ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟಿರೋ ಆಲ್ರೌಂಡರ್ ನಿತೀಶ್ ರೆಡ್ಡಿ ಸದ್ಯದ ಸೆನ್ಸೇಷನ್. ಬ್ಯಾಟಿಂಗ್, ಬೌಲಿಂಗ್ ಎರಡೂ ವಿಭಾಗಗಳಲ್ಲಿ ಮಿಂಚಿನ ಪರ್ಫಾಮೆನ್ಸ್ ನೀಡಿದ ಆಂಧ್ರದ ಈ ಯಂಗ್ ಬಾಯ್, ಡೆಬ್ಯೂ ಸರಣಿಯಲ್ಲೇ ಫ್ಯೂಚರ್ ಸ್ಟಾರ್ ಅನ್ನೋದನ್ನ ನಿರೂಪಿಸಿದ್ದಾರೆ. 21ನೇ ವಯಸ್ಸಿನಲ್ಲೇ ಮೋಡಿ ಮಾಡಿರುವ ಈ ಯಂಗ್ಸ್ಟರ್ಸ್ ಸಕ್ಸಸ್ ಸೀಕ್ರೆಟ್ ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ. ಟೀಮ್ ಇಂಡಿಯಾದ ದಿಗ್ಗಜರು ಯುವ ನಿತೀಶ್ ಯಶಸ್ಸಿಗೆ ಕಾರಣ ಆಗಿದ್ದು ಹೇಗೆ?.
ಭಾರತೀಯ ಕ್ರಿಕೆಟ್ನಲ್ಲಿ ಯುವ ಆಲ್ರೌಂಡರ್ ನಿತೀಶ್ ರೆಡ್ಡಿಯ ಹವಾ ಜೋರಾಗಿದೆ. ಬಾಂಗ್ಲಾ ಟೈಗರ್ಸ್ ವಿರುದ್ಧ ಘರ್ಜಿಸಿದ ಯಂಗ್ಸ್ಟರ್, ಟೀಮ್ ಇಂಡಿಯಾದ ಫ್ಯೂಚರ್ ಸ್ಟಾರ್ ಎನಿಸಿಕೊಂಡಿದ್ದಾರೆ. ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ಗಮನ ಸೆಳೆದ ಈ ಕ್ರಿಕೆಟರ್ ಸದ್ಯದ ಸೆನ್ಸೇಷನ್. 18ನೇ ಸೀಸನ್ ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದ್ರಾಬಾದ್ ಪರ ನಿತೀಶ್ ರೆಡ್ಡಿ ಧೂಳೆಬ್ಬಿಸಿದ್ದರು. ಐಪಿಎಲ್ ಅಖಾಡದಲ್ಲಿ ಸಾಲಿಡ್ ಪರ್ಫಾಮೆನ್ಸ್ ನೀಡಿ ಗಮನ ಸೆಳೆದಿದ್ದರು. ಪರಿಣಾಮ ಟಿ20 ವಿಶ್ವಕಪ್ ಬಳಿಕ ನಡೆದ ಜಿಂಬಾಬ್ವೆ ಪ್ರವಾಸದ ತಂಡದಲ್ಲಿ ಚಾನ್ಸ್ ಗಿಟ್ಟಿಸಿಕೊಂಡರು. ಈಗ ಮುಕ್ತಾಯವಾದ ಬಾಂಗ್ಲಾ ಸರಣಿಯಲ್ಲ.. ಜುಲೈನಲ್ಲಾ ಜಿಂಬಾಬ್ವೆ ಟೂರ್ನಲ್ಲೇ ಇಂಡಿಯಾಗೆ ನಿತೀಶ್ ಡೆಬ್ಯೂ ಮಾಡಬೇಕಿತ್ತು. ಆದ್ರೆ, ಅದೃಷ್ಟ ಕೈ ಕೊಟ್ಟಿತ್ತು.
24 ಗಂಟೆಯಾಗಿರಲಿಲ್ಲ.. ಟೂರ್ನಿಂದಲೇ ಔಟ್.!
ಜಿಂಬಾಬ್ವೆ ಟೂರ್ಗೆ ನಿತೀಶ್ ರೆಡ್ಡಿ ಸೆಲೆಕ್ಟ್ ಆಗಿ 24 ಗಂಟೆ ಆಗಿರಲಿಲ್ಲ. ಅದಾಗಲೇ ದುರಾದೃಷ್ಟ ಬೆನ್ನು ಬಿದ್ದಿತ್ತು. ಮೊದಲ ಬಾರಿ ಟೀಮ್ ಇಂಡಿಯಾಗೆ ಆಯ್ಕೆಯಾದ ಸಂಭ್ರಮದಲ್ಲಿದ್ದಾಗಲೇ ಶಾಕ್ ಎದುರಾಗಿತ್ತು. ಇಂಜುರಿಗೆ ತುತ್ತಾದ ಪರಿಣಾಮ ನಿತೀಶ್ ಟೂರ್ನಿಂದಲೇ ಹೊರ ಬಿದ್ದರು. ಬೇರೆಯವರಾಗಿದ್ರೆ, ಮಾನಸಿಕ ಕುಗ್ಗಿ ಹೋಗ್ತಿದ್ರೋ ಏನೋ.. ಆದ್ರೆ, ನಿತೀಶ್ ಅದಾದ 3 ತಿಂಗಳ ಅವಧಿಯಲ್ಲೇ ಕಂಪ್ಲೀಟ್ ಫಿಟ್ ಆಗಿ ಮತ್ತೆ ಟೀಮ್ ಇಂಡಿಯಾದಲ್ಲಿ ಸ್ಥಾನಗಿಟ್ಟಿಸಿಕೊಂಡು ಧೂಳೆಬ್ಬಿಸಿದ್ದಾರೆ.
ಕೊಹ್ಲಿ-ಹಾರ್ದಿಕ್ ಹಾದಿಯಲ್ಲಿ ನಿತೀಶ್ ರೆಡ್ಡಿ ಪಯಣ.!
ವಿಶ್ವಾದ್ಯಂತ ಅದೆಷ್ಟೋ ಯುವ ಕ್ರಿಕೆಟಿಗರ ಪಾಲಿನ ಸ್ಪೂರ್ತಿಯ ಚಿಲುಮೆ ಕೊಹ್ಲಿ, ಈ ನಿತೀಶ್ ರೆಡ್ಡಿಗೂ ರೋಲ್ ಮಾಡೆಲ್. ಕೊಹ್ಲಿಯ ಆಟವನ್ನ ಮಾತ್ರವಲ್ಲ.. ಫಿಟ್ನೆಸ್ ವಿಚಾರದಲ್ಲೂ ಕಿಂಗ್ ಕೊಹ್ಲಿಯಷ್ಟೇ ಕಟ್ಟುನಿಟ್ಟು. ಕೊಹ್ಲಿಯನ್ನ ಸ್ಪೂರ್ತಿಯಾಗಿ ತೆಗೆದುಕೊಂಡ ನಿತೀಶ್ ರೆಡ್ಡಿ ಬಿಡುವು ಸಿಕ್ಕಾಗ ಜಿಮ್ನಲ್ಲಿಯೇ ಕಾಲ ಕಳೆತಾರಂತೆ. ವರ್ಕೌಟ್ ಮಾಡ್ತಾ ಬೆವರಿಳಿಸೋ ನಿತೀಶ್ ರೆಡ್ಡಿ, ದೇಹವನ್ನ ಫಿಟ್ ಆಗಿರಿಸಿಕೊಳ್ಳುವತ್ತ ಹೆಚ್ಚು ಗಮನ ಹರಿಸ್ತಾರೆ. ಈ ಫಿಟ್ನೆಸ್ ಧ್ಯಾನ ಇಂದು ನಿತೀಶ್ ರೆಡ್ಡಿ ಸಕ್ಸಸ್ನ ಗಿಫ್ಟ್ ನೀಡಿದೆ.
ನಿತೀಶ್ಗೆ ಹಾರ್ದಿಕ್ ಹೇಳಿಕೊಟ್ಟಿದ್ರು ಡಯಟ್ ಪ್ಲಾನ್.!
ಆಲ್ರೌಂಡ್ ಪರ್ಫಾಮೆನ್ಸ್ನಿಂದ ಧೂಳೆಬ್ಬಿಸಿದ ಬಳಿಕ ನಿತೀಶ್ ರೆಡ್ಡಿಯನ್ನ ಹಾರ್ದಿಕ್ ಪಾಂಡ್ಯ ಕಾಂಪಿಟೇಟರ್ ಎಂದೇ ಹೇಳಲಾಗ್ತಿದೆ. ಅಸಲಿಗೆ ಈ ನಿತೀಶ್ ರೆಡ್ಡಿಗೆ ಹಾರ್ದಿಕ್ ಪಾಂಡ್ಯನೇ ಸ್ಪೂರ್ತಿ. ಹಾರ್ದಿಕ್ ಹೇಳಿಕೊಟ್ಟ ಪಾಠವೇ ನಿತೀಶ್ ರೆಡ್ಡಿಯನ್ನ ಯಶಸ್ಸಿನ ಹಾದಿಯಲ್ಲಿ ನಡೆಯುವಂತೆ ಮಾಡಿದೆ. ಫಿಟ್ನೆಸ್ಗೆ ಕೊಹ್ಲಿ ಸ್ಪೂರ್ತಿಯಾದ್ರೆ, ಡಯಟ್ ವಿಚಾರದಲ್ಲಿ ನಿತೀಶ್ ಫಾಲೋ ಮಾಡ್ತಿರೋದು ಹಾರ್ದಿಕ್ ಪಾಂಡ್ಯರನ್ನ.
ಹಿಂದೊಮ್ಮೆ ಹಾರ್ದಿಕ್ ಪಾಂಡ್ಯರನ್ನ ಭೇಟಿಯಾದಾಗ ನಿತೀಶ್ ರೆಡ್ಡಿ ಡಯಟ್ ರೂಟಿನ್ ಬಗ್ಗೆ ಮಾತುಕತೆ ನಡೆಸಿದ್ರಂತೆ. ಆಗ ಹಾರ್ದಿಕ್ ಪಾಂಡ್ಯ ತಾವು ಫಾಲೋ ಮಾಡೋ ಡಯಟ್ ಪ್ಲಾನ್ನ ಮಾಹಿತಿ ನೀಡಿದ್ರಂತೆ. ಅಂದಿನಿಂದ ಇಂದಿನವರೆಗೂ ಹಾರ್ದಿಕ್ರ ಡಯಟ್ ಪ್ಲಾನ್ನ ನಿತೀಶ್ ರೆಡ್ಡಿ ಫಾಲೋದಲ್ಲಿದ್ದಾರೆ. ಈ ಡಯಟ್ ಪ್ಲಾನ್ ನಿತೀಶ್ ರೆಡ್ಡಿ ಫಿಟ್ನೆಸ್ ಹಿಂದಿನ ಸೀಕ್ರೆಟ್.
ಕೊಹ್ಲಿ-ಹಾರ್ದಿಕ್ರನ್ನ ಸ್ಪೂರ್ತಿಯಾಗಿ ತೆಗೆದುಕೊಂಡಿರುವ ನಿತೀಶ್ ರೆಡ್ಡಿ, ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟ ಸರಣಿಯಲ್ಲೇ ಭವಿಷ್ಯದ ಭರವಸೆಯನ್ನ ಹುಟ್ಟು ಹಾಕಿದ್ದಾರೆ. ಬ್ಯಾಟಿಂಗ್, ಬೌಲಿಂಗ್ ಅಷ್ಟೇ ಯಾಕೆ..? ಫಿಲ್ಡಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಇದೇ ಫಾರ್ಮ್ ಹಾಗೂ ಫಿಟ್ನೆಸ್ ಮೆಂಟೇನ್ ಮಾಡಿದ್ರೆ, ಮುಂದೆ ವಿಶ್ವದ ಬೆಸ್ಟ್ ಆಲ್ರೌಂಡರ್ ಆಗೋದ್ರಲ್ಲಿ ಅನುಮಾನವೇ ಇಲ್ಲ.