ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೇಲೆ ನಟಿ ಪವಿತ್ರಾ ಗೌಡ, ದರ್ಶನ್ ಸೇರಿಂದತೆ 17 ಮಂದಿ ಜೈಲು ವಾಸದಲ್ಲಿದ್ದಾರೆ. ಸುಮಾರು 55ದಕ್ಕೂ ಹೆಚ್ಚು ದಿನಗಳಿಂದ ಪರಪ್ಪನ ಅಗ್ರಹಾರದಲ್ಲಿ ಇರುವ ಪವಿತ್ರಾ ಗೌಡರನ್ನು ಆಗಾಗ ಪುತ್ರಿ ನೋಡಲು ಅಜ್ಜಿ ಜೊತೆ ಹೋಗುತ್ತಾರೆ. ತಾಯಿಯನ್ನು ತಬ್ಬಿಕೊಂಡಿರುವ ಫೋಟೋ ಅಪ್ಲೋಡ್ ಮಾಡಿ ಬರೆದಿರುವ ಭಾವುಕ ಸಾಲುಗಳು ವೈರಲ್ ಆಗುತ್ತಿದೆ.
” ನನ್ನ ಪ್ರೇರಣೆ ಅವಳು, ಎಂತಹ ಪರಿಸ್ಥಿತಿ ಬಂದರೂ ಹೇಗೆ ಗಟ್ಟಿಯಾಗಿರಬೇಕೆಂದು ಕಲಿಸುತ್ತಾಳೆ. ಅವಳು ಯಾವಾಗಲೂ ತುಂಬಾ ಮುಕ್ತ ಮತ್ತು ಬೆಂಬಲ ನೀಡುತ್ತಾಳೆ. ಅವಳು ಶತಕೋಟಿಯಲ್ಲಿ ಒಬ್ಬಳು ಮತ್ತು ಅವಳಂತಹ ಮನುಷ್ಯನನ್ನು ನಾನು ಎಂದಿಗೂ ಕಾಣುವುದಿಲ್ಲ. ಅವರಂತಹ ತಾಯಿಯನ್ನು ಹೊಂದಲು ನಾನು ನಿಜವಾಗಿಯೂ ತುಂಬಾ ಕೃತಜ್ಞನಾಗಿದ್ದೇನೆ ಮತ್ತು ಅದೃಷ್ಟಶಾಲಿಯಾಗಿದ್ದೇನೆ .ನಾನು ಜೀವನದಲ್ಲಿ ಎಂದೂ ಆಕೆಯಂತೆ ವ್ಯಕ್ತಿ ಸಿಗುವುದಿಲ್ಲ. ನಿಜಕ್ಕೂ ಆಕೆಯನ್ನು ತಾಯಿಯಾಗಿ ಪಡೆಯುವುದಕ್ಕೆ ನಾನು ಪುಣ್ಯ ಮಾಡಿದ್ದೆ. ಐ ಲವ್ ಯು ಸೋ ಮಚ್ ಮಮ್ಮಾ” ಎಂದಿದ್ದಾಳೆ ಖುಷಿ. ತನ್ನ ತಾಯಿ ಸೃಷ್ಟಿಸಿರುವ ಫ್ಯಾಷನ್ ಬೋಟಿಕ್ ರೆಡ್ ಕಾರ್ಪೆಟ್ 777 ಸ್ಟುಡಿಯೋವನ್ನು ಚಿಕ್ಕ ವಯಸ್ಸಿನಲ್ಲೇ ತಾನು ಜವಬ್ದಾರಿ ಹೊತ್ತು ನೋಟಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಇದರಿಂದಾಗಿ ತನ್ನಮ್ಮ ಹೇಳಿದ ಮಾತುಗಳನ್ನು ನೆನಪಿಸಿಕೊಳ್ಳುತ್ತಾ ಭಾವುಕ ಪೋಸ್ಟ್ ಮಾಡಿಕೊಂಡು ಏನೇ ಪರಿಸ್ಥತಿ ಬಂದರೂ ಗಟ್ಟಿಯಾಗಿರುತ್ತೇನೆ ಎಂದು ಎಲ್ಲವನ್ನೂ ಎದುರಸುತ್ತಿದ್ದಾರೆ.