ಭಾರತ ಮತ್ತು ನ್ಯೂಜಿಲೆಂಡ್ ಟೆಸ್ಟ್ ಸರಣಿಯ ಎರಡನೇ ಪಂದ್ಯವು ಪುಣೆಯಲ್ಲಿ ನಡೆಯುತ್ತಿದೆ. ಈ ಟೆಸ್ಟ್ಗಾಗಿ ಆಡುವ ಹನ್ನೊಂದರಲ್ಲಿ ಕೆ.ಎಲ್.ರಾಹುಲ್ ಸ್ಥಾನ ಪಡೆದಿಲ್ಲ. ಬೆನ್ನಲ್ಲೇ ಕೆ.ಎಲ್.ರಾಹುಲ್ ವೃತ್ತಿಜೀವನದ ಬಗ್ಗೆ ಪ್ರಶ್ನೆಗಳೆದ್ದಿವೆ.
ಕೆ.ಎಲ್.ರಾಹುಲ್ ತಂಡಕ್ಕೆ ಮತ್ತೆ ಮರಳುವುದು ಅಷ್ಟು ಸುಲಭವಲ್ಲ ಎಂದು ಕ್ರಿಕೆಟ್ ಅಭಿಮಾನಿಗಳು ಹೇಳುತ್ತಿದ್ದಾರೆ. ಭಾರತೀಯ ಟೆಸ್ಟ್ನಲ್ಲಿ ಅನುಭವಿ ಬ್ಯಾಟ್ಸ್ಮನ್ಗಳಾದ ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ ಮತ್ತು ಮಯಾಂಕ್ ಅಗರ್ವಾಲ್ಗಿಂತ ಕೆ.ಎಲ್.ರಾಹುಲ್ಗೆ ಹೆಚ್ಚು ಆದ್ಯತೆ ನೀಡಲಾಯಿತು. ಆದರೆ ರಾಹುಲ್ ಈ ಲಾಭವನ್ನು ಪಡೆಯಲಿಲ್ಲ ಎಂಬ ಟೀಕೆಗಳು ಶುರುವಾಗಿವೆ.
ಇದನ್ನು ಓದಿ: ಟೀಮ್ ಇಂಡಿಯಾ ಸೋಲಿಗೆ ರಾಹುಲ್ ಕಾರಣ!
ಚೇತೇಶ್ವರ ಪೂಜಾರ
ಚೇತೇಶ್ವರ್ ಪೂಜಾರ ದೀರ್ಘಕಾಲದವರೆಗೆ ಭಾರತಕ್ಕಾಗಿ ಟೆಸ್ಟ್ ಪಂದ್ಯಗಳನ್ನು ಆಡಿದರು. ಇದೀಗ ದೀರ್ಘಕಾಲದಿಂದ ತಂಡದಿಂದ ಹೊರಗುಳಿದಿದ್ದಾರೆ. ಪೂಜಾರ ಅವರಿಗಿಂತ ಕೆ.ಎಲ್.ರಾಹುಲ್ ಅವರಿಗೆ ಹೆಚ್ಚು ಅವಕಾಶಗಳು ಸಿಕ್ಕಿವೆ. ಆದರೆ ರಾಹುಲ್ ಈ ಅವಕಾಶಗಳನ್ನು ಬಳಸಿಕೊಂಡಿಲ್ಲ.
ಅಜಿಂಕ್ಯ ರಹಾನೆ
ರಹಾನೆ ಭಾರತೀಯ ಟೆಸ್ಟ್ ತಂಡದಲ್ಲಿ ಆಡುವುದನ್ನು ಮುಂದುವರೆಸಿದ್ದಾರೆ. ಪ್ರಸ್ತುತ ಅವರು ತಂಡಕ್ಕೆ ಕಂಬ್ಯಾಕ್ ಮಾಡಿಲ್ಲ. ಈ ಬ್ಯಾಟ್ಸ್ಮನ್ ವಿದೇಶಿ ನೆಲದಲ್ಲಿ ಉತ್ತಮ ಇನ್ನಿಂಗ್ಸ್ ಆಡಿದ್ದರು. ಕೆ.ಎಲ್.ರಾಹುಲ್ಗೆ ಅವಕಾಶ ನೀಡಲು ರಹಾನೆಗೆ ಕೊಕ್ ನೀಡಲಾಗಿದೆ ಎಂಬ ಆರೋಪ ಇದೆ. ಆದರೆ ಕೆ.ಎಲ್.ರಾಹುಲ್ ಈ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.
ಇದನ್ನು ಓದಿ: ಟೀಮ್ ಇಂಡಿಯಾದಿಂದ ಕೆ.ಎಲ್ ರಾಹುಲ್ಗೆ ಕೊಕ್..!
ಮಯಾಂಕ್ ಅಗರ್ವಾಲ್
ಮಯಾಂಕ್ ಅಗರ್ವಾಲ್ ಟೆಸ್ಟ್ ವೃತ್ತಿಜೀವನವು ಚಿಕ್ಕದಾಗಿರಬಹುದು. ಇವರು ಪ್ರತಿಭಾನ್ವಿತ ಆಟಗಾರ ಅನ್ನೋದ್ರಲ್ಲಿ ಡೌಟ್ ಇಲ್ಲ. ಕಳೆದ ಆಸ್ಟ್ರೇಲಿಯ ಪ್ರವಾಸದಲ್ಲಿ ಅಗರ್ವಾಲ್ ಉತ್ತಮ ಇನ್ನಿಂಗ್ಸ್ ಆಡಿದ್ದರು. ಮಯಾಂಕ್ ಟೀಂ ಇಂಡಿಯಾದ ಭಾಗವಾಗಿಲ್ಲ. ಕೆ.ಎಲ್.ರಾಹುಲ್ಗೆ ಸಿಕ್ಕಷ್ಟು ಅವಕಾಶ ಮಯಾಂಕ್ ಅಗರ್ವಾಲ್ಗೆ ಸಿಕ್ಕಿಲ್ಲ ಎನ್ನುತ್ತಾರೆ ಕ್ರಿಕೆಟ್ ತಜ್ಞರು. ಕೆ.ಎಲ್.ರಾಹುಲ್ ಟೆಸ್ಟ್ ಮಾದರಿಯಲ್ಲಿ ವಿವಿಧ ಸ್ಥಾನಗಳಲ್ಲಿ ಅವಕಾಶಗಳನ್ನು ಪಡೆದು, ಅಭಿಮಾನಿಗಳನ್ನು, ಆಯ್ಕೆಗಾರರನ್ನು ನಿರಾಶೆಗೊಳಿಸಿದರು.