ಮುಂಗಾರು ಮಳೆ ಅಬ್ಬರ ಸೈಲೆಂಟ್ ಆಗುತ್ತಿಲ್ಲ, ಇನ್ನೊಂದು ಕಡೆ ಮಳೆಯ ಕಾಟ ತಾಳದೆ ಪರದಾಡುತ್ತಿರುವ ಕನ್ನಡ ನಾಡಿನ ಜನರಿಗೆ ಮುಂಗಾರು ಮಳೆ ಅಬ್ಬರದಿಂದ ಮುಕ್ತಿ ಸಿಕ್ತಿಲ್ಲ, ಪರಿಸ್ಥಿತಿ ಕೈಮೀರಿ ಹೋಗಿರುವ ಸಮಯದಲ್ಲಿ ಮತ್ತೊಂದು ಸ್ಫೋಟಕ ಮಾಹಿತಿ ಸಿಗುತ್ತಿದ್ದು, ಮುಂದಿನ 24 ಗಂಟೆಗಳ ಕಾಲ ಕರ್ನಾಟಕದ ಈ ಭಾಗಗಳಲ್ಲಿ ಭರ್ಜರಿ ರಣಮಳೆ ಬೀಳಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.
ಹಾಗಾದ್ರೆ ಭಾರಿ ಮಳೆ ಬೀಳಲಿರುವ ಪ್ರದೇಶಗಳು ಯಾವುವು?
2024 ಕನ್ನಡಿಗರ ಪಾಲಿಗೆ ಅತ್ಯಂತ ಖುಷಿಯ ವರ್ಷ ಎನ್ನಬಹುದು. ಯಾಕಂದ್ರೆ ಮಳೆಯೇ ಇಲ್ಲದೆ ನರಳುತ್ತಿದ್ದ ಕನ್ನಡ ನಾಡಿಗೆ ಮುಂಗಾರು ಮಳೆ ಭರ್ಜರಿ ಉಡುಗೊರೆ ನೀಡಿದೆ. ಆದ್ರೆ ಇದೇ ಸಮಯದಲ್ಲಿ ಅತಿಯಾದ ಮಳೆಯಿಂದ ಮತ್ತೊಂದು ಸಮಸ್ಯೆ ಸೃಷ್ಟಿಯಾಗಿದೆ. ಕಳೆದ 3 ತಿಂಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ ಕನ್ನಡ ನಾಡಿನ ಜನರು ನರಳಾಡಿ ಹೋಗಿದ್ದಾರೆ. ಕರ್ನಾಟಕದ ಮಲೆನಾಡು, ಕರಾವಳಿ, ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳು ಸೇರಿದಂತೆ ದಕ್ಷಿಣ ಕರ್ನಾಟಕದಲ್ಲೂ ಭಾರಿ ಮಳೆ ಅಬ್ಬರಿಸುತ್ತಿದೆ. ಹಾಗಾದ್ರೆ ಇದೀಗ ಮುಂದಿನ 24 ಗಂಟೆಗಳಲ್ಲಿ ಭರ್ಜರಿ ಮಳೆ ಬೀಳಲಿರುವ ಪ್ರದೇಶಗಳು ಯಾವುವು?
ಮಳೆ.. ಮಳೆ.. ಭರ್ಜರಿ ಮಳೆ!
ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಇದೀಗ ಮುಂಗಾರು ಮಳೆ ಅಬ್ಬರಿಸಲಿರುವ ಪ್ರದೇಶ & ಜಿಲ್ಲೆಗಳಿಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಮುಂದಿನ 24 ಗಂಟೆಗಳಲ್ಲಿ ದಕ್ಷಿಣ ಕರ್ವಾಟಕದ ಜಿಲ್ಲೆಗಳಲ್ಲಿ ಭರ್ಜರಿ ಮಳೆಯಾಗಲಿದೆ. ಜೊತೆಗೆ ರಾಜಧಾನಿ ಬೆಂಗಳೂರಿನಲ್ಲಿ ಸಂಜೆ ನಂತರ ಭೀಕರ ರಣಮಳೆ ಬೀಳುವ ಮುನ್ನೆಚ್ಚರಿಕೆ ನೀಡಲಾಗಿದೆ. ಬೆಂಗಳೂರು ಮಾತ್ರವಲ್ಲದೆ ಕರ್ವಾಟಕ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ.
ಬೆಂಗಳೂರು ಸೇರಿದಂತೆ ಮೈಸೂರು, ಮಂಡ್ಯ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಕೂಡ ಭಾರಿ ಮಳೆ ಬೀಳಲಿದೆ. ಇದರ ಜೊತೆಗೆ ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಮತ್ತು ಹಾಸನದ ಹಲವು ಭಾಗಗಳಲ್ಲಿ ಮಳೆರಾಯ ಆರ್ಭಟಿಸಲಿದ್ದಾನೆ. ಈ ಬಗ್ಗೆ ಮುನ್ನೆಚ್ಚರಿಕೆ ನೀಡಿದ ಹವಾಮಾನ ಇಲಾಖೆ.
ಕರಾವಳಿ ಜಿಲ್ಲೆಗಳಿಗೂ ಎಚ್ಚರಿಕೆ!
ಇಷ್ಟು ಮಾತ್ರವಲ್ಲದೆ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯ ಹಲವು ಪ್ರದೇಶಗಳಲ್ಲಿ ಭಾರಿ ಮಳೆ ಬೀಳುವ ಮುನ್ನೆಚ್ಚರಿಕೆ ನೀಡಲಾಗಿದೆ. ಹಾಗೇ ಅಲರ್ಟ್ ಆಗಿ ಇರುವಂತೆ ಸೂಚನೆ ನೀಡಲಾಗಿದ್ದು, ಯಾವ ಕ್ಷಣದಲ್ಲಿ ಬೇಕಾದರೂ ಮಳೆಯಿಂದಾಗಿ ಪರಿಸ್ಥಿತಿ ಕೈಮೀರಿ ಹೋಗುವ ಸ್ಥಿತಿ ನಿರ್ಮಾಣ ಆಗಿದೆ. ಈ ಹಿನ್ನೆಲೆ ಜನ ಈಗ ಮುಂಗಾರು ಮಳೆ ನಿಂತು ಹೋದರೆ ಸಾಕಪ್ಪಾ ದೇವರೆ ಅಂತಾ ಬೇಡುವ ಪರಿಸ್ಥಿತಿ ಬಂದಿದೆ.