ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ರಾಮ್ ಚರಣ್ ಅವರಿಗೆ ವಿಶ್ವ ಮಟ್ಟದಲ್ಲಿ ಕ್ರೇಜ್ ಇದೆ. ಅವರ ನಟನೆಯ ‘RRR ಸಿನಿಮಾ ಹಾಲಿವುಡ್ ಮಟ್ಟದಲ್ಲಿ ಸದ್ದು ಮಾಡಿತು. ಈ ಸಿನಿಮಾ ಆಸ್ಕರ್ ಕೂಡ ಗೆದ್ದಿತ್ತು. ಅನೇಕ ಹಾಲಿವುಡ್ನ ನಿರ್ದೇಶಕರು ಹಾಗೂ ಕಲಾವಿದರು ರಾಮ್ ಚರಣ್ ಜೊತೆ ಕೆಲಸ ಮಾಡುವ ಇಂಗಿತ ಹೊರಹಾಕಿದ್ದಾರೆ. ಇದಕ್ಕೆ ರಾಮ್ ಚರಣ್ ಅವರು ಒಪ್ಪಿಗೆ ಸೂಚಿಸಿಲ್ಲ. ಅವರು ಎಂದಿಗೂ ಹಾಲಿವುಡ್ ಸಿನಿಮಾ ಮಾಡುವುದಿಲ್ಲವಂತೆ. ಇದಕ್ಕೆ ಕಾರಣ ಏನು ಎಂಬುದನ್ನು ಅವರು ಕೊಟ್ಟಿದ್ದಾರೆ.
ಇದನ್ನು ಓದಿ: ಸುದೀಪ್ ಸರ್ ಹೇಳಿದ್ದು ಜನ ಕನ್ಸಿಡರ್ ಮಾಡಲ್ಲ: ಚೈತ್ರಾ ಕುಂದಾಪುರ!
ಕಳೆದ ವರ್ಷ ರಾಮ್ ಚರಣ್ ಅವರು ಹಾಲಿವುಡ್ ಹೋಗುತ್ತಾರೆ ಎನ್ನುವ ಸುದ್ದಿ ಹರಿದಾಡಿತ್ತು. ಅವರಿಗೆ ಈ ಬಗ್ಗೆ ಪ್ರಶ್ನೆ ಕೂಡ ಎದುರಾಗಿತ್ತು. ಅವರು ವಿಶೇಷ ಈವೆಂಟ್ಗಾಗಿ ಜಮ್ಮು ಮತ್ತು ಕಾಶ್ಮೀರ ತೆರಳಿದ್ದರು. ಅವರಿಗೆ ಅಲ್ಲಿ ಹಾಲಿವುಡ್ನಲ್ಲಿ ಕೆಲಸ ಮಾಡುವ ಬಗ್ಗೆ ಕೇಳಲಾಗಿತ್ತು.
‘ನಾನು ಭಾರತದಲ್ಲೇ ಹೆಚ್ಚು ಅನ್ವೇಷಣೆ ಮಾಡಬೇಕು. ನಾನು ನನ್ನ ಸಂಸ್ಕೃತಿಗೆ ಅಂಟಿಕೊಳ್ಳುತ್ತೇನೆ. ನಮ್ಮ ಭಾರತೀಯ ಭಾವನೆಗಳು ಎಷ್ಟು ಪ್ರಬಲವಾಗಿವೆ ಎಂಬುದನ್ನು ನಾನು ಜನರಿಗೆ ತಿಳಿಸಲು ಬಯಸುತ್ತೇನೆ. ನಮ್ಮ ಸಂಸ್ಕೃತಿ ತುಂಬಾ ಪ್ರಬಲವಾಗಿದೆ. ನಮ್ಮ ಕಥೆಗಳಲ್ಲಿ ಸಾಕಷ್ಟು ಘನತೆ ಇದೆ. ದಕ್ಷಿಣ ಭಾರತದ ಅಥವಾ ಉತ್ತರ ಭಾರತದ ಸಿನಿಮಾ ಎಂದಲ್ಲ. ಇದು ಭಾರತೀಯ ಮಣ್ಣಿನ ಕಥೆಗಳ ಬಗ್ಗೆ. ಈ ಕಥೆಗಳನ್ನು ಹೇಳಬೇಕು’ ಎಂದಿದ್ದರು ರಾಮ್ ಚರಣ್.