ಸ್ಯಾಂಡಲ್ವುಡ್ನ ನಾಯಕಿ ನಭಾ ನಟೇಶ್ ಮತ್ತೆ ಹೊಳೆಯುತ್ತಿದ್ದಾರೆ. ವಜ್ರಕಾಯ ಚಿತ್ರದಲ್ಲಿ ನಭಾ ನಟೇಶ್ ಸೂಪರ್ ಆಗಿಯೇ ಕಾಣಿಸಿಕೊಂಡಿದ್ದರು. ಶಿವಣ್ಣನ ಮುಂದೆ ನಿಂತು ಪಟಾ ಪಟಾ ಅಂತಲೇ ಡೈಲಾಗ್ ಹೇಳಿದ್ದರು. ಆದರೆ, ಅದ್ಯಾಕೋ ಏನೋ..? ಈ ಬೆಡಗಿ ಟಾಲಿವುಡ್ಗೆ ಹಾರಿಯೇ ಬಿಟ್ರು.
ಟಾಲಿವುಡ್ನಲ್ಲಿ ಈ ನಾಯಕಿ ಒಳ್ಳೆ ಹೆಸರು ಮಾಡಿದ್ದಾರೆ. ಇಸ್ಮಾರ್ಟ್ ಶಂಕರ್ ಚಿತ್ರದಲ್ಲಿ ಸೂಪರ್ ಆಗಿಯೇ ಸ್ಕೋರ್ ಮಾಡಿದ್ದಾರೆ. ಟಾಲಿವುಡ್ ಸಿನಿಮಾ ಪ್ರೇಮಿಗಳ ಹೃದಯವನ್ನ ಈ ಚಿತ್ರದ ಮೂಲಕವೇ ಕದ್ದು ಬಿಟ್ಟಿದ್ದಾರೆ. ಆದರೆ, ಲಕ್ ಇಸ್ಮಾರ್ ಶಂಕರ್-2 ಚಿತ್ರದ ವಿಚಾರಕ್ಕೆ ಹೊಡೆಯಲಿಲ್ಲ ನೋಡಿ.
ಇಸ್ಮಾರ್ಟ್-2 ಚಿತ್ರದ ಮುಂಚೇನೆ ನಭಾ ನಟೇಶ್ಗೆ ಆ್ಯಕ್ಸಿಡೆಂಟ್ ಆಗಿತ್ತು. ಹಾಗಾಗಿಯೇ ನಭಾ ಮುಖಕ್ಕೂ ಗಂಭೀರ ಗಾಯಕವೂ ಆಗಿತ್ತು. ಇದರಿಂದ ಮುಖದ ರೂಪವೇ ಕಳೆದು ಹೋಗಿತ್ತು. ಆದರೆ, ಈಗ ಆ ರೂಪ ಮತ್ತೆ ಮರಳುತ್ತಿದೆ ಅನಿಸುತ್ತಿದೆ. ಕನ್ನಡದ ವಜ್ರಕಾಯ, ಲೀ, ಸಾಹೇಬ ಚಿತ್ರದಲ್ಲಿ ಯಾವ ಚೆಲುವು ಇತ್ತೋ ಅದೇ ವಾಪಾಸ್ ಬಂದಂತೆ ಕಾಣಿಸುತ್ತಿದೆ.
ನಭಾ ನಟೇಶ್ ಸದ್ಯ ಕನ್ನಡದ ಯಾವುದೇ ಚಿತ್ರವನ್ನ ಒಪ್ಪಿಲ್ಲ. ಬದಲಾಗಿ ಟಾಲಿವುಡ್ನಲ್ಲಿಯೇ ಸಿನಿಮಾ ಪ್ರೊಜೆಕ್ಟ್ ಒಪ್ಪಿಕೊಳ್ಳುತ್ತಿದ್ದಾರೆ. ಈ ಮೂಲಕ ಮತ್ತೆ ಟಾಲಿವುಡ್ನಲ್ಲಿಯೇ ರೀ-ಎಂಟ್ರಿ ಆಗುತ್ತಿದ್ದಾರೆ. ಸ್ವಯಂಭು ಅನ್ನೋ ಚಿತ್ರದಲ್ಲಿಯೇ ನಭಾ ನಟೇಶ್ ಅಭಿನಯಿಸುತ್ತಿದ್ದಾರೆ.
ಇದರ ಮಧ್ಯೆ ಹೊಸ ರೀತಿ ಫೋಟೋ ಶೂಟ್ಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಮಾಡ್ರನ್ ಮತ್ತು ಸಿಂಪಲ್ ಡ್ರೆಸ್ ತೊಟ್ಟು ಮಿಂಚುತ್ತಲೇ ಇರ್ತಾರೆ. ಹಾಗೆ ತಮ್ಮ ಈ ಮೊದಲಿನ ಚೆಲುವಿಗೂ ಮರುಳುತ್ತಿದ್ದಾರೆ ಅನಿಸುತ್ತದೆ. ಕಾರಣ, ಈಗೀನ ಫೋಟೋ ಶೂಟ್ನ ಫೋಟೋಗಳು ಆ ಸತ್ಯವನ್ನ ಈಗ ಹೇಳುತ್ತಿವೆ.
ನಭಾ ನಟೇಶ್ ಸಿನಿಮಾ ಜೀವನದಲ್ಲಿ ಕನ್ನಡದ ಮೂರೇ ಮೂರು ಸಿನಿಮಾಗಳು ಇವೆ. ಆದರೆ, ತೆಲುಗು ಭಾಷೆಯ ಸಿನಿಮಾಗಳ ಲೆಕ್ಕ ಕನ್ನಡಕ್ಕೆ ಹೋಲಿಸಿದ್ರೆ ಜಾಸ್ತಿ ಇದೆ. ಡಿಸ್ಕೋ ರಾಜಾ, ಡಾರ್ಲಿಂಗ್ ಸೇರಿದಂತೆ ಒಟ್ಟು 7 ತೆಲುಗು ಸಿನಿಮಾಗಳಲ್ಲಿಯೇ ನಭಾ ನಟೇಶ್ ಅಭಿನಯಿಸಿದ್ದಾರೆ.
ನಭಾ ನಟೇಶ್ ಸದ್ಯ ಒಂದು ಸ್ಪೆಷಲ್ ಫೋಟೋ ಶೂಟ್ ಮಾಡಿಸಿದ್ದಾರೆ. ಈ ಫೋಟೋ ಶೂಟ್ನಲ್ಲಿ ನಭಾ ನಟೇಶ್ ಬೋಲ್ಡ್ ಅನಿಸೋ ಡ್ರೆಸ್ ತೊಟ್ಟಿದ್ದಾರೆ. ಸುಂದರ ನಗು ಅನ್ನೋ ಹಾಗೇನೆ ಒಂದು ಸುಂದರ ಸ್ಮೈಲ್ ಕೂಡ ಕೊಟ್ಟಿದ್ದಾರೆ. ಇದನ್ನ ನೋಡಿದವ್ರು ಒಳ್ಳೆ ಮಾತುಗಳನ್ನೆ ಕಾಮೆಂಟ್ ಬಾಕ್ಸ್ನಲ್ಲಿ ಬರೆದಿದ್ದಾರೆ.
ನಭಾ ನಟೇಶ್ ಈ ಒಂದಷ್ಟು ಫೋಟೋಗಳ ಜೊತೆಗೆ ಒಂದೇ ಒಂದು ಲೈನ್ ಕೂಡ ಬರೆದಿದ್ದಾರೆ. “A smile is sunshine for the soul” ಅಂತಲೇ ಈ ಲೈನ್ ಇದೆ. ಈ ಮೂಲಕ ಇಂಗ್ಲೀಷ್ನಲ್ಲಿ ತಮ್ಮ ಆತ್ಮದ ಕಥೆ ಹೇಳಿದಂತೆನೂ ಇದೆ ನೋಡಿ. ಒಟ್ಟಾರೆ, ನಭಾ ನಟೇಶ್ ಸದ್ಯ ಈ ಫೋಟೋ ಶೂಟ್ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.