ಕಾರು ಅಡ್ಡಗಟ್ಟಿ ಕಣ್ಣಿಗೆ ಕಾರದಪುಡಿ ಎರಚಿ ಐದು ಲಕ್ಷ ರೂಪಾಯಿ ದೋಚಿಕೊಂಡು ಹೋಗಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಿಲಾರಿಹಟ್ಟಿ ಡಗ್ಗಿ ಬಳಿ ವಾರದ ಹಿಂದೆ ನಡೆದಿದೆ. ರಾಯಚೂರು ಜಿಲ್ಲೆಯ ಸಿಂದನೂರಿನ ನಿವಾಸಿಗಳಾದ ವಿಜಯ ಮಹಾಂತೇಶ್, ಶಿವನಾಂದ್ ಮತ್ತು ಕಾರ್ ಚಾಲಕ ಖಾಲೀದ್ ಎಂಬವರು ಸಿಂದನೂರಿನಿಂದ ಕೊಪ್ಪಳಕ್ಕೆ ತಮ್ಮ ಕಾರಿನನಲ್ಲಿ ಬರುತ್ತಿದ್ದರು. ಬೈಕ್ನಲ್ಲಿ ಬಂದಿದ್ದ ದುಷ್ಕರ್ಮಿಗಳು ಕಾರ್ ನಿಲ್ಲಿಸಿ ಬ್ಲೇಡ್ ನಿಂದ ಹಲ್ಲೆ ಮಾಡಿ, ಕಾರದ ಪುಡಿ ಎರಚಿ, ಹಣವಿದ್ದ ಬ್ಯಾಗ್ ತಗೆದುಕೊಂಡು ಹೋಗಿದ್ದಾರೆ. ರಿಯಲ್ ಎಸ್ಟೇಟ್ ಕೆಲಸಕ್ಕಾಗಿ ತರುತ್ತಿದ್ದ ಹಣ ದರೋಡೆಕೋರರ ಪಾಲಾಗಿದೆ.
ಜನರು ಸುಖಕರ ಪ್ರಯಾಣವನ್ನು ಬಯಸುತ್ತಾರೆ. ಅದಕ್ಕಾಗಿಯೇ ಸರ್ಕಾರ ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಾಣ ಮಾಡುತ್ತದೆ. ಆದರೆ ಆಗುಂತಕರ ದಾಳಿ ಪ್ರಯಾಣಿಕರನ್ನು ಬೆಚ್ಚಿ ಬೀಳಿಸುತ್ತಿವೆ. ಕೊಪ್ಪಳ ಜಿಲ್ಲೆಯಲ್ಲಿ ಕಳೆದ ವಾರ ಕಾರನ್ನು ಅಡ್ಡಗಟ್ಟಿ, ಕಣ್ಣಿಗೆ ಕಾರದಪುಡಿ ಎರಚಿ, ಹಣ ದರೋಡೆ ಮಾಡಿರುವ ಘಟನೆ ನಡೆದಿದೆ. ಈ ರೀತಿಯ ಘಟನೆಗಳು ಆಗಾಗ ನಡೆಯುತ್ತಲೇ ಇರುವುದರಿಂದ ಪ್ರಯಾಣಿಕರು ಆತಂಕ ಪಡುವಂತಾಗಿದೆ.