ರಿಲಾಯನ್ಸ್ ಜಿಯೋ ಸಂಸ್ಥೆ ತನ್ನ ಹೊಸ ಜಿಯೋಭಾರತ್ 4ಜಿ ಫೋನ್ ಮೇಲೆ ಭರ್ಜರಿ ದೀಪಾವಳಿ ಆಫರ್ ಕೊಟ್ಟಿದೆ. 999 ರೂ ಬೆಲೆ ಅದರ ಈ ಫೋನ್ ಅನ್ನು ಕೇವಲ 699 ರೂಗೆ ಮಾರುತ್ತಿದೆ. ಸೀಮಿತ ಅವಧಿಯವರೆಗೆ ಮಾತ್ರ ಈ ಡಿಸ್ಕೌಂಟ್ ಸೇಲ್ ಇದೆ. ಫೋನ್ ಮಾತ್ರವಲ್ಲ, ಇದರ ರೀಚಾರ್ಜ್ ದರಗಳೂ ಕೂಡ ಕೈಗೆಟುವಷ್ಟು ಇದೆ.
ಜಿಯೋ ಭಾರತ್ ಬಹುತೇಕ ಫೀಚರ್ ಫೋನ್ ಆಗಿದ್ದರೂ ಸ್ಮಾರ್ಟ್ಫೋನ್ನ ಪ್ರಮುಖ ಕಾರ್ಯಗಳಿಗೆ ಇದು ಅವಕಾಶ ಕೊಡುತ್ತದೆ. ಇಂಟರ್ನೆಟ್ ಬಳಕೆಯಿಂದ ಹಿಡಿದು ಲೈವ್ ಟಿವಿ ವೀಕ್ಷಣೆವರೆಗೆ ಹಲವು ಸೌಲಭ್ಯಗಳು ಲಭ್ಯ ಇವೆ. 4ಜಿ ಫೀಚರ್ಗಳು ಈ ಫೋನ್ನಲ್ಲಿವೆ. ಯುಪಿಐ ಪೇಮೆಂಟ್ ಮಾಡಬಹುದು. ಜಿಯೋಭಾರತ್ನ ಮಾಸಿಕ ರೀಚಾರ್ಜ್ ದರ ಕೇವಲ 123 ರೂನಿಂದ ಆರಂಭವಾಗುತ್ತದೆ. 123 ರೂಗೆ 14ಜಿಬಿ ಡಾಟಾ ಸಿಗುತ್ತದೆ. ಧ್ವನಿ ಕರೆ ಎಷ್ಟು ಬೇಕಾದರೂ ಮಾಡಬಹುದು. ಸಿನಿಮಾ, ವಿಡಿಯೋ, ಲೈವ್ ಸ್ಪೋರ್ಟ್ಸ್, ಆಟದ ಹೈಲೈಟ್ಸ್ ಇತ್ಯಾದಿಯನ್ನು ವೀಕ್ಷಿಸಬಹುದು.
ಇದನ್ನು ಓದಿ: ಪ್ರೇಮ್ ಸಿಕ್ಸ್ ಪ್ಯಾಕ್ಸ್ ಲುಕ್ ನೋಡಿ ಫ್ಯಾನ್ಸ್ ಬೋಲ್ಡ್
ಜಿಯೋ ಪೇ ಆ್ಯಪ್ ಲಭ್ಯ ಇದ್ದು, ಯುಪಿಐ ಪೇಮೆಂಟ್ ಮಾಡಬಹುದು. ಹಣವನ್ನೂ ಸ್ವೀಕರಿಸಬಹುದು. ಕ್ಯುಆರ್ ಕೋಡ್ ಸ್ಕ್ಯಾನ್ ಮಾಡುವ ಫೀಚರ್ ಇದೆ. ಪೇಮೆಂಟ್ ಸ್ವೀಕರಿಸಿದಾಗ ಧ್ವನಿ ಸಂದೇಶವೂ ಬರುತ್ತದೆ. ಜಿಯೋ ಚ್ಯಾಟ್ ಎನ್ನುವ ಫೀಚರ್ ಇದ್ದು, ಈ ಪ್ಲಾಟ್ಫಾರ್ಮ್ನಲ್ಲಿ ಬೇರೆಯವರಿಗೆ ವಾಟ್ಸಾಪ್ ರೀತಿಯಲ್ಲಿ ವಿಡಿಯೋ, ಫೋಟೋ, ಮೆಸೇಜ್ ಕಳುಹಿಸಬಹುದು. ಈಗಿರುವ ಹೆಚ್ಚಿನ ಫೀಚರ್ ಫೋನ್ಗಳು 2ಜಿಯಾಗಿವೆ. ಕೇವಲ ಟೆಕ್ಸ್ಟ್ ಮೆಸೇಜ್ ಕಳುಹಿಸಲು, ಸ್ವೀಕರಿಸಲು, ಧ್ವನಿ ಕರೆ ಮಾಡಲು, ಸ್ವೀಕರಿಸಲು ಇವನ್ನು ಬಳಸಲಾಗುತ್ತಿದೆ. ಆದರೆ, ಜಿಯೋ ಫೋನ್ಗಳು ಸ್ಮಾರ್ಟ್ಫೋನ್ ರೀತಿ 3ಜಿ, 4ಜಿ ಸೇವೆಗಳನ್ನು ಒದಗಿಸುತ್ತಿವೆ. ಜಿಯೋಭಾರತ್ 4ಜಿ ಫೋನ್ನಲ್ಲಿ ಹಲವು ಸ್ಮಾರ್ಟ್ಫೋನ್ ಫೀಚರ್ಗಳಿವೆ. ಈಗಲೂ ಕೂಡ ಭಾರತದಲ್ಲಿ 20 ಕೋಟಿಗೂ ಅಧಿಕ ಫೀಚರ್ ಫೋನ್ ಬಳಕೆದಾರರಿದ್ದಾರೆ. ಇವರನ್ನು 4ಜಿಗೆ ಕರೆತರಲು ಜಿಯೋಭಾರತ್ ಫೋನ್ ಪರಿಣಾಮಕಾರಿ ಎನಿಸಬಹುದು.