ಇತ್ತೀಚೆಗೆ ನಾಗಚೈತನ್ಯ ಅವರು ಶೋಬಿತಾ ಧುಲಿಪಾಲ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು ಸುದ್ದಿಯಾಗಿದ್ದರು. ಅದರೂ ವರನ ವೇಷ ಧರಿಸಿದ್ದ ಚೈತನ್ಯ ಅವರ ಫೋಟೋವೊಂದು ಇದೀಗ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು, ನಟ ಹೇಳದೆಯೇ ವಿವಾಹ ಕೂಡ ಮಾಡಿಕೊಂಡರೇ ಎಂದು ಅಭಿಮಾನಿಗಳು ಗೊಂದಲಕ್ಕೊಳಗಾಗಿದ್ದರು. ಇದೀಗ ಇದಕ್ಕೆ ಕ್ಲಾರಿಟಿ ನೀಡಿರುವ ನಾಗ ಚೈತನ್ಯ ಕೊನೆಗೂ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ್ದಾರೆ.
ಆದರೆ ನಟ ತಮ್ಮ ವಿವಾಹ ಬಟ್ಟೆಗಳ ಬ್ರ್ಯಾಂಡ್ ಒಂದರ ಜಾಹೀರಾತಿಗಾಗಿ ವರನಂತೆ ಸಾಲಂಕೃತನಾಗಿ ಕಂಡುಬಂದಿರುವುದಾಗಿ ತಿಳಿಸಿದ ನಂತರ ಫ್ಯಾನ್ಸ್ ಕೊಂಚ ನಿರುಮ್ಮಳರಾಗಿದ್ದಾರೆ. ಮಾಧ್ಯಮದೊಂದಿಗೆ ಈ ಕುರಿತು ಮಾತನಾಡಿದ ನಾಗ ಚೈತನ್ಯ ಬಹುಶಃ ನಾನು ನನ್ನ ಮದುವೆಯ ಸಿದ್ಧತೆಯಲ್ಲಿರುವೆ ಎಂದೇ ನೀವು ಯೋಚಿಸುತ್ತಿದ್ದಿರಬಹುದು ಆದರೆ ಇದು ನನ್ನ ಮದುವೆಗೆ ಕೂಡ ಕೌಂಟ್ಡೌನ್ ಆಗಿದೆ ಎಂದು ನಾಗ ಪರೋಕ್ಷವಾಗಿ ಹೇಳಿದ್ದರೂ ನಟ ಇನ್ನು ವಿವಾಹದ ಅಧಿಕೃತ ದಿನಾಂಕವನ್ನು ಬಾಯ್ಬಿಡದೆ ಗುಟ್ಟಾಗಿರಿಸಿದ್ದಾರೆ.
ಜಾಹೀರಾತಿಗಾಗಿ ವರನಂತೆ ದಿರಿಸು ಧರಿಸಿ ಕಂಗೊಳಿಸಿರುವ ನಟನ ಮುಖದಲ್ಲಿ ವರನ ಕಳೆ ಮಿಂಚುತ್ತಿರುವುದು ಸುಳ್ಳಲ್ಲ. ವಿವಾಹ ನನಗೆ ಸಂಪ್ರದಾಯ ಬದ್ಧವಾಗಿದ್ದರೆ ಸಾಕು ವಿವಾಹ ತಯಾರಿಗೆ ನೀವು ಈಗಲೇ ಪ್ರಾಕ್ಟೀಸ್ ಮಾಡುತ್ತಿದ್ದೀರಾ ಎಂದು ಕೇಳಿದಾಗ ಬಹುಶಃ ಹಾಗೆಯೇ ಎಂದು ತಿಳಿದುಕೊಳ್ಳಿ ಎಂದು ನಗುತ್ತಾ ನಾಗ ಚೈತನ್ಯ ಉತ್ತರಿಸಿದ್ದಾರೆ.