ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ರನ್ನು ಕಾಣಲು ತಾಯಿ ಮೀನಾ ತೂಗುದೀಪ ಬಳ್ಳಾರಿ ಜೈಲಿಗೆ ಆಗಮಿಸಿದ್ದಾರೆ. ಅಕ್ಕ, ಭಾವ ಮತ್ತು ಅವರ ಮಕ್ಕಳ ಜೊತೆಗೆ ಕೇಂದ್ರ ಕಾರಾಗೃಹಕ್ಕೆ ಬಂದಿದ್ದಾರೆ. ಪರಪ್ಪನ ಅಗ್ರಹಾರದಲ್ಲಿದ್ದಾಗ ದರ್ಶನ್ರನ್ನು ಕಾಣಲು ಮಗ ದಿನಕರ್ ತೂಗುದೀಪ ಜೊತೆ ಬಂದಿದ್ದರು. ಬಳ್ಳಾರಿ ಜೈಲಿಗೆ ಇದೇ ಮೊದಲ ಬಾರಿಗೆ ತಾಯಿ ಮೀನಾ ತೂಗುದೀಪ ಬಂದಿದ್ದಾರೆ. ಮಗನನ್ನು ಕಾಣುವ ತವಕದಲ್ಲಿ ತನ್ನ ಮಗಳ ಜೊತೆಗೆ ಕೇಂದ್ರ ಕಾರಾಗೃಹಕ್ಕೆ ಬಂದಿದ್ದಾರೆ.
ದರ್ಶನ್ ನೋಡಲು ಬಂದ ವೇಳೆ ತಾಯಿ ಮೀನು ತೂಗುದೀಪ ಮತ್ತು ಕುಟುಂಬಸ್ಥರು ಕೈಯಲ್ಲಿ ಎರಡು ಬ್ಯಾಗ್ ತಂದಿದ್ದಾರೆ. ಸ್ವೀಟ್ಸ್, ಊಟದ ಬಾಕ್ಸ್, ಹಣ್ಣು ತಂದಿದ್ದಾರೆ. ಮಡದಿ ವಿಜಯಲಕ್ಷ್ಮೀ, ಸ್ನೇಹಿತರು ಈಗಾಗಲೇ ದರ್ಶನ್ರನ್ನು ಭೇಟಿ ಮಾಡಿದ್ದಾರೆ. ಆದರೆ ಬೆಂಗಳೂರಿನಿಂದ ಬಳ್ಳಾರಿಗೆ 300ಕಿಮೀ ಅಂತರವಿರುವ ಕಾರಣ ತಾಯಿ ಮೀನಾ ತೂಗುದೀಪ್ ದರ್ಶನ್ರನ್ನು ಭೇಟಿ ಮಾಡಿರಲಿಲ್ಲ. ಆದರಿಂದು ಬಳ್ಳಾರಿಗೆ ಆಗಮಿಸಿದ್ದಾರೆ. ಇನ್ನು ದರ್ಶನ್ ಕೂಡ ತಾಯಿಯನ್ನು ನೋಡಬೇಕು ಎಂದು ಕೇಳುತ್ತಿದ್ದರಂತೆ. ಆದರೀಗ ಕೊಲೆ ಆರೋಪಿಯ ಆಸೆಯಂತೆ ಮೀನಾ ತೂಗುದೀಪರವರು ಬಳ್ಳಾರಿ ಜೈಲಿಗೆ ಬಂದಿದ್ದಾರೆ.