ನಥಿಂಗ್ ಮೊಬೈಲ್ ಸಂಸ್ಥೆಯ ಸಬ್ಬ್ರ್ಯಾಂಡ್ ಆಗಿರುವ CMF ಕಂಪನಿಯು ತನ್ನ ಬಹುನಿರೀಕ್ಷಿತ CMF Phone 1 ಸ್ಮಾರ್ಟ್ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿ ಸದ್ದು ಮಾಡಿದೆ. ನೂತನವಾಗಿ ಲಗ್ಗೆ ಇಟ್ಟಿರುವ ಈ ಫೋನ್ ಡಿಸೈನ್ ಹಾಗೂ ಪ್ರೈಸ್ಟ್ಯಾಗ್ನಿಂದ ಈಗಾಗಲೇ ಮೊಬೈಲ್ ಪ್ರಿಯರ ಚಿತ್ತ ಸೆಳೆದಿದೆ.ಅಂದಹಾಗೆ ಈ ಮೊಬೈಲ್ ಇಂದು ಫ್ಲಿಪ್ಕಾರ್ಟ್ ಇ ಕಾಮರ್ಸ್ ಪ್ಲಾಟ್ಫಾರ್ಮ್ ಮೂಲಕ ಮೊದಲ ಮಾರಾಟ ಪ್ರಾರಂಭ ಮಾಡಲಿದೆ. ಇನ್ನು ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಚಿಪ್ಸೆಟ್ ಪ್ರೊಸೆಸರ್ ಪಡೆದಿದೆ.
CMF ಸಂಸ್ಥೆಯ CMF Phone 1 ಸ್ಮಾರ್ಟ್ಫೋನ್ ಇಂದು ಫ್ಲಿಪ್ಕಾರ್ಟ್ ಇ ಕಾಮರ್ಸ್ ಮೂಲಕ ಮಧ್ಯಾಹ್ನ 12 ಗಂಟೆಗೆ ಫಸ್ಟ್ ಸೇಲ್ ಶುರು ಮಾಡಿದೆ. ಈ ಫೋನ್ 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್ಅಪ್ ಪಡೆದಿದ್ದು, ಜೊತೆಗೆ ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸೌಲಭ್ಯದಲ್ಲಿ ಇದೆ. ಇನ್ನು ಈ ಮೊಬೈಲ್ 6GB RAM + 128GB ಹಾಗೂ 8GB RAM + 128GB ವೇರಿಯಂಟ್ ಆಯ್ಕೆಗಳಲ್ಲಿ ಲಭ್ಯ. ಹಾಗೆಯೇ ಈ ಮೊಬೈಲ್ ಸೆಲ್ಫಿ ಕ್ಯಾಮೆರಾವು 16 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಅಲ್ಲದೇ ಇದು 33W ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ. ಅಲ್ಲದೇ ಗ್ರಾಹಕರು ಈ ಫೋನ್ ಬ್ಲ್ಯಾಕ್, ಲೈಟ್ ಗ್ರೀನ್, ಬ್ಲೂ ಮತ್ತು ಆರೆಂಜ್ ಕಲರ್ ಆಯ್ಕೆಯಲ್ಲಿ ಈ ಫೋನ್ ಖರೀದಿಸಬಹುದು.