ಹೆಣ್ಮಕ್ಕಳು ಸೀರೆಯಲ್ಲಿ ಎಷ್ಟು ಅಂದವಾಗಿ ಕಾಣುತ್ತಾರೆ. ಸೀರೆಯನ್ನು ಉಟ್ಟುಕೊಂಡು ಮುಖದಲ್ಲೂ ಒಂದು ಚಂದದ ಮುಗುಳ್ನಗೆ ಇದ್ದರೆ ಸಾಕು ಅದರ ಕಳೆಯೇ ಬೇರೆ. ಇದೀಗ ಸ್ಯಾಂಡಲ್ವುಡ್ ನಟಿ ಸಪ್ತಮಿ ಗೌಡ ಗೋಲ್ಡ್ ಫಾಯಿಲ್ ಮೃದುವಾದ ರೇಷ್ಮೆ ಸೀರೆಯಲ್ಲಿ ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ.
ಕಾಂತಾರ ಬೆಡಗಿ ನಟಿ ಸಪ್ತಮಿ ಗೌಡ ಆಗಾಗ ತಮ್ಮ ಹೊಸ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಇದೀಗ ರೇಷ್ಮೆ ಸೀರೆಯಲ್ಲಿ ಅದರಲ್ಲೂ ಕೈಯಲ್ಲಿ ಕಮಲವನ್ನು ಇಟ್ಟುಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.
ಸೀರೆಯಲ್ಲಿ ನೆಚ್ಚಿನ ನಟಿಯನ್ನು ನೋಡಿದ ಅಭಿಮಾನಿಗಳಿಗಾಗಿ ಫುಲ್ ಖುಷ್ ಆಗಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಗಮನ ಸೆಳೆಯುತ್ತಿದೆ. ಜೊತೆಗೆ ಫೋಟೋಶೂಟ್ ಮೂಲಕ ಟ್ರೆಡಿಂಗ್ನಲ್ಲಿದ್ದಾರೆ.
ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು, ಅತ್ಯಂತ ಸುಂದರವಾಗಿ ಕಾಣುತ್ತಿದ್ದೀರಿ, ಕಾಂತಾರ ಬ್ಯೂಟಿಫುಲ್ ಕ್ವೀನ್, ಕ್ಯೂಟ್ ರಾಣಿ ಅಂತ ಕಾಮೆಂಟ್ಸ್ ಹಾಕಿದ್ದಾರೆ. ನಟಿ ಸಪ್ತಮಿ ಗೌಡ ಕಾಂತಾರ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿದ್ದರು.
ಯುವ ಚಿತ್ರದಲ್ಲಿ ಯುವರಾಜಕುಮಾರ್ ಜೊತೆ ನಾಯಕಿಯಾಗಿ ನಟಿಸಿದ್ದರು. ವಿವೇಕ್ ಅಗ್ನಿಹೋತ್ರಿ ನಿರ್ದೇಶನ ಮಾಡುತ್ತಿರುವ ‘ದಿ ವ್ಯಾಕ್ಸಿನ್ ವಾರ್’ ಚಿತ್ರದಲ್ಲಿ ಸಪ್ತಮಿ ಗೌಡ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.