ಮೊಬೈಲ್, ಈಗ ಕಾಲಮಾನದ ದೈನಂದಿನ ಬದುಕಿನ ಒಂದು ಭಾಗವಾಗಿದೆ. ಅಂಗೈಯಲ್ಲಿಯೇ ಜಗತ್ತನ್ನು ತೋರಿಸುವ ಸುಂದರ ಸಾಧನ ಮೊಬೈಲ್. ಹೆಚ್ಚು ಕಡಿಮೆ ಎಲ್ಲರ ಬದುಕಿನ ಒಂದು ಭಾಗವೇ ಆಗಿ ಹೋಗಿದೆ. ಆದ್ರೆ ಅತಿಯಾದ್ರೆ ಎಲ್ಲವೂ ಅಪಾಯವೇ. ಹಾಗೆ ಮೊಬೈಲ್ ಕೂಡ. ಮೊಬೈಲ್ ಬಳಸುವುದರಿಂದ ಅನೇಕ ರೀತಿಯ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚಾಗುತ್ತವೆ ಎಂದು ಕೆನಡಿಯನ್ ಜರ್ನಲ್ ಆಫ್ ಕಾರ್ಡಿಯಾಲಜಿ ಅಧ್ಯಯನದ ವರದಿ ಹೇಳುತ್ತಿದೆ. ತಜ್ಞ ವೈದ್ಯರು ಬಿಡುಗಡೆ ಮಾಡಿರುವ ಈ ವರದಿ ಪ್ರಕಾರ ಅತಿಯಾದ ಮೊಬೈಲ್ ಬಳಕೆ ಹೃದಯ ಸಂಬಂಧಿ ಕಾಯಿಲೆಗಳನ್ನು ಉಂಟು ಮಾಡುತ್ತದೆಯಂತೆ.
ವಾರಕ್ಕೆ 5-29 ನಿಮಿಷ ಬಳಕೆಯಿಂದ ಶೇ.3ರಷ್ಟು ಹೆಚ್ಚಿನ ಅಪಾಯ
ನೀವು ವಾರಕ್ಕೆ 5 ರಿಂದ 29 ನಿಮಿಷ ಮೊಬೈಲ್ ಬಳಕೆ ಮಾಡಿದಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ನಿಮಗೆ ಅಂಟಿಕೊಳ್ಳುತ್ತವೆ. ನಿಮ್ಮ ದೇಹದಲ್ಲಿ ಶೇಕಡಾ 3 ರಷ್ಟು ಹೃದಯ ಸಂಬಂಧಿ ಕಾಯಿಲೆಗಳು ಸೃಷ್ಟಿಯಾಗು ಅಪಾಯವಿದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.
30-59 ನಿಮಿಷ ಮೊಬೈಲ್ ಬಳಕೆಯಿಂದ ಶೇ.7 ರಷ್ಟು ಹೆಚ್ಚಿನ ರಿಸ್ಕ್
ನೀವು ವಾರಕ್ಕೆ 30 ರಿಂದ 59 ನಿಮಿಷ ಮೊಬೈಲ್ನ್ನು ನಿರಂತರವಾಗಿ ಬಳಸಿದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಇದರಿಂದ ನಿಮ್ಮ ದೇಹದಲ್ಲಿ ಶೇಕಡಾ 7 ರಷ್ಟು ಹೃದಯ ಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆ ಶೇಕಡಾ 7 ರಷ್ಟಿದೆ. ಹೀಗಾಗಿ ಮೊಬೈಲ್ ಬಳಕೆ ಮಿತಿಯಲ್ಲಿದ್ದರೆ ಒಳ್ಳೆಯದು ಎಂದು ಹೇಳಲಾಗುತ್ತದೆ.
1-3 ಗಂಟೆ ಮೊಬೈಲ್ ಬಳಕೆ; ಶೇ.13 ರಷ್ಟು ಹಾರ್ಟ್ ಸಮಸ್ಯೆ
ನೀವು ವಾರಕ್ಕೆ 1 ಗಂಟೆಯಿಂದ ಮೂರು ಗಂಟೆಗಳ ಅವಧಿ ಮೊಬೈಲ್ ಬಳಸಿದ್ದೇ ಆದಲ್ಲಿ ನಿಮ್ಮ ಹೃದಯಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆ ಶೇಕಡಾ 13 ರಷ್ಟಿದೆ. ಹೀಗಾಗಿ ನೀವು ಮೊಬೈಲ್ನೊಂದಿಗೆ ಎಷ್ಟು ಸಮಯ ಕಳೆಯುತ್ತಿದ್ದೀರಿ ಅನ್ನೋದರ ಬಗ್ಗೆ ಅದರೊಂದಿಗೆ ಕಳೆಯುತ್ತಿರುವ ಸಮಯದ ಬಗ್ಗೆ ಸ್ವಲ್ಪ ಗಮನಕೊಡಿ.
4-6 ಗಂಟೆ ಮೊಬೈಲ್ ಬಳಕೆಯಿಂದ ಶೇ.15 ರಷ್ಟು ಹೆಚ್ಚಿನ ಹಾರ್ಟ್ ರಿಸ್ಕ್
ಇನ್ನು 4 ರಿಂದ 6 ಗಂಟೆಗಳ ಕಾಲ ಒಂದು ವಾರದಲ್ಲಿ ನೀವು ಮೊಬೈಲ್ನಲ್ಲಿ ಎಂಗೇಜ್ ಆಗಿದ್ರೆ ಶೇಕಡಾ 15 ರಷ್ಟು ಹಾರ್ಟ್ ಸಂಬಂಧಿಸಿದ ಸಮಸ್ಯೆಗಳು ನಿಮ್ಮವು ಆಗುತ್ತವೆ. ವಾರಕ್ಕೆ 6 ಗಂಟೆಗಿಂತ ಹೆಚ್ಚು ಮೊಬೈಲ್ ಬಳಸಿದ್ರೆ ಶೇಕಡಾ 21 ರಷ್ಟು ಹಾರ್ಟ್ ರಿಸ್ಕ್ ಸಮಸ್ಯೆಯಾಗಲಿದೆ. ಮೊಬೈಲ್ ಅತಿಯಾಗಿ ಬಳಸುವುದರಿಂದ ಹಾರ್ಟ್ಸ್ಟ್ರೋಕ್, ಕರೋನರಿ ಆರ್ಟರಿ ಡಿಸೀಸ್, ಹಾರ್ಟ್ ಫೆಲ್ಯೂವರ್ನಂತಹ ಸಮಸ್ಯೆಗಳು ಉಂಟಾಗುತ್ತದೆ ಎಂದು ಹೇಳಲಾಗುತ್ತಿದೆ. ಅದರಲ್ಲೂ ಡಯಾಬೀಟೀಸ್ ಇರುವವರಿಗೆ ಮತ್ತು ಸಿಗರೇಟ್ ಸೇವನೆ ಮಾಡುವವರಿಗೆ ಹೃದಯ ಸಂಬಂಧಿ ಸಮಸ್ಯೆಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.