ನಿನ್ನೆ ಶುರುವಾಗಬೇಕಿದ್ದ ಟೀಮ್ ಇಂಡಿಯಾ, ನ್ಯೂಜಿಲೆಂಡ್ ತಂಡದ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿಯಾಗಿತ್ತು. ಇದೀಗ ಕ್ರಿಕೆಟ್ ಅಭಿಮಾನಿಗಳಿಗೆ ಮಳೆರಾಯ ಗುಡ್ನ್ಯೂಸ್ ನೀಡಿದ್ದು, ಇಂದು ಪಂದ್ಯ ಆರಂಭ ಆಗೋದು ಬಹುತೇಕ ಕನ್ಫರ್ಮ್ ಆಗಿದೆ.
ಬೆಳಗ್ಗೆ ಜಿನುಗುತ್ತಿದ್ದ ಮಳೆರಾಯ ಬ್ರೇಕ್ ಕೊಟ್ಟಿದ್ದು, ಬೆಂಗಳೂರಲ್ಲಿ ಸೂರ್ಯ ಉದಯಿಸಿದ್ದಾನೆ. ಎಲ್ಲವೂ ಅಂದುಕೊಂಡಂತೆ ಆದರೆ ಬೆಳಗ್ಗೆ 9.30 ರಿಂದ ಪಂದ್ಯ ಆರಂಭ ಆಗಲಿದೆ. ಬಾಂಗ್ಲಾ ವಿರುದ್ಧ ಟೆಸ್ಟ್ ಸರಣಿಯನ್ನು ಕ್ಲೀನ್ಸ್ವೀಪ್ ಮಾಡಿರುವ ಟೀಂ ಇಂಡಿಯಾ, ನ್ಯೂಜಿಲೆಂಡ್ ವಿರುದ್ಧವೂ ಗೆಲುವಿನ ನಗಾರೆ ಬೀರುವ ಇರಾದೆಯಲ್ಲಿದೆ.
ಅದೇ ಟೀಮ್ ಫಿಕ್ಸ್..
ಬಾಂಗ್ಲಾ ಎದುರಿನ ಟೆಸ್ಟ್ನಲ್ಲಿ ಕಣಕ್ಕಿಳಿದಿದ್ದ ತಂಡವೇ ಬಹುತೇಕ ಕಣಕ್ಕಿಳಿಯಲಿದೆ. ಕಳೆದ ಸರಣಿಯಲ್ಲಿ ಕಳಪೆ ಪ್ರದರ್ಶನ ತೋರಿದ್ದ ರೋಹಿತ್, ಈಗ ಫಾರ್ಮ್ಗೆ ಮರಳಬೇಕಿದೆ. ದತ್ತು ಪುತ್ರ ವಿರಾಟ್ ಹಾಗೂ ಮನೆ ಮಗ ಕೆ.ಎಲ್.ರಾಹುಲ್ ಮೇಲೆ ಹೆಚ್ಚಿನ ನಿರೀಕ್ಷೆ ಇದ್ದು, ಇವರಿಬ್ಬರ ಬ್ಯಾಟಿಂಗ್ ಝಲಕ್ ನೋಡಲು ಫ್ಯಾನ್ಸ್ ತುದಿಗಾಲಿನಲ್ಲಿ ನಿಂತಿದ್ದಾರೆ.