ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಇಂದನಿಂದ ಮುಂಬೈನ ಜಿಯೋ ವರ್ಲ್ಡ್ ಸೆಂಟರ್ನಲ್ಲಿ ಅಂಬಾನಿ ಮಗ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಗುರು ಹಿರಿಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮದುವೆಯಾಗಲಿದೆ. 3 ದಿನದ ಮದುವೆ ಕಾರ್ಯಕ್ರಮವನ್ನು ಅಂಬಾನಿ ತಮ್ಮ ಮನೆಯಲ್ಲೇ ನಡೆಸಲಿದ್ದಾರೆ. ಮುಂಬೈಯಲ್ಲಿರುವ 27 ಅಂತಸ್ತಿನ ಭವ್ಯ ಮಹಲಿನಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಅಂಬಾನಿ ಕಿರಿಯ ಪುತ್ರನ ಮದುವೆಗೆ ದೇಶ ವಿದೇಶಗಳಿಂದ ದೊಡ್ಡ, ದೊಡ್ಡ ಗಣ್ಯರು ಆಗಮಿಸುತ್ತಿದ್ದಾರೆ. ಮದುವೆಗೆ ಬಂದ ಅತಿಥಿಗಳನ್ನು ಕರೆದುಕೊಂಡು ಬರಲು ಹಾಗೂ ಅವರನ್ನು ಬಿಟ್ಟು ಬರಲು ಮುಖೇಶ್ ಅಂಬಾನಿ ಮೂರು ಫಾಲ್ಕನ್-2000 ಜೆಟ್ಗಳನ್ನು ಬಾಡಿಗೆಗೆ ಪಡೆದುಕೊಂಡಿದ್ದಾರಂತೆ. ಹಾಗೂ 100ಕ್ಕೂ ಹೆಚ್ಚು ಖಾಸಗಿ ವಿಮಾನಗಳಲ್ಲಿ ಸೀಟ್ ಬುಕ್ ಮಾಡಿದ್ದಾರೆ. ಮುಂಬೈನಲ್ಲಿ ನಡೆಯಲಿರುವ ಅಂಬಾನಿ ವಿವಾಹದಲ್ಲಿ ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಮತ್ತು ಯುಕೆ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಪಾಲ್ಗೊಳ್ಳುವ ಸಾಧ್ಯತೆಯಿದೆ.