ನಟಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಬಾಲಿವುಡ್ನ ಬೆಸ್ಟ್ ಜೋಡಿಗಳಲ್ಲಿ ಒಬ್ಬರು ಎಂಬುದನ್ನು ಪ್ರೂವ್ ಮಾಡಿದ್ದಾರೆ. ವಿಕ್ಕಿ ಯಾವಾಗಲೂ ಕೂಲ್ ಆಗಿ ಇರುತ್ತಾರೆ ಎಂದು ಪತಿಯ ನಡೆಗೆ ಕತ್ರಿನಾ ಕೈಫ್ ಮೆಚ್ಚುಗೆ ಸೂಚಿಸಿದ್ದಾರೆ.
ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ನಟಿ, ತೂಕ ಹೆಚ್ಚಾಗುವ ಕುರಿತು, ಬ್ಯೂಟಿ, ಔಟ್ಫಿಟ್ಗಳ ಬಗ್ಗೆ ಮಾತನಾಡುವಾಗ ವಿಕ್ಕಿ ಕೌಶಲ್ ಹ್ಯಾಂಡಲ್ ಮಾಡುವ ರೀತಿಯನ್ನು ಕತ್ರಿನಾ ವಿವರಿಸಿದ್ದಾರೆ. ನಾನು ವಿಕ್ಕಿ ಜೊತೆ ಹೊರಗಡೆ ಹೋಗುವಾಗ ತೂಕ ಹೆಚ್ಚಾಗಿರುವ ಬಗ್ಗೆ ಲುಕ್ಸ್ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳುತ್ತೇನೆ. ಆಗ ವಿಕ್ಕಿ, ನೀವು ಹೇಗಿದ್ದರೂ ಪರವಾಗಿಲ್ಲ. ನೀವು ನೀವಾಗಿರಿ, ನೀವು ಹೇಗಿದ್ದಿರೋ ಹಾಗೆ ಇರಿ ಎಂದು ಕೂಲ್ ಆಗಿ ಹೇಳುತ್ತಾರೆ. ಅವರು ಸದಾ ನನ್ನ ಬೆಂಬಲವಾಗಿ ನಿಂತಿದ್ದಾರೆ ಎಂದು ದಾಂಪತ್ಯದ ಬಗ್ಗೆ ಕತ್ರಿನಾ ಮಾತನಾಡಿದ್ದಾರೆ.
ಅಂದಹಾಗೆ, 2021ರಲ್ಲಿ ಕತ್ರಿನಾ ಮತ್ತು ವಿಕ್ಕಿ ಕೌಶಲ್ ರಾಜಸ್ಥಾನದಲ್ಲಿ ಮದುವೆಯಾದರು. ಹಲವು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದರು.