ಹಲವಾರು ಪೂರ್ವ ವಿವಾಹ ಸಮಾರಂಭಗಳು ಮತ್ತು ಆಚರಣೆಗಳ ನಂತರ ಏಷ್ಯಾದ ಅತಿ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಮಗ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ನಿನ್ನೆ ರಾತ್ರಿ ಅದ್ದೂರಿಯಾಗಿ ಮದುವೆಯಾಗಿದ್ದಾರೆ. ಮುಂಬೈನ ಜಿಯೋ ವರ್ಲ್ಡ್ ಸೆಂಟರ್ನಲ್ಲಿ ಈ ಅದ್ಧೂರಿ ಸಮಾರಂಭವನ್ನು ನಡೆಸಲಾಯಿತು. ಅವರ ಮದುವೆಯಲ್ಲಿ ರಾಜಕೀಯ, ಕ್ರೀಡೆ, ಸಿನಿಮಾ ಮತ್ತು ಉದ್ಯಮದ ಅನೇಕ ಗಣ್ಯರು ಭಾಗವಹಿಸಿದ್ದರು. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರು 2022ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ವರ್ಷ ಮಾರ್ಚ್ನಲ್ಲಿ ಪ್ರಾರಂಭವಾದ ವಿವಾಹಪೂರ್ವ ಸಂಭ್ರಮಾಚರಣೆಯ ಬಳಿಕ ಅವರಿಬ್ಬರೂ ಜುಲೈ 12ರಂದು ರಾತ್ರಿ ಅಧಿಕೃತವಾಗಿ ವಿವಾಹವಾಗಿದ್ದಾರೆ. ಈ ಮದುವೆಯನ್ನು ಈ ಶತಮಾನದ ಅತ್ಯಂತ ಅದ್ದೂರಿ ಮದುವೆ ಎನ್ನಲಾಗುತ್ತಿದೆ. ವಿವಾಹದ ನಂತರ 3 ಕಾರ್ಯಕ್ರಮಗಳು ನಡೆಯಲಿವೆ. ಜುಲೈ 13ರಂದು ‘ಶುಭ್ ಆಶೀರ್ವಾದ’, ‘ಮಂಗಲ್ ಉತ್ಸವ’ ನಡೆಯಲಿದೆ. ಜುಲೈ 14 ರಂದು ಮದುವೆಯ ಆರತಕ್ಷತೆ ಮತ್ತು ಜುಲೈ 15 ರಂದು ಮುಂಬೈನಲ್ಲಿ ಮತ್ತೊಂದು ಆರತಕ್ಷತೆ ಕಾರ್ಯಕ್ರಮ ನೆರವೇರಲಿದೆ.