ಬಿಗ್ ಬಾಸ್ ಸೀಸನ್ 11ರಲ್ಲಿ ಸ್ಪರ್ಧಿಗಳು ಈ ವಾರ ಸಖತ್ ಚಿಲ್ ಮಾಡಿದ್ದಾರೆ. 7ನೇ ವಾರದ ಆರಂಭದಲ್ಲೇ ಸ್ಪರ್ಧಿಗಳನ್ನ ಜೋಡಿಗಳಾಗಿ ‘ಬಿಗ್ ಬಾಸ್’ ವಿಂಗಡಿಸಿದ್ದಾರೆ. ವೈಯಕ್ತಿಕ ಆಟಗಳನ್ನು ಜೋಡಿಗಳಾಗಿ ಆಡಲಿದ್ದೀರಿ. ಆಟದ ರೋಚಕತೆಯನ್ನು ಹೆಚ್ಚಿಸಲು ನಿಮ್ಮೆಲ್ಲರನ್ನು ಜೋಡಿಗಳನ್ನಾಗಿ ‘ಬಿಗ್ ಬಾಸ್’ ವಿಂಗಡಿಸಿದ್ದಾರೆ ಎಂದು ಬಿಗ್ ಬಾಸ್ ಆದೇಶಿಸಿದ್ದರು. ಜೋಡಿ ಆಟ ಆಡ್ತಿರೋ ಎಲ್ಲರೂ ಪರಸ್ಪರ ನಾಮಿನೇಷನ್ ಕೂಡ ಮಾಡ್ತಿದ್ದಾರೆ.
ಈ ವಾರ ಮೋಕ್ಷಿತಾ ಪೈ – ಧನರಾಜ್ ಆಚಾರ್ , ಮಂಜು – ಭವ್ಯಾ, ಶಿಶಿರ್ ಶಾಸ್ತ್ರಿ – ಚೈತ್ರಾ ಕುಂದಾಪುರ, ಗೋಲ್ಡ್ ಸುರೇಶ್ – ಅನುಷಾ ರೈ, ಧರ್ಮ ಕೀರ್ತಿರಾಜ್ – ಐಶ್ವರ್ಯಾ ಸಿಂಧೋಗಿ, ಗೌತಮಿ ಜಾಧವ್ – ಹನುಮಂತ ಜೋಡಿಯಾಗಿದ್ದಾರೆ. ಇದೀಗ ಗೌತಮಿ ಹಾಗೂ ಹನುಮಂತ ಲುಕ್ಗೆ ಸಖತ್ ಫಿದಾ ಆಗಿದ್ದಾರೆ ವೀಕ್ಷಕರು. ಹೌದು ಹನುಮಂತ್ ಹಾಗೂ ಗೌತಮಿ ಇಬ್ಬರೂ ಲುಂಗಿ ಉಟ್ಟುಕೊಂಡು ಸಖತ್ ಖದರ್ನಲ್ಲಿ ನಡೆದುಕೊಂಡು ಬಂದಿದ್ದಾರೆ.
ಇದರಲ್ಲಿ ಹನುಮ ಯಾರಂತ ಗೊತ್ತಾಗ್ತಿಲ್ಲ
ಉಳಿದ ಸ್ಪರ್ಧಿಗಳು ಕೂಡ ಯಾರು ಇದರಲ್ಲಿ ಹನುಮ ಯಾರು ಅಂತನಾ ಗೊತ್ತಾಗ್ತಿಲ್ಲ ಅಂತ ಕಮೆಂಟ್ ಮಾಡಿದ್ದಾರೆ. ಏನು ಶಿಶೀರ್ ಕಾಕಾ? ಜಗ್ಗ ನಡೆತೈತಿ ಎಂದು ಗೌತಮಿ ಕೂಡ ಉತ್ತರ ಕರ್ನಾಟಕ ಭಾಷೆಯಲ್ಲೇ ಡೈಲಾಗ್ ಬೇರೆ ಬಿಟ್ಟಿದ್ದಾರೆ. ಗೌತಮಿ ಕೂಡ ಹನುಮಂತನ ಬಳಿ, ನಾನು ಹಾಗಾಗೆ ಉರಳಾಡುತ್ತಿದ್ದೇನೆ ಗೊತ್ತಿಲ್ಲದೆ ಅಂದಿದ್ದಾರೆ. ಅದಕ್ಕೆ ಹನುಮಂತ ಇದ್ದವನು, ಅದು ಲುಂಗಿ ಮಹಿಮೆ. ಯಾರು ಹಾಕ್ಕೊಂಡರು ಉಳ್ಳಾಡ್ತಾವು ಅಂತ ಹೇಳಿದ್ದಾರೆ ಹನುಮ.
ಜೋಡಿ ಆಟ ಸಖತ್ ಮಜಾ!
ಜೋಡಿ ಆಟ ಆಡ್ತಿರೋ ಎಲ್ಲರೂ ಪರಸ್ಪರ ನಾಮಿನೇಷನ್ ಮಾಡ್ತಿದ್ದಾರೆ. ನೇರವಾಗಿಯೇ ನಾಮಿನೇಷನ್ ಆಗ್ತಿರೋದು ಹಿನ್ನೆಲೆಯಲ್ಲಿ ಅನುಷಾ ರಾಂಗ್ ಆಗಿದ್ದಾರೆ. ಧರ್ಮ ಮತ್ತು ಅನುಷಾ ನಡುವೆ ಒಳ್ಳೆ ಸ್ನೇಹ ಇದೆ. ಹೊರಗಡೆ ಒಟ್ಟಿಗೆ ಸಿನಿಮಾ ಮಾಡಿ ದೂರವೇ ಇದ್ದರು. ಆದರೆ, ಮನೆಗೆ ಬಂದ್ಮೇಲೆ ಇವರ ಸ್ನೇಹ ಇನ್ನು ಗಟ್ಟಿ ಆಗಿದೆ.
ಹಾಗೆ ದೊಡ್ಮೆನೆಯಲ್ಲಿ ಇದೀಗ ಜೋಡಿ ಆಟದ ಜೊತೆಗೆ ನಾಮಿನೇಷನ್ ಪ್ರಕ್ರಿಯೆ ಶುರು ಆಗಿದೆ. ಕ್ಯಾಪ್ಟನ್ ತ್ರಿವಿಕ್ರಮ್ ಮಾಡಿದ ತಪ್ಪಿನಿಂದ ಮನೆ ಮಂದಿ ನೇರವಾಗಿಯೇ ಚರ್ಚೆ ಮಾಡಿ ಒಂದು ಜೋಡಿಯನ್ನ ನಾಮಿನೇಟ್ ಮಾಡೋದಿದೆ.