ಇದೀಗ ಕರ್ನಾಟಕದ ದೂರ ದೂರದ ಪ್ರದೇಶಗಳಲ್ಲಿಯೂ ರಿಲಯನ್ಸ್ ಜಿಯೋದ ನೆಟ್ವರ್ಕ್ ಸಿಗುತ್ತಿದೆ. ಶಿವಮೊಗ್ಗದ ಗಾಜನೂರು, ಚಾಮರಾಜನಗರದ ಕೊಳ್ಳೇಗಾಲ, ಹುಗ್ಯಂನಲ್ಲಿ ಸಂಪರ್ಕ ದೊರೆಯುವಂತೆ ಮಾಡುವಲ್ಲಿ ಜಿಯೋ ಯಶಸ್ಸು ಕಂಡಿದೆ. ಇದಕ್ಕೂ ಮುನ್ನ ಈ ಪ್ರದೇಶಗಳಲ್ಲಿ ಸಂವಹನ ಮೂಲಸೌಕರ್ಯಕ್ಕೆ ಕೊರತೆ ಇತ್ತು. ಪರಿಸರ ಮತ್ತು ಭೌಗೋಳಿಕ ಸವಾಲುಗಳನ್ನು ದಾಟುವ ಮೂಲಕವಾಗಿ ಜಿಯೋ ತನ್ನ ದೃಢವಾದ 4ಜಿ ಮತ್ತು 5ಜಿ ನೆಟ್ವರ್ಕ್ ಅನ್ನು ರಾಜ್ಯದ್ಯಂತ ಹಳ್ಳಿ ಹಳ್ಳಿಗಳಿಗೆ ವಿಸ್ತರಿಸುತ್ತಿದೆ. ಈ ತಾಲೂಕುಗಳಲ್ಲಿ ಇರುವ ಅನೇಕ ಹಳ್ಳಿಗಳು ಈಗ ಜಿಯೋ ನೆಟ್ವರ್ಕ್ನಿಂದಾಗಿ ಮಾತ್ರ ಪ್ರಯೋಜನ ಪಡೆಯುತ್ತಿವೆ.
ಜಿಯೋ ಟವರ್ನಿಂದಾಗಿ ಮಕ್ಕಳು ನೆಟ್ವರ್ಕ್ ಸಂಪರ್ಕಕ್ಕಾಗಿ ದೂರದ ಸ್ಥಳಗಳಿಗೆ ಪ್ರಯಾಣ ಮಾಡುವ ಅಗತ್ಯವಿಲ್ಲ. ಯುವಜನರಿಗೆ ವರ್ಕ್ ಫ್ರಮ್ ಹೋಮ್ ಮಾಡುವುದಕ್ಕೆ ಅನುಕೂಲವಾಗಿದ್ದು, ಇದರಿಂದ ಅವಕಾಶಗಳು ತೆರೆದುಕೊಂಡಿವೆ. ಈ ಗ್ರಾಮದ ಜನರು ಜಿಯೋದ ಪ್ರೀಮಿಯಂ ಅಪ್ಲಿಕೇಷನ್ಗಳಾದ ಜಿಯೋಟಿವಿ ಮತ್ತು ಜಿಯೋ ಸಿನಿಮಾ ಮೂಲಕ ಮನರಂಜನೆಯನ್ನು ಪಡೆಯಬಹುದಾಗಿದೆ.