ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಬಹು ನಿರೀಕ್ಷಿತ ಸಿನಿಮಾ ಅಂದರೆ ಅದು ಮ್ಯಾಕ್ಸ್. ಸದ್ಯ ಈ ಸಿನಿಮಾ ಕೂಡ ಬಿಡುಗಡೆಗೆ ರೆಡಿಯಾಗಿದೆ. ಯಾವಾಗ ರಿಲೀಸ್ ಆಗಲಿದೆ ಎಂದು ಸ್ವತಹ ಚಿತ್ರತಂಡ ಹೇಳಿದೆ. ಈ ಕುರಿತು ಕಿಚ್ಚನ ಅಭಿಮಾನಿಗಳು ಕೂಡ ಸಿನಿಮಾಗಾಗಿ ಕಾಯುತ್ತಿದ್ದಾರೆ. ಮೂವಿಯಲ್ಲಿ ಕಿಚ್ಚ ಫುಲ್ ಮಾಸ್ ಲುಕ್ನಲ್ಲಿ ರಕ್ತಸಿಕ್ತವಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಸಿನಿಮಾ ಇದೇ ಡಿಸೆಂಬರ್ 25 ರಂದು ಭರ್ಜರಿಯಾಗಿ ರಿಲೀಸ್ ಆಗಲಿದೆ.
ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಸಿನಿಮಾ ಇದೇ ಡಿಸೆಂಬರ್ 25ರಂದು ರಿಲೀಸ್ ಆಗಲಿದೆ ಎಂದು ಚಿತ್ರತಂಡ ಬೆಂಗಳೂರಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನೀಡಿದೆ. ಈ ವೇಳೆ ಚಿತ್ರತಂಡದ ಎಲ್ಲರೂ ಕೂಡ ಭಾಗಿಯಾಗಿರುವುದು ವಿಶೇಷ ಎನಿಸಿತು. ಸುದೀಪ್ ಕೂಡ ಸಿನಿಮಾ ಕುರಿತು ಮಾತನಾಡುವಾಗ ಅದೊಂದು ವಿಷಯಕ್ಕೆ ಭಾವುಕರಾದರು. ಸುಮಾರು ಎರಡುವರೆ ವರ್ಷದ ನಂತರ ಕಿಚ್ಚ ಸುದೀಪ್ ಅವರು ಮ್ಯಾಕ್ಸ್ ಮೂವಿಯಿಂದ ತೆರೆ ಮೇಲೆ ಆಗಮಿಸುತ್ತಿದ್ದಾರೆ. ಈ ಮೂವಿಯನ್ನು ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿದ್ದು, ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಈ ಮ್ಯಾಕ್ಸ್ ಕೂಡ ಒಂದಾಗಿದೆ. ಇನ್ನೂ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕಿಚ್ಚ ಸುದೀಪ್, ಅವರು ತಮ್ಮ ತಾಯಿಯವರನ್ನು ನೆನೆದು ಕಣ್ಣೀರು ಭಾವುಕರಾದರು. ಮ್ಯಾಕ್ಸ್ ಸಿನಿಮಾ ನೋಡಬೇಕು ಅನ್ನೋದು ಅಮ್ಮನ ದೊಡ್ಡ ಆಸೆ ಆಗಿತ್ತು ಎಂದು ಹೇಳುತ್ತ ಭಾವುಕರಾದರು. ಈ ಸಿನಿಮಾ ಮಾಡೋವಾಗ ಅಮ್ಮನ ಆಶೀರ್ವಾದ ಪಡೆದು ಸಿನಿಮಾ ಆರಂಭ ಮಾಡಿದ್ದಾರೆ. ನಡು ನಡುವೆ ಈ ಮೂವಿಯ ಕೆಲ ಕ್ಲಿಪ್ಗಳನ್ನು ಅಮ್ಮನಿಗೆ ತೋರಿಸಿದ್ದಾರೆ. ಆದರೆ, ಇಡೀ ಮ್ಯಾಕ್ಸ್ ಸಿನಿಮಾ ಅವರಿಗೆ ತೋರಿಸೋಕೆ ಆಗಲಿಲ್ಲ ಎಂದು ಕಿಚ್ಚ ಬೇಸರಗೊಂಡರು.
ಮ್ಯಾಕ್ಸ್ ಮೂವಿಯಲ್ಲಿ ಕಿಚ್ಚ ಸುದೀಪ್ ಮೇನ್ ರೋಲ್ನಲ್ಲಿ ಕಾಣಿಸಿಕೊಂಡಿದ್ದು ವಿಜಯ್ ಕಾರ್ತಿಕೇಯ ಡೈರೆಕ್ಟ್ ಮಾಡಿದ್ದಾರೆ. ಬಿ.ಅಜನೀಶ್ ಲೋಕನಾಥ್ ಅವರ ಸಂಗೀತ ಈ ಮೂವಿಗಿದೆ. ಇನ್ನು ಈ ಕ್ರಿಸ್ಮಸ್ಗೆ ಮ್ಯಾಕ್ಸ್ ಸಿನಿಮಾ ಧೂಳೆಬ್ಬಿಸಲು ಸಜ್ಜಾಗಿದೆ. ತಮಿಳು ಸಿನಿಮಾ ನಿರ್ಮಾಪಕ ಕಲೈಪುಲಿ ಎಸ್.ಧಾನು ಅವರು ಸಿನಿಮಾಗೆ ಬಂಡವಾಳ ಹೂಡಿದ್ದಾರೆ.