ಪುಣೆಯಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸಂಕಷ್ಟಕ್ಕೆ ಸಿಲುಕಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಏಕೆಂದರೆ ಕೇವಲ 103 ರನ್ಗೆ ರೋಹಿತ್, ಗಿಲ್, ವಿರಾಟ್ ಕೊಹ್ಲಿ ಸೇರಿದಂತೆ 7 ವಿಕೆಟ್ಗಳನ್ನ ಕಳೆದುಕೊಂಡಿದೆ.
ಇಂದು 16 ರನ್ಗಳಿಂದ ಬ್ಯಾಟಿಂಗ್ ಮುಂದುವರೆಸಿದ್ದ ಟೀಮ್ ಇಂಡಿಯಾ ತಂಡದ ಮೊತ್ತ 80 ಆಗುವಷ್ಟರಲ್ಲಿ 5 ವಿಕೆಟ್ಗಳನ್ನು ಕಳೆದುಕೊಂಡಿದೆ. ಮೊದಲ ದಿನದ ಕೊನೆಯಲ್ಲಿ ರೋಹಿತ್ ಶರ್ಮಾ ಅವರೊಬ್ಬರೇ ಔಟ್ ಆಗಿದ್ದರು. ಆದರೆ ಇಂದು ಬೆಳಗ್ಗೆಯೇ ಭಾರತದ 6 ವಿಕೆಟ್ ಕಳೆದುಕೊಂಡಿದೆ. ಇವತ್ತಿಗೆ ಕ್ರೀಸ್ ಕಾಯ್ದುಕೊಂಡಿದ್ದ ಯಶಸ್ವಿ ಜೈಸ್ವಾಲ್ 30, ಶುಭ್ಮನ್ ಗಿಲ್ 30 ರನ್ ಗಳಿಸಿ ಔಟ್ ಆದರು.
ಇದನ್ನು ಓದಿ: ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ KL ರಾಹುಲ್!
ಶುಭ್ಮನ್ ಗಿಲ್ ಔಟ್ ಆದ ಮೇಲೆ ಬ್ಯಾಟಿಂಗ್ ಮಾಡಲು ಬಂದ ವಿರಾಟ್ ಕೊಹ್ಲಿ ಬಹಳ ಹೊತ್ತು ನಿಲ್ಲಲಿಲ್ಲ. ಒಂದೇ ಒಂದು ರನ್ ಗಳಿಸಿ ವಿರಾಟ್ ಆಡುವಾಗ ಸ್ಯಾಂಟ್ನರ್ ಬೌಲಿಂಗ್ನಲ್ಲಿ ಕ್ಲೀನ್ ಬೋಲ್ಡ್ ಆದರು. ಈ ವೇಳೆ ಸ್ಯಾಂಟ್ನರ್ ವಿಕೆಟ್ ಪಡೆದು ಸಂಭ್ರಮಿಸಿದರು. ಕೊಹ್ಲಿ ಪುಣೆಯಲ್ಲಿ ಆಡುತ್ತಾರೆಂದು ನಿರೀಕ್ಷೆ ಇಟ್ಟುಕೊಂಡಿದ್ದ ಫ್ಯಾನ್ಸ್ಗೆ ಇದರಿಂದ ಸಾಕಷ್ಟು ನಿರಾಸೆ ಆಯಿತು. ಇನ್ನು ವಿಕೇಟ್ ಕೀಪರ್ ರಿಷಬ್ ಪಂತ್ ಕಳೆದ ಮ್ಯಾಚ್ನಲ್ಲಿ ಆಡಿದಂತೆ ಈ ಬಾರಿಯು ಬ್ಯಾಟಿಂಗ್ ಮಾಡುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ ಪಂತ್ ಕೇವಲ 18 ರನ್ಗೆ ಕ್ಲೀನ್ ಬೋಲ್ಡ್ ಆದರು.
ಸರ್ಫರಾಜ್ ಖಾನ್ ಏನಾದರೂ ಮ್ಯಾಜಿಕ್ ಮಾಡುತ್ತಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಸರ್ಫರಾಜ್ ಕೇವಲ 11 ರನ್ಗೆ ಕ್ಯಾಚ್ ನೀಡಿ, ಪೆವಿಲಿಯನ್ಗೆ ನಡೆದರು. ಇವರ ಬೆನ್ನಲ್ಲೇ ಆರ್.ಆಶ್ವಿನ್ ಕೂಡ ಎಲ್ಬಿಗೆ ಬಲಿಯಾದರು. ಸದ್ಯ ಭಾರತ ಮೊದಲ ಇನ್ನಿಂಗ್ಸ್ನ ಲಂಚ್ ಬ್ರೇಕ್ ವೇಳೆಗೆ 107 ರನ್ಗೆ 7 ವಿಕೆಟ್ಗಳನ್ನ ಕಳೆದುಕೊಂಡಿದೆ. ಮಹಾರಾಷ್ಟ್ರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತದ ಜೊತೆ ನ್ಯೂಜಿಲೆಂಡ್ ಮತ್ತೆ ಮೇಲುಗೈ ಸಾಧಿಸುವ ಲಕ್ಷಣಗಳು ಕಾಣುತ್ತಿವೆ. ಕಿವೀಸ್ 100ಕ್ಕೂ ಹೆಚ್ಚು ರನ್ಗಳನ್ನ ಲೀಡ್ ಪಡೆಯಬಹುದು. ಕಿವೀಸ್ ಪರ ಮಿಚೆಲ್ ಸ್ಯಾಂಟ್ನರ್ 4 ವಿಕೆಟ್ ಪಡೆದಿದ್ದಾರೆ.