ನಟ ದರ್ಶನ್ ಅಭಿಮಾನಿಯೊಬ್ಬರು ಆಷಾಢದ ಶುಕ್ರವಾರದಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ದರ್ಶನ್ ಫೋಟೋ ಹಿಡಿದು ಹೋಗಿದ್ದಾರೆ. ಪ್ರತಿ ವರ್ಷವು ನಟ ದರ್ಶನ್ ಆಷಾಢ ಶುಕ್ರವಾರದಂದು ಚಾಮುಂಡಿ ಬೆಟ್ಟಕ್ಕೆ ತಪ್ಪದೇ ಹೋಗಿ ದರ್ಶನ ಪಡೆದುಕೊಳ್ಳುತ್ತಿದ್ದರು. ಆದರೆ ಇದೀಗ ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ದರ್ಶನ್ಗೆ ಈ ಬಾರಿಯ ಆಷಾಢದ ಚಾಮುಂಡಿ ದೇವಿ ದರ್ಶನ ತಪ್ಪಬಾರದೆನ್ನುವ ಉದ್ದೇಶದಿಂದ ದರ್ಶನ್ ಫೋಟೋ ಹಿಡಿದು ಬಂದ ಅಭಿಮಾನಿ ಮಹಿಳೆಯೊಬ್ಬರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಇದೇ ವೇಳೆ ಎಚ್ಚೆತ್ತುಕೊಂಡ ಪೊಲೀಸರು ಯಾವುದೇ ಗಲಾಟೆಗಳು ನಡೆಯದಂತೆ ಫೋಟೋ ತಂದಿದ್ದ ಮಹಿಳೆಯನ್ನು ದರ್ಶನಕ್ಕೆ ಬಿಡದೇ ವಾಪಸ್ ಕಳುಹಿಸಿದ್ದಾರೆ ಎನ್ನಲಾಗಿದೆ. ಸದ್ಯ ದರ್ಶನ್ ಫೋಟೋ ಹಿಡಿದು ಬಂದ ಮಹಿಳೆ ಎಲ್ಲರ ಗಮನ ಸೆಳೆದ್ದಾರೆ.