ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಬಿಗ್ಬಾಸ್ ಶೋನಲ್ಲಿ ಕಿಚ್ಚು ಹೆಚ್ಚಾಗಿದೆ. ಇದೆ ಮೊದಲ ಸಲ ಬಿಗ್ ಬಾಸ್ ಮನೆಯಿಂದ ಇಬ್ಬರು ಸ್ಪರ್ಧಿಗಳು ನಿಯಮ ಮೀರಿದ ಹಿನ್ನೆಲೆಯಲ್ಲಿ ನೇರವಾಗಿ ಎಲಿಮಿನೇಟ್ ಆಗಿದ್ದಾರೆ. ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಕ್ಕೆ ಲಾಯರ್ ಜಗದೀಶ್, ದೈಹಿಕ ಹಲ್ಲೆ ಆರೋಪದ ಮೇಲೆ ರಂಜಿತ್ ಶುಕ್ರವಾರ ಮನೆ ತೊರೆದಿದ್ದರು.
ಇದೀಗ ವಾರದ ಕಥೆ ಕಿಚ್ಚ ಜತೆಯಲ್ಲಿ ನಟ ಸುದೀಪ್ ಬಿಗ್ಬಾಸ್ ನಿರ್ಧಾರವನ್ನೇ ಪ್ರಶ್ನೆ ಮಾಡ್ತಾರಾ? ಕಿಚ್ಚನ ಪಂಚಾಯ್ತಿಯಲ್ಲಿ ಗರ್ಮಾಗರಂ ವಿಷ್ಯಗಳು ಯಾವುದು ಎಂಬ ಕುತೂಹಲ ಮೂಡಿದೆ.
ಸುದೀಪ್ಗೆ ವೀಕ್ಷಕರ ಪ್ರಶ್ನೆ ಮತ್ತು ಬೇಡಿಕೆ:
-ಜಗ್ಗು ಇಲ್ಲದ ಬಿಗ್ ಬಾಸ್ ನಾವು ನೋಡಲ್ಲ. ಲಾಯರ್ ಜಗದೀಶ್ಗೆ ನ್ಯಾಯ ಸಿಗಬೇಕು. ಪುರುಷರಿಗೆ ಆದ ನಿಂದನೆ ಅಪಮಾನದ ಬಗ್ಗೆ ಕರ್ನಾಟಕದ ಜನತೆ ಸಹಿಸುವುದಿಲ್ಲ. ಅವರನ್ನ ಮತ್ತೆ ಅಖಾಡಕ್ಕೆ ಇಳಿಸಲೇಬೇಕು. ಹೆಣ್ಣಿಗೆ ಮಾತ್ರ ಅವಮಾನ ಆಗಿರಲಿಲ್ಲ ಗಂಡಿಗೂ ಅವಮಾನ ಆಗಿದೆ ಇದರ ಬಗ್ಗೆ ಪ್ರಶ್ನೆ ನೀವು ಪ್ರಶ್ನೆ ಎತ್ತಲೇಬೇಕು. ಗಂಡಿನ ಮರ್ಯಾದೆಗೆ ಧಕ್ಕೆ ಬರ್ತಿದೆ ಈ ಬಿಗ್ ಬಾಸ್ ಮನೆಯ ಹೆಣ್ಣು ಮಕ್ಕಳಿಂದ. ಮುಂದೆ ಪುರುಷ ರಕ್ಷಣಾ ವೇದಿಕೆಯನ್ನು ತೆರೆದರು ತೆರೆಯಬಹುದು.
-ಸುದೀಪ್ ಸರ್, ಜಗದೀಶ್ ಅವರನ್ನ ಏಕವಚನದಲ್ಲಿ ಮಾತಾಡುವುದಲ್ಲದೇ ಹೋರ್ಗಡೆ ಎನ್ ತಗೊಂಡು ಹೊಡೀತಾರೆ ನಿಂಗೆ ಎನ್ನುತ್ತ ತಳ್ಳಿದ್ದಾರೆ ಭವ್ಯ ಇದಕ್ಕೆ ನ್ಯಾಯ ಸಿಗುತ್ತಾ?
-ಮಾನಸ ಅವರು ಒಬ್ಬ ಗಂಡಸಿಗೆ ಸೀರೆ ಕೊಡ್ತೀನಿ ಉಟ್ಕೋ, ಅಂತಾರೆ ಅವಳ ಗಂಡ ತುಕಾಲಿ, ಹೆಂಡತಿ ತುಕಾಲಿ ಪ್ರೊ ಮ್ಯಾಕ್ಸ್ ಅಂತ ನೆಟ್ಟಿಗರು ಕಿಡಿಕಾರಿದ್ದಾರೆ. ಗಂಡಿನ ಘನತೆಗೆ ಧಕ್ಕೆ ಆದಾಗ ತಿರುಗೇಟು ಕೊಟ್ಟರೆ ಅದು ಮಹಿಳೆಗೆ ಅಗೌರವವೇ? ಕಿಚ್ಚ ಸುದೀಪ್ ಇದಕ್ಕೆ ನ್ಯಾಯ ಒದಗಿಸುವ ಮೂಲಕ ಪುರುಷರ ಘನತೆ ಕಾಪಾಡಬೇಕು ಅಂದಿದ್ದಾರೆ.
-ಜಗ್ಗುನ ಪ್ರವೋಕ್ ಮಾಡಿದ ಎಲ್ಲರಿಗೂ ಅವರ ತಪ್ಪಿನ ಅರಿವು ಮಾಡಿಸಬೇಕು. ಹೆಣ್ಣಿನ ಬಗ್ಗೆ ಕೆಟ್ಟದಾಗಿ ಮಾತಾಡುವುದು ತಪ್ಪು. ಜಗದೀಶ್ಗೆ ಶಿಕ್ಷೆಯಾಗಿದ್ದು ಸರಿ. ಆದರೆ ಚೈತ್ರ ಹೇಳ್ತಾರೆ ಅಪ್ಪನಿಗೆ ಹುಟ್ಟಿದರೆ ಬಾ, ಒಬ್ಬ ಅಪ್ಪನಿಗೆ ಹುಟ್ಟಿದ್ದರೆ ಬಾ ಅಂತ ಇದರಲ್ಲಿ ಆಗಿರುವುದು ಒಂದು ಹೆಣ್ಣಿಗೆ ಅವಮಾನ ಅಂದರೇ (ಜಗದೀಶ್ ತಾಯಿಯ ಬಗ್ಗೆ ) ಇದರ ಬಗ್ಗೆನೂ ಚರ್ಚೆ ಆಗಲೇಬೇಕು.
-ಜಗ್ಗು ಮಾತಾಡಿದ್ದು ತಪ್ಪು ಅದರಲ್ಲಿ 2 ಮಾತಿಲ್ಲ.. ಆದ್ರೆ ಸತತ 3 ದಿನಗಳಿಂದ ರಂಜಿತ್, ಮಂಜು, ತ್ರಿವಿಕ್ರಮ ಜಗಳ ಆಡೋ ತರ ಪ್ರಚೋದನೆ ಮಾಡಿದ್ದು ತಪ್ಪಲ್ವಾ?.. ಮಾನಸ ಮಾತು ಅಸಹ್ಯವಾಗಿತ್ತು ಅವಳನ್ನು ಯಾಕೆ ಹೊರಗೆ ಹಾಕಿಲ್ಲ. . ಚೈತ್ರ, ಭವ್ಯ, ಮಾನಸ 3 ಜನ ಅಮ್ಮ ಅಪ್ಪ ಹೆಂಡ್ತಿ ಅನ್ನೋ ಶಬ್ದ ಬಳಸಿ ಮಾತನಾಡುವುದಲ್ಲದೇ ಜಗದೀಶ್ ಅವರನ್ನ ಥಳಿಸಿದ್ದಾರೆ.
ರಂಜಿತ್ಗೆ ವೀಕ್ಷಕರ ಮೆಚ್ಚುಗೆ
ರಂಜಿತ್ ನೇರವಾಗಿ ಮನೆಯಿಂದ ಹೊರಬರುತ್ತಿದ್ದಂತೆ, ಸೋಷಿಯಲ್ ಮೀಡಿಯಾದಲ್ಲಿ ರಂಜಿತ್ ಪರವಾಗಿ ಮೆಚ್ಚುಗೆಯ ಕಾಮೆಂಟ್ಗಳು ಸಂದಾಯವಾಗುತ್ತಿವೆ. “ನಿಮ್ಮ ಹೆಸರು ಬಿಗ್ಬಾಸ್ನಲ್ಲಿ ಶಾಶ್ವತ. ಒಂದೊಳ್ಳೆಯ ಉದ್ದೇಶಕ್ಕೆ ನೀವು ನಿಯಮ ಮುರಿದಿದ್ದೀರಿ. ಇದನ್ನು ಬೇರೆಯವರೂ ಮಾಡಲು ಅಸಾಧ್ಯ” ಎಂದು ಧ್ರುವ ಎಂಬುವವರು ಟ್ವಿಟ್ ಮಾಡಿದ್ದಾರೆ. “ಉದ್ದೇಶ ಸರಿ. ಅಸಲಿ ವಿಚಾರ ಬಿಗ್ಬಾಸ್ಗೂ ಗೊತ್ತು, ಅಷ್ಟೇ ಸಾಕು.. ಮಿಸ್ ಯೂ ರಂಜಿತ್” ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಒಳ್ಳೆಯ ಉದ್ದೇಶಕ್ಕೆ ಹೋಗ್ತಿದ್ದೀಯಾ ಮಗ. ಸೂರ್ಯ ರಂಜಿತ್ ಬಿಬಿ ಇರೋವರೆಗೂ ಇದು ಒಂದು ಉದಾಹರಣೆಯಾಗಿ ನಿಲ್ಲಲಿದೆ. ಒಂದೊಳ್ಳೆಯ ಕಾರಣಕ್ಕೆ ನೀವು ಆಚೆ ಹೋಗಿದ್ದೀರಿ” ಎಂದು ವೀಕ್ಷಕರು ಟ್ವಿಟ್ ಮಾಡಿದ್ದಾರೆ.