28ರಿಂದ ಸೆ.8ರ ವರೆಗೆ ಪ್ಯಾರಿಸ್ನಲ್ಲಿ ನಡೆಯಲಿರುವ ಪ್ಯಾರಾಲಿಂಪಿಕ್ಸ್ಗೆ ಭಾರತದ 84 ಅಥ್ಲೀಟ್ಗಳ ಪಟ್ಟಿ ಪ್ರಕಟಗೊಂಡಿದೆ. ಕರ್ನಾಟಕದ ರಕ್ಷಿತಾ ರಾಜು, ಶ್ರೀಹರ್ಷ ದೇವರಡ್ಡಿ ರಾಮಕೃಷ್ಣ ಹಾಗೂ ಸಕೀನಾ ಖಾತೂನ್ ಕೂಡಾ ಸ್ಪರ್ಧಿಸಲಿದ್ದಾರೆ. ಮೂಲತಃ ಕರ್ನಾಟಕದ, ಸದ್ಯ ಉತ್ತರ ಪ್ರದೇಶದಲ್ಲಿ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಸುಹಾಸ್ ಯತಿರಾಜ್ ಕೂಡಾ ಕಣಕ್ಕಿಳಿಯಲಿದ್ದಾರೆ.
ಬ್ಯಾಡ್ಮಿಂಟನ್ ತಾರೆ ಸುಹಾಸ್ ಕಳೆದ ಪ್ಯಾರಾಲಿಂಪಿಕ್ಸ್ನಲ್ಲಿ ಬೆಳ್ಳಿ ಗೆದ್ದಿದ್ದು, ಈ ಬಾರಿ ಚಿನ್ನದ ನಿರೀಕ್ಷೆಯಲ್ಲಿದ್ದಾರೆ. 2018 ಹಾಗೂ 2023ರ ಪ್ಯಾರಾ ಏಷ್ಯನ್ ಗೇಮ್ಸ್ ಚಾಂಪಿಯನ್ ರಕ್ಷಿತಾ ರಾಜು, ಈ ಬಾರಿ ಮಹಿಳೆಯರ 1500 ಮೀ. ಟಿ11 ವಿಭಾಗದಲ್ಲಿ ಕಣಕ್ಕಿಳಿಯಲಿದ್ದಾರೆ. ಸಕೀನಾ ಖಾತೂನ್ ಮಹಿಳೆಯರ 45 ಕೆ.ಜಿ. ವೇಟ್ಲಿಫ್ಟಿಂಗ್ನಲ್ಲಿ, ಶ್ರೀಹರ್ಷ ಶೂಟಿಂಗ್ನಲ್ಲಿ ಸ್ಪರ್ಧಿಸಲಿದ್ದಾರೆ. ಇನ್ನು, ಕಳೆದ ಬಾರಿ ಚಿನ್ನ ವಿಜೇತ ಶೂಟರ್ ಅವನಿ ಲೇಖರಾ, ಮನೀಶ್ ನರ್ವಾಲ್, ಹೈಜಂಪ್ ಪಟುಗಳಾದ ನಿಶಾದ್ ಕುಮಾರ್, ತಂಘವೇಲ್ ಮರಿಯಪ್ಪನ್, ಆರ್ಚರಿ ತಾರೆ ಶೀತಲ್ ದೇವಿ ಕೂಡಾ ಈ ಬಾರಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಸಾರ್ವಕಾಲಿಕ ಗರಿಷ್ಠ ಅಥ್ಲೀಟ್ಗಳು ಸ್ಪರ್ಧೆಭಾರತ ಈ ಬಾರಿ ಸಾರ್ವಕಾಲಿಕ ಗರಿಷ್ಠ ಅಥ್ಲೀಟ್ಗಳನ್ನು ಪ್ಯಾರಾಲಿಂಪಿಕ್ಟ್ಗೆ ಕಳುಹಿಸಲಿದೆ. 2021ರ ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತದ 54 ಮಂದಿ ಸ್ಪರ್ಧಿಸಿದ್ದು ದಾಖಲೆ ಎನಿಸಿತ್ತು. ಈ ಬಾರಿ ಹೆಚ್ಚುವರಿ 30 ಮಂದಿ ದೇಶವನ್ನು ಪ್ರತಿನಿಧಿಸಲಿದ್ದಾರೆ. ಭಾರತ ಟೋಕಿಯೋ ಪ್ಯಾರಾಲಿಂಪಿಕ್ಸ್ನಲ್ಲಿ 5 ಚಿನ್ನ, 8 ಬೆಳ್ಳಿ ಹಾಗೂ 6 ಕಂಚು ಸೇರಿ ಒಟ್ಟು 19 ಪದಕಗಳನ್ನು ಗೆದ್ದು ಶ್ರೇಷ್ಠ ಪ್ರದರ್ಶನ ನೀಡಿತ್ತು. ಒಟ್ಟಾರೆ 1960ರಿಂದ ಈ ವರೆಗೂ ಭಾರತ 9 ಚಿನ್ನ, 12 ಬೆಳ್ಳಿ, 10 ಕಂಚು ಸೇರಿ 31 ಪದಕ ಗೆದ್ದಿದೆ