ಮಂಡ್ಯ: ಪ್ರೇಮ ಪುರಾಣಕ್ಕೆ ಇಬ್ಬರು ವಿವಾಹಿತ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದೆದೆ.
ಮದುವೆಯಾಗಿದ್ದರೂ ಗೆಳೆಯನಿಗಾಗಿ ನದಿಗೆ ಹಾರಿ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡರೆ, ಪ್ರಿಯತಮೆ ಸಾವಿನ ವಿಚಾರ ತಿಳಿದು ಅತ್ತ ಪ್ರಿಯಕರ ನೇಣಿಗೆ ಶರಣಾಗಿದ್ದಾನೆ. ಮದ್ದೂರು ತಾಲೂಕಿನ ಯರಗನಹಳ್ಳಿ ಗ್ರಾಮದ ಸೃಷ್ಟಿ(20) ಮೃತ ಗೃಹಿಣಿಯಾಗಿದ್ದು, ಬನ್ನಹಳ್ಳಿ ಗ್ರಾಮದ ಪ್ರಸನ್ನ (25) ನೇಣಿಗೆ ಶರಣಾದ ವ್ಯಕ್ತಿಯಾಗಿದ್ದಾನೆ.
ಈ ನಡುವೆ ಒಂದೂವರೆ ವರ್ಷದ ಹಿಂದೆ ದಿನೇಶ್ ಎಂಬಾತನ ಜೊತೆ ಸೃಷ್ಟಿಗೆ ಮದುವೆಯಾಗಿತ್ತು. ಇನ್ನು ಸೃಷ್ಟಿಯ ಪ್ರಸನ್ನ ಕೂಡ ಸೃಷ್ಟಿಯ ಗೆಳತಿ ಸ್ಪಂದನ ಎಂಬಾಕೆಯ ಜೊತೆ ಮೂರು ವರ್ಷದ ಕೆಳಗೆ ವಿವಾಹವಾಗಿದ್ದನು. ಇಬ್ಬರು ಬೇರೆ ಬೇರೆ ಮದುವೆಯಾಗಿದ್ದರೂ ಪ್ರಸನ್ನ, ಸೃಷ್ಠಿ ಜೊತೆ ಲವ್ವಿ ಡವ್ವಿ ಮುಂದುವರೆದಿತ್ತು.
ಈ ಇಬ್ಬರ ಲವ್ ವಿಚಾರ ಸೃಷ್ಠಿ ಪತಿ ದಿನೇಶ್ಗೆ ಗೊತ್ತಾಗಿ, ದಂಪತಿ ನಡುವೆ ಜಗಳ ಆಗಿತ್ತು. ಈ ಹಿನ್ನೆಲೆ ಡಿಸೆಂಬರ್ 11ರಂದು ಗಂಡನ ಮನೆಯಿಂದ ಸೃಷ್ಟಿ ನಾಪತ್ತೆಯಾಗಿದ್ದಳು. ಆನಂತರ ಆಲೂರು ವೈದ್ಯನಾಥಪುರ ಗ್ರಾಮದ ಬಳಿ ಶಿಂಷಾ ನದಿಯಲ್ಲಿ ಡಿಸೆಂಬರ್ 16 ರಂದು ಸೃಷ್ಠಿ ಶವವಾಗಿ ಪತ್ತೆಯಾಗಿದ್ದಳು.
ಈ ವಿಚಾರ ತಿಳಿದು ಅದೇ ದಿನ ಪ್ರಸನ್ನ ಕೂಡ ತನ್ನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಸಾವಿನಲ್ಲೂ ಇಬ್ಬರೂ ವಿವಾಹಿತ ಪ್ರೇಮಿಗಳು ಒಂದಾಗಿದ್ದಾರೆ.
ಕುತೂಹಲದ ವಿಚಾರ ಏನೆಂದರೆ ಸೃಷ್ಟಿ ಹಾಗೂ ಸ್ಪಂದನಾ ಇಬ್ಬರು ಒಂದೇ ತರಗತಿಯಲ್ಲಿ ಓದುತ್ತಿದ್ದರು. ಪ್ರಸನ್ನ ಸೃಷ್ಟಿಯನ್ನು ಪ್ರೀತಿಸುತ್ತಿದ್ದ ವಿಚಾರ ಸ್ಪಂದನಾಗೆ ಗೊತ್ತಿರಲಿಲ್ಲ. ಮದುವೆಗೂ ಮೊದಲು ಪ್ರಸನ್ನ ಸೃಷ್ಟಿ ವಿಚಾರಕ್ಕೆ ಸಂಬಂಧಿಸಿದಂತೆ ಆತ್ಮಹತ್ಯೆಗೂ ಯತ್ನಿಸಿದ್ದ ವಿಚಾರ ಈಗ ತಿಳಿದುಬಂದಿದೆ.