ಬಣ್ಣದ ಲೋಕ ಅದರಲ್ಲಿಯೂ ಬಾಲಿವುಡ್ ಗಾಸಿಪ್ಗಳಿಗೇನೂ ಕಮ್ಮಿ ಇಲ್ಲ. ಒಬ್ಬರ ಜೊತೆ ಇನ್ನೊಬ್ಬರ ಹೆಸರು ಥಳಕು ಹಾಕಿಕೊಳ್ಳುತ್ತಲೇ ಇರುತ್ತದೆ. ಇದೆ ರೀತಿ, ಕೆಲ ದಿನಗಳ ಹಿಂದೆ ಕದ್ದುಮುಚ್ಚಿ ನಟಿ ಜಾಹ್ನವಿ ಕಪೂರ್ ಮತ್ತು ಅವರ ಬಾಯ್ಫ್ರೆಂಡ್ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ, ಶಿಖರ್ ಪಹರಿಯಾ ಅವರ ಮದ್ವೆಯಾಗೋಯ್ತು ಎಂದು ಭಾರಿ ಸುದ್ದಿಯಾಗಿತ್ತು. ಇವರ ಸುದ್ದಿ ಗಾಸಿಪ್ ಅನ್ನುವುದಕ್ಕಿಂತಲೂ ಹೆಚ್ಚಾಗಿ ಇಬ್ಬರೂ ನಡೆಡುಕೊಳ್ಳುತ್ತಿರುವ ರೀತಿಯಿಂದ ಮದುವೆಯಾಗುತ್ತಿದ್ದಾರೆ ಎಂದೇ ಹೇಳಲಾಗುತ್ತಿದೆ.
ಕೆಲ ದಿನಗಳ ಹಿಂದೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಮಹಾಕಾಳೇಶ್ವರ ಜ್ಯೋತಿರ್ಲಿಂಗ ದೇವಸ್ಥಾನಕ್ಕೆ ಈ ಜೋಡಿ ಭೇಟಿ ನೀಡಿದ್ದ ಜೋಡಿ ಅಲ್ಲಿ ಒಟ್ಟಿಗೆ ಕುಳಿತು ದಂಪತಿಯಂತೆ ವಿಶೇಷ ಪೂಜೆ ಸಲ್ಲಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು. ಇಬ್ಬರು ಒಟ್ಟಿಗೆ ಪೂಜೆ ಸಲ್ಲಿಸಿದ ಫೋಟೋಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದವು. ಮದುವೆ ಆಗೋಯ್ತಾ ಅಥವಾ ಶೀಘ್ರವೇ ಮದ್ವೆ ಆಗಲಿದ್ದಾರೆ ಎನ್ನುವ ಚರ್ಚೆ ಬಿ-ಟೌನ್ನಲ್ಲಿ ಶುರುವಾಗಿತ್ತು. ಈ ಬಗ್ಗೆ ನಟಿಯಾಗಲೀ ಶಿಖರ್ ಆಗಲೀ ಯಾವುದೇ ಸ್ಪಷ್ಟನೆ ಕೊಟ್ಟಿಲ್ಲ.
ಆದರೆ ಇದೀಗ ಇವರಿಬ್ಬರ ಎಂಗೇಜ್ಮೆಂಟ್ ಗುಟ್ಟಾಗಿ ನಡೆದೇ ಹೋಗಿದೆ ಎನ್ನುವಂಥ ಫೋಟೋಗಳು ವೈರಲ್ ಆಗ್ತಿವೆ. ಇದರಲ್ಲಿ ಜಾಹ್ನವಿ ಕಪೂರ್ ಮದುಮಗಳಂತೆ ಮಿಂಚುತ್ತಿದ್ದಾರೆ. ಹಾಗೂ ಅಲ್ಲಿ ಕೆಲವು ಸೆಲೆಬ್ರಿಟಿಗಳನ್ನೂ ಫೋಟೋಗಳಲ್ಲಿ ನೋಡಬಹುದು. ಅಷ್ಟಕ್ಕೂ ಇವರಿಬ್ಬರ ಸಂಬಂಧ ಸಂಬಂಧ ನಿಜ ಎಂಬುದಾಗಿ ಪರೋಕ್ಷವಾಗಿಯೇ ಹೇಳಿದ್ದಾರೆ ಜಾಹ್ನವಿ ಕಪೂರ್ ತಂದೆ, ಶ್ರೀದೇವಿ ಪತಿ ಬೋನಿ ಕಪೋರ್. ಜೂಮ್ಗೆ ನೀಡಿದ ಸಂದರ್ಶನದಲ್ಲಿ ಅವರು, ‘ನನಗೆ ಶಿಖರ್ ಅಂದರೆ ಪ್ರೀತಿ. ಜಾಹ್ನವಿ ಶಿಖರ್ ಜೊತೆ ಕಾಣಿಸಿಕೊಳ್ಳುವುದಕ್ಕಿಂತಲೂ ಅಂದರೆ ಓಡಾಡ ಶುರು ಮಾಡುವುದಕ್ಕಿಂತಲೂ ಮೊದಲು ನನಗೆ ಅವನ ಜೊತೆ ಒಳ್ಳೆಯ ಫ್ರೆಂಡ್ಶಿಪ್ ಇತ್ತು. ಅವನು ಎಂದಿಗೂ ನನ್ನ ಮಗಳನ್ನು ಬಿಟ್ಟು ಹೋಗಲು ಸಾಧ್ಯವಿಲ್ಲ ಎಂದು ನನಗೆ ಅನಿಸಿತು. ಯಾವುದಾದರೂ ಸಹಾಯ ಬೇಕಾದರೆ ಆತ ಯಾವಾಗಲೂ ಓಡಿ ಬರುತ್ತಾನೆ. ಅವನು ನನ್ನೊಂದಿಗೆ, ಜಾಹ್ನವಿ ಮತ್ತು ಅರ್ಜುನ್ ಅವರೊಂದಿಗೆ ಒಳ್ಳೆಯ ಸ್ನೇಹ ಹೊಂದಿದ್ದಾರೆ. ಹಾಗಾಗಿ ಅವರಂತಹ ವ್ಯಕ್ತಿ ನಮ್ಮ ಜೀವನದಲ್ಲಿ ಸಿಕ್ಕಿರುವುದು ನಮ್ಮ ಅದೃಷ್ಟ ಎಂದಿದ್ದಾರೆ. ಈ ಮೂಲಕ ಮಗಳು ಮತ್ತು ಶಿಖರ್ ಸಂಬಂಧವನ್ನು ಒಪ್ಪಿಕೊಂಡಿದ್ದಾರೆ.