ಸದ್ಯ ಇರಾನ್ ಇಸ್ರೇಲ್ ನಡೆವೇ ನೇರವಾದ ಯುದ್ಧವೊಂದ ಜಾರಿಯಲ್ಲಿದೆ. ಇರಾನ್ ಅಂಗಳಕ್ಕೆ ನುಗ್ಗಿ ಹಮಾಸ್ ನಾಯಕನನ್ನು ಇಸ್ರೇಲ್ ಹೊಡೆದು ಹಾಕಿದ್ದು. ಹಿಜ್ಬುಲ್ಲಾ ಮುಖಂಡನ ಹತ್ಯೆ, ಈ ಎಲ್ಲದಕ್ಕೂ ಕಾರಣ ಇರಾನ್ನ ಟಾಪ್ ಕಮಾಂಡರ್ ಇಸ್ಮಾಯಿಲ್ ಖಾನಿ ಎಂಬುವ ಅನುಮಾನವೊಂದು ಈಗ ಇರಾನ್ಗೆ ಬಂದಿದೆ. ಇಸ್ಲಾಯಿಲ್ ಖಾನಿ ಲೆಬನಾನ್ಗೆ ಪ್ರವಾಸ ಬೆಳೆಸಿದಾಗಲೇ ಸಯ್ಯದ್ ಹಸನ್ ನಸ್ರುಲ್ಲಾನ ಹತ್ಯೆಯಾಗಿತ್ತು. ಅಂದಿನಿಂದ ಇಸ್ಮಾಯಿಲ್ ಖಾನಿ ಇರಾನ್ನಿಂದ ಕಣ್ಮರೆಯಾಗಿದ್ದಾನೆ. ಈಗ ಇರಾನ್ಗೆ ಮತ್ತೊಂದು ಮರ್ಮಾಘಾತವಾದಂತಾಗಿದೆ. ಇಸ್ಮಾಯಿಲ್ ಖಾನಿ ಮೊಸಾದ್ನ ಏಜೆಂಟ್ ಆಗಿದ್ದ ಎನ್ನುವ ಅನುಮಾನ ಶುರುವಾಗಿದೆ. ಇಸ್ರೇಲ್ ಈ ಹಿಂದೆ ನಡೆಸಿದ ಆಪರೇಷನ್ಗಳೆಲ್ಲ ಇಸ್ಮಾಯಿಲ್ ಖಾನಿಯಿಂದಲೇ ಯಶಸ್ವಿಯಾಗಿರುವ ಬಗ್ಗೆ ಇರಾನ್ಗೆ ಶಂಕೆ ವ್ಯಕ್ತವಾಗಿದೆ.
ಮೂಲಗಳ ಪ್ರಕಾರ ಇಸ್ರೇಲ್ ಹಿಜ್ಬುಲ್ಲಾದ ಹಿರಿಯ ಮುಖಂಡ ಹಶೀಮ್ ಸಫೀಯುದ್ದಿನ್ ಇರುವ ಪ್ರದೇಶದ ಮೇಲೆ ಏರ್ಸ್ಟ್ರೈಕ್ ಮಾಡಿದಾಗ ಖಾನಿ ಬೀರತ್ನ ದಕ್ಷಿಣ ಸಬ್ಬರ್ಸ್ನಲ್ಲಿ ದಹಿಯೇಹ್ನಲ್ಲಿದ್ದಾನೆ ಎಂದು ಭಾವಿಸಲಾಗಿತ್ತು. ಆದ್ರೆ ಅಲ್ಲಿಯ ಮೂಲಗಳು ಹೇಳುವ ಪ್ರಕಾರ ಇಲ್ಲಿಯವರೆಗೂ ಖಾನಿ ಸಫೀಯುದ್ಧೀನ್ನನ್ನು ಭೇಟಿಯೇ ಮಾಡಿಲ್ಲ ಎಂದು ಹೇಳಾಗಿದೆ.
ಯಾರೂ ಇಸ್ಮಾಯಿಲ್ ಖಾನಿ ?
2020ರಲ್ಲಿ ಯುಎಸ್ನಿಂದ ಖಾಸೀಮ್ ಸೋಲೋಮನಿಯನ್ನು ಹತ್ಯೆ ಮಾಡಿದ ಸಂದರ್ಭದಲ್ಲಿ ಇಸ್ಮಾಯಿಲ್ ಖಾನಿಯನ್ನು ಬಂಡಾಯ ಗಾರ್ಡ್ಸ್ ಕ್ವಾರ್ಡ್ನ ಮುಖ್ಯಸ್ಥನ್ನಾಗಿ ನೇಮಕ ಮಾಡಲಾಗಿತ್ತು. ತೆಹ್ರಾನ್ ಜೊತೆ ಹೊಂದಾಣಿಕೆ ಮಾಡಿಕೊಂಡಿರುವ ಮಧ್ಯಪ್ರಾಚ್ಯದ ಎಲ್ಲಾ ಇಸ್ಲಾಂ ರಾಷ್ಟ್ರಗಳ ಒಪ್ಪಿಗೆ ಮೇರೆಗೆ ಈ ನಿರ್ಧಾರಕ್ಕೆ ಬರಲಾಗಿತ್ತು. ಆದ್ರೆ ಸೋಲೆಮನಿ ಇರುವಾಗ ಇರಾನ್ನ ಪ್ರಾದೇಶಿಕ ಮೈತ್ರಿಗಳೊಂದಿಗೆ ಇದ್ದ ಬಾಂಧವ್ಯ ಇಸ್ಲಾಯಿಲ್ ಖಾನಿ ಬಂದ ನಂತರ ಇರಲಿಲ್ಲ. ಅವನ ಮಟ್ಟಕ್ಕೆ ಖಾನಿ ಹೋಗಲು ಆಗಲಿಲ್ಲ. ಇಸ್ಮಾಯಿಲ್ ಖಾನಿ ನೇತೃತ್ವದಲ್ಲಿ ಇರಾನ್ ಜೊತೆ ಕೈಜೋಡಿಸಿದ್ದ ಹಿಜ್ಬುಲ್ಲಾ ಹಾಗೂ ಇರಾನ್ ಸೇನಾಪಡೆಯಗಳು ಅನೇಕ ರೀತಿಯ ಒತ್ತಡಗಳನ್ನು ಎದುರಿಸಿದವು. ಪ್ರಮುಖವಾಗಿ ಇಸ್ರೇಲಿ ಸೇನಾಪಡೆಗಳಿಂದ. ಈ ಹಿಜ್ಬುಲ್ಲಾ ಹಾಗೂ ಇರಾನ್ ಸೇನಾಪಡೆಗಳಿಗೆ ಸಾಕಷ್ಟು ತೊಂದರೆಯಾಯ್ತು. ಸೋಲೆಮನಿ ಇದ್ದ ಸಮಯಕ್ಕೆ ಹೋಲಿಸಿ ನೋಡಿದಾಗ ವಿಪರೀತ ಬದಲಾವಣೆಗಳು ಆಗಿದ್ದವು.
ಒಂದು ಹಂತದಲ್ಲಿ ಈ ಎಲ್ಲಾ ಬಿಂದುಗಳನ್ನು ಒಂದೊಂದಾಗಿ ಸೇರಿಸಿಕೊಂಡು ನೋಡಿದಾಗ ಇರಾನ್ಗೆ ಇಸ್ಮಾಯಿಲ್ ಖಾನಿ ಇಸ್ರೇಲ್ನ ಮೊಸಾದ್ ಏಜೆಂಟ್ ಇರಬಹುದು ಎಂಬ ಒಂದು ಅನುಮಾನ ದಟ್ಟವಾಗಿದೆ. ಒಂದು ಹಂತದಲ್ಲಿ ಸಫೀಯುದ್ದೀನ್ ಮೇಲೆ ದಾಳಿಯಾದ ಸಮಯದಲ್ಲಿಯೇ ಇಸ್ಮಾಯಿಲ್ ಕೂಡ ಅಸುನೀಗಿದ್ದಾನೆ ಎನ್ನಲಾಗಿತ್ತು.ಆದ್ರೆ ಸದ್ಯದ ಅನುಮಾನಗಳನ್ನು ನೋಡಿದ್ರೆ, ತನ್ನ ಕಾರ್ಯವನ್ನು ಸಾಧಿಸಿ ಇಸ್ಮಾಯಿಲ್ ಇಸ್ರೇಲ್ಗೆ ಹಾರಿರುವ ಅನುಮಾನ ದಟ್ಟವಾಗಿದೆ.