆ.ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಪಹರಣ ಪ್ರಕರಣದ ವಿಚಾರಣೆಯನ್ನು ಇಂದು ಹಾಸನದ ಜಿಲ್ಲಾ ನ್ಯಾಯಾಲಯ ವಿಚಾರಣೆಗೆ ಕೈಗೆತ್ತಿಕೊಂಡಿದೆ. ಮಹಿಳೆ ನಾಪತ್ತೆಯಾಗಿರುವುದರಿಂದ ಮಾಜಿ ಸಚಿವ ಎಚ್ ಡಿ ರೇವಣ್ಣರಿಗೆ ಜಾಮೀನು ಸಿಗುವ ಸಾಧ್ಯತೆ ಕಡಿಮೆ ಇದ್ದು, ರೇವಣ್ಣ ಜೈಲು ಪಾಲಾಗ್ತಾರಾ ಎನ್ನುವ ಪ್ರಶ್ನೆ ಉದ್ಭವಿಸಿದೆ.