ಅಪ್ರಾಪ್ತ ಬಾಲಕಿಯರ ಜೊತೆ ಅನುಚಿತವಾಗಿ ವರ್ತನೆ ತೋರಿದ ಹಿನ್ನೆಲೆ ಸಾರ್ವಜನಿಕರೇ ಪೊಲೀಸ್ ಹೆಡ್ಕಾನ್ಸ್ಟೇಬಲ್ಅನ್ನು ಹಿಗ್ಗಾಮುಗ್ಗಾ ಥಳಿಸಿ ಪೊಲೀಸ್ ಠಾಣೆಗೆ ಒಪ್ಪಿಸಿದ ಘಟನೆ ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಶಬರಿನಗರದಲ್ಲಿ ಇಂದು ಬೆಳ್ಳಿಗ್ಗೆ ನಡೆದಿದೆ. ಹುಬ್ಬಳ್ಳಿಯ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಖದೀಮನವರ ಎಂಬಾತನೇ ತಾನು ವಾಸವಿದ್ದ ಮನೆಯ ಅಕ್ಕಪಕ್ಕದಲ್ಲಿ ವಾಸವಿದ್ದ ಬಾಲಕಿಯರ ಜೊತೆ ಅನುಚಿತವಾಗಿ ವರ್ತನೆ ಕಂಡು ಬಂದ ಹಿನ್ನೆಲೆಯಲ್ಲಿ ಸಾರ್ವಜನಿಕರು ನಡು ರಸ್ತೆಯಲ್ಲಿಯೇ ಹಿಗ್ಗಾಮುಗ್ಗಾ ಥಳಿಸಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ಹಲವು ದಿನಗಳಿಂದ ಕೂಡ ಈ ಪೊಲೀಸಪ್ಪ ಖದೀಮನವರ ಏರಿಯಾದಲ್ಲಿ ಅನುಚಿತವಾಗಿ ವರ್ತನೆ ತೋರುತ್ತಿದ್ದ ಆರೋಪ ಕೂಡಾ ಕೇಳಿ ಬಂದಿತ್ತು,ಆದ್ರೆ ಇಂದು ಬೆಳ್ಳಿಗ್ಗೆ ಹೆಡ್ ಕಾನ್ಸ್ಟೇಬಲ್ ರೆಡ್ ಹ್ಯಾಂಡ್ ಆಗಿ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಹಿನ್ನೆಲೆ ಮನಸ್ಸೋ ಇಚ್ಛೆ ಥಳಿಸಿದ್ದಾರೆ. ಶಬರಿ ನಗರದಲ್ಲಿನ ತನ್ನ ಮನೆಯಲ್ಲಿ ಈತ ಒಂಟಿಯಾಗಿ ವಾಸವಿದ್ದ ಎಂಬ ಮಾಹಿತಿ ಕೂಡಾ ಸಾರ್ವಜನಿಕರು ನೀಡಿದ್ದಾರೆ. ಹೆಡ್ ಕಾನ್ಸ್ಟೇಬಲ್ ವಿರುದ್ಧ ಇದೀಗ ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ಇದನ್ನು ಓದಿ:IPL ಮೆಗಾ ಆಕ್ಷನ್ ಯಾವ ದೇಶದಲ್ಲಿ ನಡೆಯುತ್ತದೆ..?
ಪ್ರಕರಣ ಸಂಬಂಧ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಮಾತನಾಡಿ, ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ರವಿವಾರ (ನ.03) ಮಧ್ಯಾಹ್ನ 3-4 ಗಂಟೆ ಸಮಯದಲ್ಲಿ ಮನೆಯೊಳಗೆ ಕರೆದು ಬಾಲಕಿ ಜೊತೆಗೆ ಅನುಚಿತವಾಗಿ ನಡೆದುಕೊಂಡಿದ್ದಾರೆಂದು ಆರೋಪಿಸಲಾಗಿದೆ. ಬಾಲಕಿಯ ಪೋಷಕರು ಆರೋಪಿಗೆ ಒಂದೆರಡೇಟು ಹೊಡೆದಿದ್ದಾರೆ. ನಮ್ಮ ಗಮನಕ್ಕೆ ಬಂದ ಕೂಡಲೇ ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದೇವೆ. ಮಗುವಿನ ಪೋಷಕರ ಹೇಳಿಕೆಯನ್ನು ಪಡೆದಿದ್ದೇವೆ ಎಂದು ಹೇಳಿದರು.