ನಟ ದರ್ಶನ್ ಅವರ ಸದ್ಯದ ಪರಿಸ್ಥಿತಿ ನೋಡಿದರೆ ಯಾವ ದೇವರೂ ಕೈ ಹಿಡಿತಿಲ್ಲ. ಯಾವ ಪ್ರಾರ್ಥನೆಯೂ ವರ್ಕೌಟ್ ಆಗ್ತಿಲ್ಲ .ದರ್ಶನ್ ಪತ್ನಿ ವಿಜಯಲಕ್ಷ್ಮಿ ಹತ್ತಾರು ದೇವಸ್ಥಾನ ಸುತ್ತಿ ಬಂದಿದ್ದರು. ಸಂಬಂಧಿಕರು ಸಹ ಇಲ್ಲಸಲ್ಲದ ದೇವರಿಗೆ ಹರಕೆ ಕಟ್ಕೊಂಡ್ರು. ಆದರೆ, ಒಂದೇ ಒಂದು ತುತ್ತು ಮನೆಯೂಟವೂ ಸಿಗ್ತಿಲ್ಲ. ಮನೆ ಊಟದ ಭಾಗ್ಯ ಸಿಗುತ್ತಾ ಅಂತಾ ಕಾಯ್ತಿದ್ದ ದರ್ಶನ್ಗೆ ತಣ್ಣೀರೇ ಗತಿಯಾಗಿದೆ. ಕೊಲೆ ಕೇಸ್ನಲ್ಲಿ ಜೈಲು ಸೇರುರುವ ದರ್ಶನ್ಗೆ ಮನೆಯೂಟ ಮತ್ತೆ ಮರೀಚಿಕೆಯಾಗಿದೆ. ಎಷ್ಟೇ ಕಾಡಿ ಬೇಡಿದರೂ ಬಾಡೂಟದ ಭಾಗ್ಯ ಕೊಡಲ್ಲ ಅಂತ ಜೈಲಿನ ಅಧಿಕಾರಿಗಳು ವರದಿ ಕೊಟ್ಟಿದ್ದಾರೆ. ಇದರ ನಡುವೆಯೇ ದರ್ಶನ್ ಪರ ವಾದ ಮಾಡೋಕೆ ಖ್ಯಾತ ವಕೀಲರೇ ಹಿಂದೇಟು ಹಾಕ್ತಿದ್ದಾರೆ ಎನ್ನಲಾಗಿದೆ. ಅನಾರೋಗ್ಯದ ನೆಪ ಹೇಳಿದ್ದ ನಟ ದರ್ಶನ್, ಹೈಕೋರ್ಟ್ ಅಂಗಳದಲ್ಲಿ ಮನೆಯೂಟಕ್ಕೆ ಮನವಿ ಮಾಡಿದ್ದರು. ಹೀಗಾಗಿ ಜೈಲಾಧಿಕಾರಿಗಳು ವರದಿ ನೀಡುವಂತೆ ಕೋರ್ಟ್ ಸೂಚನೆ ನೀಡಿತ್ತು. ಇದರಂತೆ ಜೈಲಾಧಿಕಾರಿಗಳು ವರದಿ ನೀಡಿದ್ದಾರೆ. ಅಲ್ಲದೆ ದರ್ಶನ್ ಊಟದ ಅರ್ಜಿ ತಿರಸ್ಕರಿಸಿರೋ ಜೈಲಾಧಿಕಾರಿಗಳು, ಇಲ್ಲಿನ ಊಟವೇ ಚೆನ್ನಾಗಿದೆ ಅಂತಾ ಕೋರ್ಟ್ಗೆ ಮಾಹಿತಿ ನೀಡಿದ್ದಾರೆ
ಇದರ ನಡುವೆ ಕಂಬಿ ಹಿಂದೆ ಸೇರಿರುವ ದರ್ಶನ್ಗೆ ಗೆ ಸಂಕಷ್ಟಗಳ ಸರಮಾಲೆಯೇ ಸುತ್ಕೊಳ್ತಿವೆ. ದರ್ಶನ್ ಪರ ವಾದ ಮಂಡಿಸೋದಕ್ಕೆ ಹಿರಿಯ ವಕೀಲರೇ ಸಿಗ್ತಿಲ್ಲವಂತೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಿರಿಯ ವಕೀಲ ಸಿ.ವಿ ನಾಗೇಶ್ ಮೊರೆ ಹೋಗಿದ್ದರು. ಆದರೆ, ನಾಗೇಶ್ ಅವರು ದರ್ಶನ್ ಕೇಸ್ನಲ್ಲಿ ಸೈಲೆಂಟ್ ಆಗಿದ್ದಾರಂತೆ. ಹಾಗಾದರೆ, ದರ್ಶನ್ ಕೇಸ್ನಲ್ಲಿ ವಕೀಲರು ಹಿಂದೇಟು ಹಾಕ್ತಿರೋದ್ಯಾಕೆ ಅಂತಾ ನೋಡೋದಾದರೆ, ದರ್ಶನ್ ವಿರುದ್ಧ ಸಿಕ್ಕಿರುವ ಸಾಕ್ಷ್ಯಗಳೇ ಕಂಟಕವಾಗಿ ಕಾಡೋದಕ್ಕೆ ಶುರುವಾಗಿವೆ. ಅದರಲ್ಲಿ ತಾಂತ್ರಿಕ ಹಾಗೂ ಮೆಡಿಕಲ್ ಸಾಕ್ಷ್ಯಗಳು ಸಿಕ್ಕಾಪಟ್ಟೆ ಸ್ಟ್ರಾಂಗ್ ಆಗಿವೆಯಂತೆ ಪ್ರತಿ ಸಾಕ್ಷ್ಯದಲ್ಲೂ ದರ್ಶನ್ ಪಾತ್ರ ಇರೋದು ಬಹುತೇಕ ಖಾಯಂ ಆಗಿದೆ. ಹೀಗಾಗಿ ದರ್ಶನ್ ಕೇಸ್ ಕೈಗೆತ್ತಿಕೊಂಡರೆ ಹಿನ್ನೆಡೆ ಅನುಭವಿಸುವ ಆತಂಕ ಕಾಡ್ತಿದೆ. ಹೀಗಾಗಿಯೇ ವಕೀಲರು ಹಿಂದೇಟು ಹಾಕ್ತಿದ್ದಾರೆ. ಇದು ದರ್ಶನ್ಗೆ ಆರಂಭದಲ್ಲೇ ಬಿಗ್ ಶಾಕ್ ಕೊಟ್ಟಿದೆ.