ಸ್ಯಾಂಡಲ್ವುಡ್ ನಟ ದರ್ಶನ್ ಅವರ ಆರೋಗ್ಯದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಜೋರಾಗಿದೆ. ನಟ ದರ್ಶನ್ ಬಳ್ಳಾರಿ ಜೈಲಿನಿಂದ ಮಧ್ಯಂತ ಜಾಮೀನು ಪಡೆದು ರಿಲೀಸ್ ಆಗಿದ್ದು ಸದ್ಯ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊಲೆ ಅರೋಪಿ ದರ್ಶನ್ ಗೆ ಬೆನ್ನು ನೋವು ಹಿನ್ನೆಲೆ ಬಿಜಿಎಸ್ ಆಸ್ಪತ್ರೆಯಲ್ಲಿ ಟ್ರೀಟ್ಮೆಂಟ್ ಕೊಡಲಾಗುತ್ತಿದೆ. ನಟ ಅಲ್ಲಿ ಅಡ್ಮಿಟ್ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನು ಓದಿ: ರೈತರಿಗೆ ನೀಡಿರುವ ವಕ್ಫ್ ನೋಟಿಸ್ ತಕ್ಷಣ ವಾಪಸ್ : ಸಿಎಂ ಖಡಕ್ ಸೂಚನೆ
ತೀವ್ರ ಬೆನ್ನು ನೋವು ಇರುವ ಕಾರಣ ಸರ್ಜರಿ ಮಾಡೋ ಸಾಧ್ಯತೆ ಎಂದು ಹೇಳಲಾಗುತ್ತಿದೆ. ಫಿಸಿಯೋ ಥಿರೆಪಿಯಿಂದ ವಾಸಿಯಾಗಲು5-6 ತಿಂಗಳು ಸಮಯ ಬೇಕು. ಸದ್ಯದ ಪರಿಸ್ಥಿತಿಯಲ್ಲಿ ದರ್ಶನ್ ಹೆಚ್ಚು ದಿನ ಚಿಕಿತ್ಸೆಗೆ ಲಭ್ಯ ಇಲ್ಲ ಎನ್ನುವ ಕಾರಣಕ್ಕೆ ಸರ್ಜರಿ ಬಗ್ಗೆ ಮಾತನಾಡಲಾಗುತ್ತಿದೆಯಂತೆ. ಬೆನ್ನು ನೋವು ಈಗಾಗಲೇ ಜಾಸ್ತಿ ಇರೋ ಕಾರಣ ಕಾಲಿಗೆ ಸಮಸ್ಯೆ ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಕಾರಣದಿಂದ ವೈದ್ಯರು ಸರ್ಜರಿಗೆ ಪ್ಲಾನ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ನಿನ್ನೆ ಆ್ಯಂಟಿ ಬಯೋಟಿಕ್ ಸೆನ್ಸಿಟಿವಿಟಿ ಚೆಕ್ ಮಾಡಿ ರುವ ವೈದ್ಯರು ನಟನ ಆರೋಗ್ಯದ ಮೇಲೆ ನಿಗಾ ಇಟ್ಟಿದ್ದಾರೆ. ಆ್ಯಂಟಿ ಬಯೋಟಿಕ್ ಸೆನ್ಸಿಟಿವಿಟಿ ಟೆಸ್ಟ್ ಆಂದ್ರೆ ಸರ್ಜರಿ ನಂತರ ಯಾವ ಆ್ಯಂಟಿ ಬಯೋಟಿಕ್ ಮೆಡಿಸಿನ್ ಕೊಡಬೇಕು ಎನ್ನುವುದನ್ನು ಪರೀಕ್ಷೆ ಮಾಡೋದಾಗಿದೆ. ಕೆಲವು ಬಾರಿ ಕೆಲವು ಆ್ಯಂಟಿ ಬಯೋಟಿಕ್ ನೀಡಿದಾಗ ಅಲರ್ಜಿ ಆಗೋ ಸಾಧ್ಯತೆ ಇರುತ್ತದೆ.
ಇದನ್ನು ಓದಿ: ದರ್ಶನ್ ಚಿಕಿತ್ಸೆ ಬಗ್ಗೆ ಗೌಪ್ಯತೆ ಕಾಪಾಡುವಂತೆ ಪತ್ನಿ ಮನವಿ!
ಈ ಹಿನ್ನೆಲೆ ಸರ್ಜರಿ ನಂತರ ಅಲರ್ಜಿ ಆದರೆ ರೋಗಿ ರಿಕವರಿ ಅಗೋಕೆ ಕಷ್ಟ ಆಗುತ್ತದೆ. ಇದರ ಜೊತೆ ದರ್ಶನ್ ಗೆ ಲಿವರ್ ಫಂಕ್ಷನ್ ಚೆಕಪ್ ಕೂಡ ಮಾಡಲಾಗಿದೆ ಎಂದು ಹೇಳಲಾಗಿದೆ. ದರ್ಶನ್ಗೆ ಬಳ್ಳಾರಿಗೆ ಶಿಫ್ಟ್ ಆದ್ಮೇಲೆ ಯಾಕೆ ಹೆಚ್ಚಾಯ್ತು ಆರೋಗ್ಯ ಸಮಸ್ಯೆ? ನಟ ದರ್ಶನ್ ಡಿಪ್ರೆಷನ್ಗೆ ಒಳಗಾಗಿದ್ರಾ…? ಡಿಪ್ರೆಷನ್ನಿಂದ ಬೆನ್ನುಹುರಿ ಸಮಸ್ಯೆ ಹೆಚ್ಚಾಯ್ತಾ ಎನ್ನುವ ಚರ್ಚೆ ಶುರುವಾಗಿದೆ. ವೈದ್ಯರಿಂದ ಹೊಸ ಅಂಶ ಬೆಳಕಿಗೆ ಬಂದಿದ್ದು ನಟ ದರ್ಶನ್ ಅವರಿಗೆ ಬೆಂಗಳೂರಿನಲ್ಲಿದ್ದಾಗ ಆರೋಗ್ಯದ ಸಮಸ್ಯೆ ಕಂಡು ಬಂದಿರಲಿಲ್ಲ. ಬಳ್ಳಾರಿಗೆ ಹೋದ ಮೇಲೆ ಯಾಕೆ ಸಮಸ್ಯೆ ಹೆಚ್ಚಾಯ್ತು ಅನ್ನುವುದರ ಡೀಟೇಲ್ಸ್ ರಿವೀಲ್ ಆಗಿದೆ. ಬೆಂಗಳೂರಿನಲ್ಲಿ ದರ್ಶನ್ಗೆ ಏಕಾಂಗಿತನ ಕಾಡುತ್ತಿರಲಿಲ್ಲ. ಇಲ್ಲಿ ಆಪ್ತರು ಕೂಡಾ ಇದ್ದರು. ಆದರೆ ಬಳ್ಳಾರಿಯಲ್ಲಿ ಒಂದೇ ಕೋಣೆಯಲ್ಲಿ ಒಬ್ಬರೇ ಇದ್ದದ್ದೇ ಹೆಚ್ಚು. ಈ ಹಿನ್ನೆಲೆ ಡಿಪ್ರೆಷನ್ ಹೆಚ್ಚಾಗಿರಲಿದೆ. ದರ್ಶನ್ರಂತೆ ಅನೇಕ ರೋಗಿಗಳು ಡಿಪ್ರೆಷನ್ನಿಂದ ನೋವಿನ ಸಮಸ್ಯೆ ಎದುರಿಸ್ತಾರೆ ಎಂದು ಸಂಜಯ್ ಗಾಂಧಿ ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ.