ಕಿಚ್ಚ ಸುದೀಪ್ ತಾಯಿ ಸರೋಜಾ ಅವರು ನಿಧನವಾಗಿದ್ದು, ಅಂತಿಮ ದರ್ಶನಕ್ಕೆ ಆಗಮಿಸಿದ್ದ ರಾಘವೇಂದ್ರ ರಾಜ್ಕುಮಾರ್ ಅವರು, ಸರೋಜಾ ಹಾಗೂ ಪಾರ್ವತಮ್ಮನವರ ಗೆಳೆತನದ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ಸುದೀಪ್ಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದಿದ್ದಾರೆ.
ಕಿಚ್ಚ ಸುದೀಪ್ ತಾಯಿ ಸರೋಜಾ ಅವರು ಇಂದು ಬೆಳಿಗ್ಗೆ ನಿಧನ ಹೊಂದಿದ್ದಾರೆ. ಸುದೀಪ್ ಅವರ ಜೆಪಿ ನಗರದ ಮನೆಯ ಬಳಿ ಸುದೀಪ್ ತಾಯಿಯ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿದೆ. ಚಿತ್ರರಂಗದ ಹಲವು ಗಣ್ಯರು, ಸುದೀಪ್ ಅವರ ಬಂಧುಗಳು ಸುದೀಪ ಮನೆಗೆ ಆಗಮಿಸಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ರಾಘವೇಂದ್ರ ರಾಜ್ಕುಮಾರ್ ಅವರು ತಮ್ಮ ಮಕ್ಕಳೊಟ್ಟಿಗೆ ಬಂದು ಸುದೀಪ್ ಅವರ ತಾಯಿಯ ಅಂತಿಮ ದರ್ಶನ ಪಡೆದರು. ಈ ಸಂದರ್ಭದಲ್ಲಿ ಮಾತನಾಡಿದ ರಾಘವೇಂದ್ರ ರಾಜ್ಕುಮಾರ್, ಸುದೀಪ್ ಅವರ ತಾಯಿ ಹಾಗೂ ಪಾರ್ವತಮ್ಮನವರು ಆತ್ಮೀಯ ಗೆಳೆಯರಾಗಿದ್ದರು ಎಂಬ ವಿಷಯ ಹಂಚಿಕೊಂಡರು.